S.N. Chennabasappa ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಮಹಾನಗರ ಪಾಲಿಕೆ, ಜಲ ಮಂಡಳಿ ಮತ್ತು ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ಇಂಜಿನಿಯರ್‌ಗಳೊಂದಿಗೆ ವಾರ್ಡ್ ನಂ. 21 ತಿಲಕ್ ನಗರ ಬಡಾವಣೆಗೆ ಭೇಟಿ ನೀಡಿ, ಅಲ್ಲಿನ ನೀರಿನ ಸಮಸ್ಯೆ ಕುರಿತು ಸ್ಥಳೀಯ ನಿವಾಸಿಗಳಿಂದ ನೇರವಾಗಿ ಮಾಹಿತಿ ಪಡೆದರು.
ಬೇಸಿಗೆಯಲ್ಲಿ ನೀರಿನ ಸೊರಬರಾಜು ಅತ್ಯಂತ ಅವಶ್ಯಕವಾಗಿದ್ದು, ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಸ್ಥಳೀಯ ನಿವಾಸಿಗಳಿಗೆ ಸ್ಪಂದಿಸಿ, ಶೀಘ್ರದಲ್ಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
S.N. Chennabasappa ಈ ಸಂದರ್ಭದಲ್ಲಿ ಪರ್ಫೆಕ್ಟ್ ಅಲಾಯ್ ನ ಮಾಲೀಕರಾದ ವಸಂತ ಕೃಷ್ಣ ದಿವೇಕರ್, ಪಕ್ಷದ ಮುಖಂಡರು, ವಾರ್ಡ್ ನ ಪ್ರಮುಖರು ಸೇರಿದಂತೆ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.