Rotary Shimoga ಶಿವಮೊಗ್ಗದ ರಾಜೇಂದ್ರನಗರದಲ್ಲಿರುವ ರೋಟರಿ ಪೂರ್ವ ವಿದ್ಯಾ ಸಂಸ್ಥೆಯು ತನ್ನ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತನಗೆ ಕರೆದು ಕೆಲಸವನ್ನು ಕೊಟ್ಟು, ಮಕ್ಕಳಿಗೆ ಉತ್ತಮ ಬೋಧನೆ ಮಾಡುವ ವಾತಾವರಣವನ್ನು ಒದಗಿಸಿಕೊಟ್ಟು, ತನ್ನ ಜೀವನ ನಿರ್ವಹಣೆಗೆ ಶಾಶ್ವತ ಆಸರೆಯನ್ನು ಕಲ್ಪಿಸಿ, ಶಿಷ್ಯ ಕೋಟಿಯ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಬೆಳೆಯಲು ಅವಕಾಶ ಮಾಡಿಕೊಡುವುದರ ಜೊತೆಗೆ ತನ್ನಲ್ಲಿರುವ ಎಲ್ಲಾ ಪ್ರತಿಭೆಗಳನ್ನು ಗುರುತಿಸಿ ಅದನ್ನು ವೃದ್ಧಿಸಿಕೊಳ್ಳಲು ಅನುವು ಮಾಡಿಕೊಟ್ಟು ಶಿಕ್ಷಕ ವೃತ್ತಿಯಲ್ಲಿ ಸುಮಾರು ೩೭ ವರ್ಷಗಳ ಕಾಲ ಶಿವಮೊಗ್ಗ ನಗರದಲ್ಲಿಯೇ ಕಾರ್ಯನಿರ್ವಹಿಸಲು ಅವಕಾಶ ಕೊಟ್ಟಿರುವುದು ತನಗೆ ಅತ್ಯಂತ ನೆಮ್ಮದಿ ತಂದಿದೆ ಎಂದು ಸೇವೆಯಿಂದ ನಿವೃತ್ತರಾದ ಶ್ರೀಮತಿ ಜಯಶೀಲಾ ಬಾಯಿ ಎಸ್., ಇವರು ಅಭಿಪ್ರಾಯ ಪಟ್ಟರು.
ಅವರು ರೋಟರಿ ಪೂರ್ವ ಎಜುಕೇಷನಲ್ & ಛಾರಿಟಬಲ್ ಟ್ರಸ್ಟ್ (ರಿ.,), ರಾಜೇಂದ್ರನಗರ ಶಿವಮೊಗ್ಗ ಇವರು ತನ್ನ ನಿವೃತ್ತಿ ಸಲುವಾಗಿ ಏರ್ಪಡಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ಟ್ರಸ್ಟ್ ವತಿಯಿಂದ ಹಾಗೂ ಇತರ ಸಂಘ ಸಂಸ್ಥೆ, ಸಹದ್ಯೋಗಿಗಳು ಹಾಗೂ ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ರೋಟರಿ ಪೂರ್ವ ವಿದ್ಯಾ ಸಂಸ್ಥೆಯ ಮಾಜಿ ಕಾರ್ಯದರ್ಶಿಯಾಗಿದ್ದ, ರೊ. ಎಂ.ಎನ್. ಸುಂದರ್‌ರಾಜ್ ಇವರು ಮಾತನಾಡಿ, ರೋಟರಿ ಪೂರ್ವ ಕನ್ನಡ ಶಾಲೆಯನ್ನು ಅನುದಾನಕ್ಕೆ ಒಳಪಡಿಸುವಾಗ ತಾನು ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಆಗಿದ್ದು, ವಿದ್ಯಾ ಸಂಸ್ಥೆಗೆ ಶಿಕ್ಷಕರಿಂದ ಯಾವ ದೇಣಿಗೆಯನ್ನು ನಿರೀಕ್ಷಿಸದೆ ಶಾಲೆಯನ್ನು ಅನುದಾನಕ್ಕೆ ಒಳಪಡಿಸಿ, ಶ್ರೀಮತಿ ಜಯಶೀಲಾ ಬಾಯಿ ಎಸ್., ಇವರು ಸೇರಿದಂತೆ ಸುಮಾರು ೭ ಮಂದಿ ಶಿಕ್ಷಕರಿಗೆ ಜೀವನ ಮಾರ್ಗ ಕಲ್ಪಿಸಿದ ತೃಪ್ತಿ ತಮಗಿದೆ ಎಂದರು. ಸಮಾರಂಭದಲ್ಲಿ ಪಾಲ್ಗೊಂಡ ಪೇಟ್ರನ್ ಟ್ರಸ್ಟಿ ರೊ. ಕಡಿದಾಳ್ ಗೋಪಾಲ್, ರೋಟರಿ ಶಿವಮೊಗ್ಗ ಪೂರ್ವ ಕ್ಲಬ್ ಅಧ್ಯಕ್ಷ ರೊ. ಅರುಣ್ ದೀಕ್ಷಿತ್, ಕ್ಲಬ್ ಕಾರ್ಯದರ್ಶಿ ರೊ. ಶಶಿಕಾಂತ್ ನಾಡಿಗ್, ಟ್ರಸ್ಟ್ನ ಉಪಾಧ್ಯಕ್ಷರಾದ ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್, ಟ್ರಸ್ಟ್ನ ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ., ಖಜಾಂಚಿ ರೊ. ವಿಜಯ್ ಕುಮಾರ್, ಜಂಟಿ ಕಾರ್ಯದರ್ಶಿ ರೊ. ನಾಗವೇಣಿ ಎಸ್.ಆರ್., ಬೋಡ್ ಆಫ್ ಟ್ರಸ್ಟಿ ರೊ. ರವಿಶಂಕರ್ ಕೆ.ಬಿ., ಟ್ರಸ್ಟಿ ರೊ. ಆದಿಮೂರ್ತಿ ಹೆಚ್.ಬಿ., ಹಾಗೂ ಹಲವಾರು ರೋಟರಿ ಮುಖಂಡರು ಶ್ರೀಮತಿ ಜಯಶೀಲಾ ಬಾಯಿ ಎಸ್., ಇವರ ಕಾರ್ಯಧಕ್ಷತೆಯನ್ನು ಪ್ರಶಂಶಿಸಿದರು.
ಜೊತೆಗೆ ಅವರ ಸಹದ್ಯೋಗಿಗಳಾಗಿದ್ದ, ಶ್ರೀಮತಿ ಸುಲೋಚನ, ಶ್ರೀಮತಿ ವಿಶಾಲಾಕ್ಷಮ್ಮ, ಶ್ರೀಮತಿ ಮೀನಾಕ್ಷಮ್ಮ, ಶ್ರೀ ಮಹಾಬಲೇಶ್ವರ್ ಎ.ಎಸ್., ಶ್ರೀ ಬಸವರಾಜ್ ಸಿ., ಶ್ರೀ ಸೂರ್ಯನಾರಾಯಣ್ ಆರ್. ಮುಂತಾದವರು ಸನ್ಮಾನಿತರ ಗುಣಗಾನ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ನಿವೃತ್ತ ಡಿ.ಪಿ.ಐ. ರೊ. ಚಂದ್ರಶೇಖರಯ್ಯ ಎಂ., ಇವರು ಮಾತನಾಡುತ್ತಾ, ಆರೋಗ್ಯ ಸಂಸ್ಥೆಗಳನ್ನು ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ರೋಟರಿ ಸಂಸ್ಥೆಯು ತನ್ನ ದಾಪುಗಾಲುಗಳನ್ನು ಇಟ್ಟಿದ್ದು, ಅಂತರರಾಷ್ಟ್ರೀಯ ರೋಟರಿ ಜಿಲ್ಲೆಯಾದ್ಯಂತ ಅನೇಕ ಆರೋಗ್ಯ ಕೇಂದ್ರಗಳನ್ನು ಹಾಗೂ ಶಾಲೆಗಳನ್ನು ನಡೆಸುತ್ತಿದೆ. ಅಂತೆಯೇ ರೋಟರಿ ಶಿವಮೊಗ್ಗ ಪೂರ್ವದಲ್ಲಿಯೂ ಸುಮಾರು ೪೦ ವರ್ಷಗಳಿಂದ ರೋಟರಿ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದೆ. ಇತರ ಎಲ್ಲಾ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಂತೆ ಈ ಶಾಲೆಯಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗಿದ್ದರಿಂದ ಅದನ್ನು ಮುಚ್ಚಬೇಕಾಗಿ ಬಂದಿದ್ದರೂ ಶಿಕ್ಷಕರಿಗೆ ತೊಂದರೆಯಾಗದಂತೆ ಪರಿಯಾಯ ವ್ಯವಸ್ಥೆಯನ್ನು ಇಲಾಖೆಯಿಂದ ಮಾಡಿಸಲಾಗಿದೆ. ಶ್ರೀಮತಿ ಜಯಶೀಲಾ ಬಾಯಿ ಇವರು ಉತ್ತಮ ಶಿಕ್ಷಕಿಯಾಗಿದ್ದು, ಶಾಲೆಯ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರಣಕರ್ತರಾಗಿರುವುದರ ಜೊತೆಗೆ ತನ್ನ ಸ್ವಂತ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಿರುವುದು ಸಂತೋಷದ ವಿಷಯ ಎಂದು ಶ್ಲಾಘಿಸಿದರು. ಜೊತೆಗೆ ಅವರ ಅನೇಕ ಸಹದ್ಯೋಗಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಬೀಳ್ಕೊಡುಗೆ ಸಮಾರಂಭಕ್ಕೆ ಆಗಮಿಸಿ ಅವರ ಬಗ್ಗೆ ಮೆಚ್ಚುಗೆ ಮಾತನಾಡಿರುವುದರ ಜೊತೆಗೆ ಅವರಿಗೆ ಸ್ಮರಣಿಕೆಗಳನ್ನು ನೀಡಿರುವುದು ಸ್ತುತ್ಯಾರ್ಹ ಸಂಗತಿ ಎಂದರು.
ಆಡಳಿತ ಮಂಡಳಿ ಹಾಗೂ ನೆರೆದ ಎಲ್ಲಾ ಸಭಿಕರಿಗೆ ಭೋಜನ ವ್ಯವಸ್ಥೆ ಮಾಡಿರುವ ಶ್ರೀಮತಿ ಜಯಶೀಲಾ ಬಾಯಿ ಎಸ್. & ಮಕ್ಕಳಿಗೆ ಟ್ರಸ್ಟ್ ವತಿಯಿಂದ ಕೃತಜ್ಞತೆ ಸಲ್ಲಿಸಿದರು.