Government First Grade College ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಳೆಹೊನ್ನೂರು, ಭದ್ರಾವತಿ ತಾಲ್ಲೂಕು ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ಆಯೋಜಿಸುವ ‘ಬೌದ್ದಿಕ ಆಸ್ತಿ ಹಕ್ಕು : ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರ’ವನ್ನು ಏ.04 ರ ಬೆಳಿಗ್ಗೆ 10 ಕ್ಕೆ ಹೊಳೆಹೊನ್ನೂರಿನ ಸರ್ಕಾರಿ ಪ್ರ.ದ.ಕಾಲೇಜಿನ ಹೊನ್ನಸಿರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಇವರು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರು ಹಾಗೂ ಸಿಡಿಸಿ ಅಧ್ಯಕ್ಷರಾದ ಶಾರದಾ ಪರ‍್ಯಾನಾಯ್ಕ, ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಯ ಜಂಟಿ ನಿರ್ದೇಶಕ ಪ್ರೊ.ಕೇಶವ ಹೆಚ್, ಪರಿಸರ ತಜ್ಞರಾದ ಪ್ರೊ.ಬಿ.ಎಂ ಕುಮಾರಸ್ವಾಮಿ, ಬಂಧನ್ ಬ್ಯಾಂಕ್‌ನ ವ್ಯವಸ್ಥಾಪಕ ಪ್ರಕಾಶ್ ಎಂ ಪಾಲ್ಗೊಳ್ಳುವರು.
Government First Grade College ಹೊಳೆಹೊನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರತಿಭಾ ಕೆ ಆರ್ ಅಧ್ಯಕ್ಷತೆ ವಹಿಸುವರು.
ಹಾಸನದ ಸರ್ಕಾರಿ ಕಾನೂನು ಕಾಲೇಜಿನ ಸಹ ಪ್ರಾಧ್ಯಾಪಕರಾದ ಅರುಂಧತಿ ಭಾರತದಲ್ಲಿ ಬೌದ್ದಿಕ ಆಸ್ತಿ ಹಕ್ಕು ಕುರಿತು ಹಾಗೂ ಎಸ್‌ಸಿಕೆ ಅಸೋಸಿಯೇಟ್ಸ್ನ ಐಪಿ ಅಟಾರ್ನಿ ಸಾಧ್ವಿ ಸಿ ಕಾಂತ್ ಬೌದ್ದಿಕ ಆಸ್ತಿ ಹಕ್ಕು ಮತ್ತು ಸಂಶೋಧನೆಗಳ ಕುರಿತು ಮಾತನಾಡುವರು. ಐಕ್ಯುಸಿ ಸಂಚಾಲಕರಾದ ಡಾ.ಭಾರತಿ ದೇವಿ ಪಿ, ಡಾ ಆಸ್ಮಾ ಮೇಲಿನಮನಿ, ಸಂಘಟನಾ ಸಮಿತಿ ಸದಸ್ಯರು, ಬೋಧಕ, ಬೋಧಕೇತರ ವರ್ಗ, ವಿದ್ಯಾರ್ಥಿಗಳು ಪಾಲ್ಗೊಳ್ಳುವರು.