Bharat Scouts and Guides ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಉನ್ನತ ಸ್ಥಾನ ಅಲಂಕರಿಸಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.
ಶಿವಮೊಗ್ಗ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ಉಡುತಡಿಯಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಮಹಿಳೆಯರಿಗೆ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುವುದು ಅತ್ಯಂತ ಅವಶ್ಯಕ ಎಂದು ತಿಳಿಸಿದರು.
ಅಕ್ಕಮಹಾದೇವಿ ಸಮಿತಿ ಕಾರ್ಯದರ್ಶಿ ವಿ.ಸಿ.ಗೌರಮ್ಮ ಅವರು ಅಕ್ಕಮಹಾದೇವಿ ಕುರಿತು ಉಪನ್ಯಾಸ ನೀಡಿದರು. ನಂತರ ಸಂಸ್ಥೆ ವತಿಯಿಂದ ಗೌರಮ್ಮ ಅವರನ್ನು ಸನ್ಮಾನಿಸಲಾಯಿತು.
ಅಲ್ಲಮಪ್ರಭು ಪ್ರಾಧಿಕಾರ ಹೋರಾಟ ಸಮಿತಿಯ ರಾಜೇಶ್ವರಿ ಮಹೇಶ್ ಅವರು ಅಕ್ಕಮಹಾದೇವಿ ಜನ್ಮ ವಿಷಯ ಮತ್ತು ಮಹಿಳೆಯರ ಸ್ಥಾನಮಾನ ಕುರಿತು ಮಾತನಾಡಿದರು.
ಕಾತ್ಯಾಯಿನಿ ಸಿ.ಎಸ್.ಅವರು ಕಾರ್ಯಕ್ರಮ ನಿರೂಪಿಸಿದರು. ಗೀತಾ ಚಿಕ್‌ಮಠ್ ಅವರು ಸ್ವಾಗತ ನಡೆಸಿಕೊಟ್ಟರು. ಮೀನಾಕ್ಷಮ್ಮ ಅವರು ವಂದನಾರ್ಪಣೆ ಮಾಡಿದರು.
ಮಲ್ಲಿಕಾರ್ಜುನ ಕಾನೂರು ಅವರು ಕಾರ್ಯಕ್ರಮದ ಉಸ್ತುವಾರಿ ವಹಿಸಿ ವ್ಯವಸ್ಥಿತವಾಗಿ ನಡೆಸಿಕೊಟ್ಟರು.
ಲಕ್ಷ್ಮೀ ರವಿ, ಹೇಮಲತಾ, ಜ್ಯೋತಿ, ಭಾರತಿ ಚಂದ್ರಶೇಖರ್, ಸುಮಂಗಲಾ ಹಾಗೂ ಜಿಲ್ಲಾ ಸಂಸ್ಥೆಯ ವೀರೇಶಪ್ಪ, ಶಿವಶಂಕರಪ್ಪ, ರವಿ.ಕೆ, ಪರಮೇಶ್ವರಯ್ಯ ಭಾಗವಹಿಸಿದ್ದರು.