Kimmane Ratnakar ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಸಂವಿಧಾನ ಬದಲಾವಣೆಗೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿರುದ್ಧ ಶಾಸಕ ಆರಗ ಜ್ಞಾನೇಂದ್ರ ನಡೆಸಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದರು.
ಸಂವಿಧಾನದ ಮೂಲ ಸ್ವರೂಪ ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಕೆಲವೊಂದು ಬದಲಾವಣೆ ಮಾಡಬಹುದು ಅಷ್ಟೇ.
ಆದರೆ ಆರ್ ಎಸ್ ಎಸ್ ನ ಮೂಲ ಕೃತಿಯಾದ ಚಿಂತನ ಗಂಗಾ ಎಂಬ ಪುಸ್ತಕದಲ್ಲೇ ಈ ಪ್ರಸ್ತಾಪ ಇದೆ ಎಂದರು.
1962 ರಲ್ಲಿ ಹೊರ ತಂದ ಕೃತಿಯಲ್ಲಿ ಸಂವಿಧಾನ ಬದಲಾವಣೆ ಪೂರ್ಣವಾಗಿ ಬದಲಾಗಬೇಕು ಎಂದಿದೆ.
ಹಾಗೆ ನೋಡಿದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ಮೋದಿ ಉತ್ತರ ನೀಡಬೇಕು.ಒಂದು ದೇಶ, ಒಂದು ಭಾಷೆ ಹಾಗೂ ಒಂದು ಸಂವಿಧಾನ ಆರ್ಎಸ್ಎಸ್ ಉದ್ದೇಶವೆಂದರು.
Kimmane Ratnakar ಹಾಗಾದರೆ ಬೇರೆ ಬೇರೆ ಭಾಷೆ ಮಾತನಾಡುವ ಇತರ ರಾಜ್ಯಗಳ ಪರಿಸ್ಥಿತಿ ಏನಾಗಬೇಕು.1925 ರಿಂದ ಈ ತನಕದ ಸಂಘಟನೆಗಳು ದೇಶದ ಅಸಮಾನತೆ ವಿರುದ್ಧ ಹೋರಾಡಿದ ಒಂದೇ ಒಂದು ನಿದರ್ಶನ ಇಲ್ಲ.ಬಿಜೆಪಿಯವರು ಕ್ರಿಶ್ಚಿಯನ್-ಮುಸ್ಲಿಂ ವಿರುದ್ಧ ಮಾತನಾಡುವುದು ಬಿಟ್ಟು ಹಿಂದೂ ಸಮಾಜದ ಅಸಮಾನತೆ ಬಗ್ಗೆ ಎಂದೂ ಮಾತನಾಡಿಲ್ಲ.
ಅದರ ಬದಲಿಗೆ ದೇಶದ ಜನರನ್ನು
ಧರ್ಮದ ಹೆಸರಿನಲ್ಲಿ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ತಿಳಿಸಿದರು.