Department of Information and Public Relations ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ವಾಜಪೇಯಿ ಲೇಔಟ್‌ನಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಇಲ್ಲಿ ಏರ್ಪಡಿಸಲಾಗಿದ್ದ ಮದ್ಯ ಮತ್ತು ಮಾದಕ ವ್ಯಸನಗಳ ದುಷ್ಪರಿಣಾಮಗಳ ಕುರಿತಾದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯವಾಗಿ ಹರೆಯದಲ್ಲಿ ಬೇಡ ಎಂದ ವಸ್ತುಗಳ ಬಗ್ಗೆಯೇ ಮನಸ್ಸು ಸೆಳೆಯುತ್ತದೆ. ಯುವಜನತೆ ಮದ್ಯ ಮತ್ತು ಮಾದಕ ವಸ್ತುಗಳ ಬಳಕೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಆದರೆ ಇದರಿಂದ ಆರೋಗ್ಯದ ಮೇಲಾಗುವ, ಕುಟುಂಬ ಮತ್ತು ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಬೇಕು.
ಗಾಂಧಿಜಿಯವರು ನಮ್ಮ ದೇಶ ರಾಮರಾಜ್ಯ ಆಗಬೇಕು. ಮಾದಕ ವ್ಯಸನಕ್ಕೆ ಯಾರೂ ಒಳಗಾಗಬಾರದು ಎಂದಿದ್ದರು. ಅದರಂತೆ ನಾವು ನಡೆಯಬೇಕು.ಆದರೆ ನಾವು ಒಂದೆಡೆ ವ್ಯಸನದಿಂದ ದೂರ ಇರಿ ಎನ್ನುತ್ತೇವೆ. ಇನ್ನೊಂದೆಡೆ ಮಾಡಬಾರದು ಎಂಬುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಮದ್ಯ ಅಂಗಡಿಗಳ ಸಂಖ್ಯೆ ಹೆಚ್ಚುತ್ತಿವೆ. ಸರ್ಕಾರಕ್ಕೆ
ರೂ. 40 ಸಾವಿರ ಕೋಟಿ ಆದಾಯ ಮದ್ಯದಿಂದ ಬರುತ್ತಿದೆ.
ಆದರೆ ಮಾದಕ ವ್ಯಸನದಿಂದ ಯುವಜನತೆ ಸೇರಿದಂತೆ ಈ ವ್ಯಸನಕ್ಕೆ ಒಳಗಾದವರ ಆರೋಗ್ಯ ಹಾಳಾಗುತ್ತಿದೆ. ಸಾಮಾಜಿಕ, ಕೌಟುಂಬಿಕ ಆರೋಗ್ಯ ಕೆಡುತ್ತದೆ. ಆದ್ದರಿಂದ ಮುಖ್ಯವಾಗಿ ಯುವಜನತೆ ಸರಿ ತಪ್ಪುಗಳ ಬಗ್ಗೆ ಆಲೋಚಿಸಬೇಕು.
ಗಂಭೀರವಾಗಿ ಯೋಚಿಸಬೇಕು. ಯಾವುದು ಹಾನಿಕಾರವೋ ಅದನ್ನು ಉಪಯೋಗಿಸಬಾರದೆಂಬ ದೃಢ ಸಂಕಲ್ಪ ಮಾಡಬೇಕು.
ಹಿಂದೆ ಸ್ವಾತಂತ್ರ್ಯ ಕ್ಕಾಗಿ ಬಲಿದಾನ ಮಾಡಿದವರು ಬಹತೇಕರು ಯುವ ಹೋರಾಟಗಾರರು. ಪ್ರಸ್ತುತದಲ್ಲಿ ಇಂದಿನ ಯುವಜನತೆ ವ್ಯಸನ ಮುಕ್ತ ಸಮಾಜ ನಿರ್ಮಿಸಲು ಹೋರಾಡಬೇಕಿದೆ. ಸಮಾಜ ಮುಖಿ ಕೆಲಸ ಮಾಡುವಲ್ಲಿ ಮುಂದಿರಬೇಕು.
