Bhadra Dam ಸರ್ಕಾರದ ಆದೇಶದನ್ವಯ ಭದ್ರಾ ಜಲಾಶಯದಿಂದ
ತುಂಗಭದ್ರಾ ಜಲಾಶಯಕ್ಕೆ ಕುಡಿಯಲು ಮತ್ತು ಬೆಳೆ ರಕ್ಷಣೆಗೆ ಪ್ರತಿನಿತ್ಯ 8000 ಕ್ಯೂಸೆಕ್ಸ್ ನಂತೆ
ದಿನಾಂಕ:01.04.2025ರ ಸಂಜೆ 6.00 ಗಂಟೆಯಿಂದ ಮೂರು ದಿನಗಳವರೆಗೆ ಭದ್ರಾ ನದಿಯ ಮೂಲಕ
ನೀರನ್ನು ಹರಿಸಲಾಗುವುದು.
ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲಿ, ರೈತರುಗಳು ಜಾನುವಾರು
ತೊಳೆಯುವುದು ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡುವುನ್ನು ನಿಷೇಧಿಸಲಾಗಿದೆ. ನದಿಯಿಂದ
ಅನಧಿಕೃತವಾಗಿ ವಿದ್ಯುತ್ ಪಂಪ್/ಡಿಸೆಲ್ ಪಂಪ್ ಸೆಟ್ ಮತ್ತು ಟ್ಯಾಂಕರ್‌ಗಳ ಮೂಲಕ ನೀರು
ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ನದಿ ಪಾತ್ರದಿಂದ ಸಾರ್ವಜನಿಕರು ಮತ್ತು ರೈತರು ಸುರಕ್ಷಿತ
ಸ್ಥಳಗಳಿಗೆ ತೆರಳಲು ಈ ಮೂಲಕ ಸೂಚಿಸಲಾಗಿದೆ. ಭದ್ರಾ ನದಿ ಪಾತ್ರದ ರೈತರು ಮತ್ತು ಸಾರ್ವಜನಿಕರು
ಇಲಾಖೆಯೊಂದಿಗೆ ಸಹಕರಿಸಲು
ಸದಸ್ಯ ಕಾರ್ಯದರ್ಶಿ,
Bhadra Dam ಭದ್ರಾ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿ,
ಹಾಗೂ ಅಧೀಕ್ಷಕ ಅಭಿಯಂತರರು,
ಕ.ನೀ.ನಿ.ನಿ., ಭದ್ರಾ ಯೋಜನಾ ವೃತ್ತ,ಇವರು ತಮ್ಮ ಪ್ರಕಟಣೆಯಲ್ಲಿ
ಕೋರಿದ್ದಾರೆ.
Bhadra Dam ಏಪ್ರಿಲ್ 1 ರಿಂದ 3 ವರೆಗೆ ತುಂಗಭದ್ರಾ ಜಲಾಶಯಕ್ಕೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆ. ಸಾರ್ವಜನಿಕರಿಗೆ ಮುಂಜಾಗ್ರತೆಗೆ ಮನವಿ
Date: