ನಮ್ಮ ಹೆಮ್ಮೆಯ ಸಂಸ್ಥೆ ಸ್ಕೌಟ್ಸ್ ಅಂಡ್ ಗೈಡ್ಸ್
ನಿಸರ್ಗದ ಮಡಿಲಲಿ ಕುಳಿತು..
ನಿಸ್ವಾರ್ಥ ಸೇವಾಭಾವವ ಬೆಳೆಸಿ
ಪ್ರಾಣಿ-ಪಕ್ಷಿಯ ಪ್ರೀತಿ ಕಲಿಸಿ
ಸಹಬಾಳ್ವೆ ಸಮನ್ವಯ ತಿಳಿಸಿ
ದೇಶಾಭಿಮಾನವ ಹುಟ್ಟಿಸುವ ಧ್ಯೇಯ ಹೇಳುವ ಸಂಸ್ಥೆಯಿದು..
ವಿಶ್ವಶಾಂತಿಗೆ ಶ್ರಮಿಸುವ,
ಕಾಯಾವಾಚಾ ಮನಸಾ ಪರಿಶುದ್ಧತೆಯ ತತ್ವ ಪಾಲಿಸುವ
ಪರಿಸರ ಪ್ರಜ್ಞೆ ಮೂಡಿಸುವ
ಪರಿಸರ ಉಳಿಸಿ ಬೆಳೆಸುವ
ಸಮಾನತೆಯ ಕಲಿಸುವ
ಎಲ್ಲರಲು ಒಗ್ಗಟ್ಟಿನ ಭಾವ ಮೂಡಿಸುವ ಸಂಸ್ಥೆಯಿದು..
ಶಿಸ್ತುಬದ್ಧ ಸಮವಸ್ತ್ರವ ಧರಿಸಿ
ಜಾತಿ, ಭೇದ-ಭಾವ ಮರೆಸಿ
ಚಳುವಳಿಯ ಭಾವಕ್ಕೆ ಉತ್ತೇಜಿಸಿ..
ಸಹಾಯ, ಸಹಾನುಭೂತಿಯ ಭಾವ ಬೆಳೆಸಿ..
ಹೊಸತನದ ಬೀಜವ ಭಿತ್ತಿ;
ನಾಯಕತ್ವ, ಶಿಸ್ತು, ಜವಾಬ್ದಾರಿ ತಿಳಿಸುವ, ಕಲಿಸುವ ಸಂಸ್ಥೆಯಿದು..
ಜೀವ ಭಾವದ ರೂಪ..
ಮಾನವತೆಯ ಪ್ರತಿರೂಪ..
ಅವರೇ ನಮ್ಮ ರಾಬರ್ಟ್
ಬೇಡನ ಪೋವಲ್..
ಚಳವಳಿಯ ಸಂಸ್ಥಾಪಕ
ಹೊಸ ಶಿಬಿರದ ನಿರೂಪಕ
Scouts & Guides ಮಕ್ಕಳ ಮನವ ಬೆಳಗಲು
ಸಮಸಮಾಜ ಕಟ್ಟಲು
ಶ್ರಮಿಸಿದರು ನಿರಂತರ
ಸ್ಕೌಟ್ಸ್ ಮತ್ತು ಗೈಡ್ಸ್
ಚಳುವಳಿ ಆರಂಭಿಸಿದರು..
ಹೊಸ ಮುನ್ನುಡಿ ಬರೆದರು..
ರಾಬರ್ಟ್
ಬೇಡನ ಪೋವಲ್ ನೆನೆಯೋಣ..
ಸ್ಕೌಟ್ಸ್ ಗೈಡ್ಸ್ ಜೊತೆಗಿರೋಣ..
ರಾಬರ್ಟ್
ಬೇಡನ ಪೋವಲ್ ನಮ್ಮ ಜೀವದಾತ..
ಸ್ಕೌಟ್ಸ್ ಗೈಡ್ಸ್ ನಮ್ಮೆಲ್ಲರ ದಾರಿದೀಪ..
ಡಾ.ಸುಜಾತಾ ಹೊಸಮನಿ
ಕೇಂದ್ರ ಸ್ಥಾನಿಕ ಆಯುಕ್ತರು