DC Shivamogga ಶಿವಮೊಗ್ಗದ ಡಿಸಿ ಕಚೇರಿ ಎದುರಿನ ಮೈದಾನದ ಮಾಲೀಕತ್ವ ವಿವಾದದ ಹಿನ್ನೆಲೆಯಲ್ಲಿ
ಮೈದಾನದ ಪ್ರವೇಶ ದ್ವಾರ ಸಂಪೂರ್ಣ ಬಂದ್ ಮಾಡಲಾಗಿದೆ.
ನಿನ್ನೆ ಮಧ್ಯಾಹ್ನದಿಂದ ಮೈದಾನಕ್ಕೆ ಹೊಂದಿಕೊಂಡಂತಿರುವ ಅಂಗಡಿ ಮುಂಗಟ್ಟುಗಳನ್ನು ಸಹ ಬಂದ್ ಮಾಡಲಾಗಿದ್ದು,
ಮೈದಾನ ತಮಗೆ ಸೇರಿದ್ದು ಎಂದು ಮುಸ್ಲಿಮರು ಹೇಳುತ್ತಿದ್ದಾರೆ.ಮೈದಾನ ಮಹಾನಗರ ಪಾಲಿಕೆಗೆ ಸೇರಿದ್ದು ಎಂದು ಹಿಂದುಪರ ಸಂಘಟನೆಗಳು ಹೇಳುತ್ತಿವೆ.
ಮೈದಾನದ ಪ್ರವೇಶ ದ್ವಾರಕ್ಕೆ ಹಾಕಿದ್ದ ಬೇಲಿಯನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಬೇಲಿ ತಿರುಗು ಗೊಳಿಸಿದ ನಂತರ ಬ್ಯಾರಿ ಕೇಡ್ ಹಾಕಿ ಮೈದಾನದ ಪ್ರವೇಶವನ್ನು ಪೊಲೀಸರು ಬಂದ್ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮೈದಾನದ ಮಾಲೀಕತ್ವ ಕುರಿತಂತೆ ಡಿಸಿ ಕಚೇರಿಯಲ್ಲಿ ಸಭೆ ನಡೆಯಲಿದೆ.
DC Shivamogga ಮುಂಜಾಗ್ರತಾ ಕ್ರಮವಾಗಿ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