ನಾನಂತೂ ಇದುವರೆಗೆ ಮದ್ಯ ಅಂಗಡಿ ತೆರೆಯಲು ಅವಕಾಶ ಮಾಡಿಕೊಟ್ಟಿಲ್ಲ ಎಂದ ಅವರು ಯಾರಾದರೂ ಮದ್ಯ, ಮಾದಕ ವ್ಯಸನಕ್ಕೆ ಒಳಗಾಗಿದ್ದರೆ ಈಗಲೇ ಹೊರಬರಲು ದೃಢ ಸಂಕಲ್ಪ ಮಾಡಿ, ತೀರ್ಮಾನಿಸಿ ಹೊರ ಬರಬೇಕು ಎಂದರು.
ನ್ಯೂರೋ ಭಾರತ್ ಆಸ್ಪತ್ರೆಯ ಮನೋವೈದ್ಯರಾದ ಡಾ.ಪ್ರಮೋದ್ ಹೆಚ್ ಎಲ್ ಉಪನ್ಯಾಸ ನೀಡಿ ಮಾತನಾಡಿ, ಕುತೂಹಲ, ಒತ್ತಡ, ಶೋಕಿ ಹೀಗೆ ಇತರೆ ಕಾರಣದಿಂದ ಮಾದಕ ವಸ್ತುಗಳ ಉಪಯೋಗ ಆರಂಭವಾಗಿ, ಬರ ಬರುತ್ತಾ ಚಟವಾಗಿ ಹೋಗುತ್ತದೆ. ಚಟವಾಗಲುನಮ್ಮ ಮೆದುಳಿನ ರಾಸಾಯನಿಕಗಳೂ ಕಾರಣವಾಗುತ್ತದೆ. ಮುಂದೆ ಬಿಡಲು ಮನಸ್ಸು ಮಾಡಿದರೂ ಸಾಧ್ಯವಾಗುವುದಿಲ್ಲ. ಸಾಮಾಜಿಕ ಜಾಲತಾಣ, ಗೇಮ್ಸ್, ಜೂಜು ಇವೆಲ್ಲ ಚಟವಾಗಿ ಹೇಗೆ ಪರಿವರ್ತನೆ ಆಗುತ್ತದೆ. ಅದರಿಂದ ದೂರ ಇರುವುದು ಹೇಗೆ, ವ್ಯಸನಕ್ಕೆ ಒಳಗಾದರೆ ಅದನ್ನು ಪತ್ತೆ ಹಚ್ಚುವುದು, ಅದರಿಂದ ಹೊರಬರುವ ಬಗೆ, ಮಾದಕ ವಸ್ತು ವ್ಯಸನಕ್ಕೆ ಲಭ್ಯವಿರುವ ಚಿಕಿತ್ಸೆ ಕುರಿತು ವಿವರವಾಗಿ ತಿಳಿಸಿಕೊಟ್ಟರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಲ್ಲೇಶಪ್ಪ ಮಾತನಾಡಿ ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಮಾದಕ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳು, ವ್ಯಸನ ಮುಕ್ತವಾಗುವ ಬಗ್ಗೆ ಅರಿವು ಕಾರ್ಯಕ್ರಮದ ಅವಶ್ಯಕತೆ ಇದ್ದು ಯುವಜನತೆ ಇಂತಹ ಕಾರ್ಯಕ್ರಮಗಳ ಸದ್ಬಳಕೆ ಮಾಡಿಕೊಂಡು ಯಾವುದೇ ವ್ಯಸನಕ್ಕೆ ಬಲಿಯಾಗದೆ ಬಲಿಷ್ಟ ಸಮಾಜ ನಿರ್ಮಿಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಸತಿ ನಿಲಯಗಳ ಮೇಲ್ವಿಚಾರಕರು, ವಿದ್ಯಾರ್ಥಿಗಳು
ಪಾಲ್ಗೊಂಡಿದ್ದರು.
ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮಾರುತಿ ಆರ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ ವಂದಿಸಿದರು.