Renukacharya Jayanti ಸೊರಬ ತಾಲೂಕಿನ ದುಗ್ಲಿ ಗ್ರಾಮದ ಶ್ರೀಮದ್ ರಂಭಾಪುರಿ ಶಾಖಾ ಶ್ರೀ ಗುರು ರೇವಣಸಿದ್ಧೇಶ್ವರ ಸುಕ್ಷೇತ್ರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮನೋತ್ಸವದ ಪ್ರಯುಕ್ತ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ರಥೋತ್ಸವ, ಮುರುಘೇಂದ್ರ ಸ್ವಾಮಿಗಳವರ ೬ನೇ ವರ್ಷದ ಪುಣ್ಯಾರಾಧನೆ. ಶ್ರೀಮಠದ ೫೦ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಲಿಂಗೈಕ್ಯ ಪೂಜ್ಯರ ಗದ್ದುಗೆ-ಸಭಾಭವನ-ರಥದ ಮನೆ ಉದ್ಘಾಟನೆ ಜರುಗುವುದು ಎಂದು ಶ್ರೀ ಮಠದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಸೊರಬ ಪಟ್ಟಣದ ಹೊಸಪೇಟೆ ಬಡಾವಣೆಯ ಗಿರಿಜಾ ಶಂಕರ ಸಭಾಭವನದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಶ್ರೀ ಮಠದಲ್ಲಿ ಮಾ.೩೦ರಿಂದ ಏ.೬ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಾ.೩೦ರಂದು ಬೆಳಗ್ಗೆ ಶ್ರೀ ಮಠದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಶಿಲಾಮೂರ್ತಿ ಹಾಗೂ ಲಿಂ. ಮುರುಘೇಂದ್ರ ಸ್ವಾಮಿಗಳವರ ಗದ್ದುಗೆ ಮೇಲೆ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ. ಮಾ. ೩೧ರಂದು ಬೆಳಗ್ಗೆ ಶ್ರೀ ರೇವಣ ಸಿದ್ಧೇಶ್ವರರ ಪಲ್ಲಕ್ಕಿ ಉತ್ಸವ, ಬೆಳಗ್ಗೆ ೯ಕ್ಕೆ ಕಾಳಸರ್ಪದೋಷ ನಿವಾರಣೆಗಾಗಿ ಸರ್ಪಶಾಂತಿ ಹೋಮ, ಸಂಜೆ ರಥೋತ್ಸವ ಹಾಗೂ ಮಹಾ ಮೃತ್ಯುಂಜಯ ಯಾಗ ಶಾಲೆ ಪ್ರವೇಶ ಮತ್ತು ಶಾಂತಿ ಪೂಜೆ ನಡೆಯಲಿದೆ ನಂತರ ರಾತ್ರಿ ೯ಕ್ಕೆ ಭರತನಾಟ್ಯ ಪ್ರದರ್ಶನ ನಡೆಯಲಿದೆ ಎಂದರು.
ಏ.೧ರಂದು ಒಂದು ಲಕ್ಷ ಮಹಾಮೃತ್ಯುಂಜಯ ಜಪಯಜ್ಞ ಸಂಜೆ ಜಾನಪದ ಜೋಗತಿ ನೃತ್ಯ ಹಾಸ್ಯ ಕಾರ್ಯಕ್ರಮ, ಏ. ೨ರಂದು ಮಹಾಮೃತ್ಯುಂಜಯ ಜಪಯಜ್ಞ ಮತ್ತು ಧರ್ಮ ಸಮಾರಂಭ, ರಾತ್ರಿ ಗ್ರೂಪ್ ಡ್ಯಾನ್ಸ್, ಏ.೩ರಂದು ಧರ್ಮ ಸಂಸ್ಕೃತಿ ಕುರಿತು ಜಿಂಚನ ಮಂಥನ ಸಮಾರಂಭ, ರಾತ್ರಿ ಹಾಸ್ಯ ಸಂಭ್ರಮ, ಏ.೪ರಂದು ಶಿವಾದ್ವೇತ ಸಿದ್ಧಾಂತ ವಿಚಾರ ಚಿಂತನ ಸಮಾರಂಭ, ರಾತ್ರಿ ಜಾನಪದ ಸಂಭ್ರಮ, ೫ರಂದು ಸಮಾಜೋಸಾಂಸ್ಕೃತಿಕ ಭಾವೈಕ್ಯತಾ ಸಮಾರಂಭ, ರಾತ್ರಿ ೯ಕ್ಕೆ ಶಿವಮೊಗ್ಗ ಮತ್ತು ಕಾರವಾರ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದೆ ಎಂದರು.
Renukacharya Jayanti ಏ.೬ರಂದು ಬೆಳಗ್ಗೆ ೧೧ಕ್ಕೆ ಶ್ರೀ ರೇವಣ ಸಿದ್ಧೇಶ್ವರ ಸ್ವಾಮೀಜಿಯವರ ದ್ವಾದಶ ಪಟ್ಟಾಧೀಕಾರ ಮಹೋತ್ಸವ ಮತ್ತು ಧರ್ಮ ಜಾಗೃತಿ ಸಮಾರಂಭ ಸಮಾರಂಭ ನಡೆಯಲಿದ್ದು, ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀಮದ್ ಪ್ರಸನ್ನ ರೇಣಿಕಾ ಡಾ. ವೀರಸೋಮೆಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ. ಈ ನಡುವೆ ಏ.೫ರಂದು ಉಚಿತ ಆರೋಗ್ಯ ತಪಾಸಣೆ, ೬ರಂದು ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಅದ್ದೂರಿ ಸಂಗೀತ ಸೌರಭ ನಡೆಯಲಿದೆ. ಕಾರ್ಯಕ್ರಮಗಳಲ್ಲಿ ವಿವಿಧ ಪಕ್ಷಗಳ ಮುಖಂಡರು, ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗೆ ೮೭೬೨೦೮೭೪೪೬ ಅಥವಾ ೭೦೧೯೧೦೯೪೮೭ ಮತ್ತು ೮೩೧೦೮೫೯೨೦೦ಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಡಾ.ಎಚ್.ಇ. ಜ್ಞಾನೇಶ್, ವಿಜೇಂದ್ರಗೌಡ ತಲಗುಂದ, ಗುರುಪ್ರಸನ್ನಗೌಡ ಬಾಸೂರು, ಪ್ರಕಾಶ್ ಅಗಸನಹಳ್ಳಿ, ಚಂದ್ರಪ್ಪ ಗಂಗೊಳ್ಳಿ, ಜಗದೀಶಗೌಡ ತ್ಯಾವಗೋಡು, ಗಂಗಾಧರಗೌಡ ಗುಡುವಿ, ವಿಶ್ವನಾಥ ಗೌಡ, ಸಂತೀಶ್ ಗುಂಜನೂರು, ಚಂದ್ರಶೇಖರ ನಿಜಗುಣ, ಗಂಗಾಧರ, ನಾಗರಾಜ ಗುತ್ತಿ, ಸುರೇಂದ್ರಗೌಡ, ಡಿ. ಶಿವಯೋಗಿ, ಸಂದೀಪ ಯಲವಳ್ಳಿ, ವಿನಯ ಮಾವಲಿ, ರೇಣುಕಮ್ಮ ಗೌಳಿ, ಗುರುನಾಥ ಗೌಡ ಕಾಸರಗುಪ್ಪೆ ಸೇರಿದಂತೆ ಇತರರಿದ್ದರು.
Renukacharya Jayanti ಸೊರಬದ ದುಗ್ಲಿಯಲ್ಲಿ ರೇಣುಕಾಚಾರ್ಯ ಯುಗಮಾನೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು
Date: