Department of Youth Empowerment and Sports ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ಕ್ರೀಡಾ ಸಂಕೀರ್ಣದಲ್ಲಿ ಎರಡು ಹಂತದಲ್ಲಿ ಮಕ್ಕಳಿಗಾಗಿ ಬೇಸಿಗೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್‌ಅವರು ಹೇಳಿದರು.
ಅವರು ಇಂದು ಕ್ರೀಡಾಸಂಕೀರ್ಣದ ಆವರಣದಲ್ಲಿ ಆಯೋಜಿಸಲಾಗುತ್ತಿರುವ ಬೇಸಿಗೆ ಶಿಬಿರದ ಕುರಿತು ಮಾಹಿತಿ ನೀಡಿದರು. ಮೊದಲ ಹಂತದ ಶಿಬಿರವು ಏಪ್ರಿಲ್02ರಿಂದ 25.04.2025ರವರೆಗೆ ಹಾಗೂ ಎರಡನೇ ಹಂತದಲ್ಲಿ ಮೇ 02ರಿಂದ 25.04.2025ರವರೆಗೆ 21ದಿನಗಳ ಬೇಸಿಗೆ ಶಿಬಿರವು ನಡೆಯಲಿದೆ.
ಈ ಬೇಸಿಗೆ ಶಿಬಿರದಲ್ಲಿ ವಿಶೇಷವಾಗಿ ಈಜು, ಸ್ಕೇಟಿಂಗ್‌ಮತ್ತು ಲಾನ್‌ಟೆನ್ನಿಸ್‌ಕ್ರೀಡೆಗಳಲ್ಲಿ ನುರಿತ ಕ್ರೀಡಾ ತರಬೇತುದಾರರಿಂದ ಬೆಳಿಗ್ಗೆ ಮತ್ತು ಸಂಜೆಯ ಅವಧಿಯಲ್ಲಿ ತರಬೇತಿ ನೀಡಲಾಗುವುದು. ಪ್ರವೇಶ ಶುಲ್ಕ ರೂ.2250/- ನಿಗಧಿಪಡಿಸಲಾಗಿದೆ. ವಿಶೇಷವಾಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮತ್ತು 60ವರ್ಷ ಮೇಲ್ಪಟ್ಟವರಿಗೆ ಪಾವತಿಸುವ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲು ಉದ್ದೇಶಿಸಲಾಗಿದೆ ಎಂದವರು ನುಡಿದರು.
ಪ್ರಸಕ್ತ ಸಾಲಿನ ಏಪ್ರಿಲ್‌ಮಾಹೆಯಲ್ಲಿ ಖಾಸಗಿ ತರಬೇತುದಾರರ ಸಹಯೋಗದೊಂದಿಗೆ ಕ್ರಿಕೇಟ್‌ತರಬೇತಿ ಶಿಬಿರವನ್ನು ಗೋಪಾಲಗೌಡ ಬಡಾವಣೆಯ ಚಂದನ ಪಾರ್ಕ್‌ನಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಅಲ್ಲದೇ ಅನೇಕ ಕ್ರೀಡೆಗಳಲ್ಲಿ ಆಸಕ್ತ ಕ್ರೀಡಾಪಟುಗಳಿಗೆ ನುರಿತ ತರಬೇತುದಾರರಿಂದ ತರಬೇತಿ ನೀಡಲು ಯತ್ನಿಸಲಾಗಿದೆ ಎಂದರು.
ನೆಹರೂ ಕ್ರೀಡಾಂಗಣ ಮತ್ತು ಕ್ರೀಡಾಂಗಣ ಸಮುಚ್ಚಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ವಿಸ್ತೃತವಾದ ಕ್ರಿಯಾಯೋಜನೆಯನ್ನು ರೂಪಿಸಿ, ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಅನುಮೋದನೆ ದೊರೆಯುವ ನಿರೀಕ್ಷೆ ಇದೆ ಎಂದವರು ನುಡಿದರು.
Department of Youth Empowerment and Sports ಖೇಲೋ ಇಂಡಿಯಾ ಯೋಜನೆಯಡಿ ನಗರದ ಹೊರವಲಯದಲ್ಲಿ ಸುಸಜ್ಜಿತವಾದ ಹಾಕಿ ಕ್ರೀಡಾಂಗಣ ಹಾಗೂ ಇತರೆ ಹಲವು ಕ್ರೀಡಾಂಗಣಗಳನ್ನು ಸ್ಥಳೀಯ ಕ್ರೀಡಾಪಟುಗಳಿಗೆ ಕ್ರೀಡೆಯಲ್ಲಿ ಉತ್ತೇಜನ ನೀಡುವ ಉದ್ದೇಶದಿಂದ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕೇಂದ್ರದಿಂದ ಅನುದಾನ ಬಿಡುಗಡೆಯಾಗುವ ಆಶಾಭಾವನೆ ಇದೆ ಎಂದರು.
ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳಲಿಚ್ಚಿಸುವ ಕ್ರೀಡಾಸಕ್ತರು ಮಾಹಿತಿಗಾಗಿ ಮೊ.9743820293, 6362200751(ಈಜು), 7760921936(ಸ್ಕೇಟಿಂಗ್), 8374335635(ಟೆನ್ನಿಸ್)ಇವರನ್ನು ಸಂಪರ್ಕಿಸುವಂತೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ತರಬೇತುದಾರರಾದ ಸಚಿನ್, ಸಂಗಮೇಶ್, ವಿಶ್ವಾಸ್‌ಮತ್ತು ಮಂಜುನಾಥ್‌ಉಪಸ್ಥಿತರಿದ್ದರು.
Department of Youth Empowerment and Sports ಏಪ್ರಿಲ್ 2 ರಿಂದ ಈಜು, ಸ್ಕೇಟಿಂಗ್ & ಲಾನ್ ಟೆನ್ನಿಸ್ ಕ್ರೀಡಾ ತರಬೇತಿ ಶಿಬಿರ
Date: