MVS Shetty Cricket Academy ಶಿವಮೊಗ್ಗ ನಗರದ ಎಂವಿಎಸ್ ಶೆಟ್ಟಿ ಕ್ರಿಕೆಟ್ ಅಕಾಡೆಮಿಯಿಂದ ಏ. 4 ರಿಂದ ಮೇ 03ರವರೆಗೆ ಪ್ರತಿದಿನ ಬೆಳಿಗ್ಗೆ 6:30 ರಿಂದ 8;30 ರವರೆಗೆ ಒಂದು ತಿಂಗಳ ಬೇಸಿಗೆ ಕ್ರಿಕೆಟ್ ಶಿಬಿರವನ್ನು ಕುವೆಂಪು ರಂಗಮಂದಿರ ಹಿಂಬಾಗದ ಎನ್‌ಇಎಸ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ನುರಿತ ತರಬೇತುದಾರರಿಂದ ನಡೆಯುವ ಈ ಶಿಬಿರದಲ್ಲಿ 8 ರಿಂದ 17 ವರ್ಷ ವಯೋಮಿತಿಯ ಮಕ್ಕಳು ಭಾಗವಹಿಸಬಹುದಾಗಿದೆ. ತರಬೇತಿ ಸಮಯದಲ್ಲಿ ಬೇಕಾಗುವ ಎಲ್ಲಾ ಕ್ರಿಕೆಟ್ ಸಾಮಗ್ರಿಗಳನ್ನು ಕಲ್ಪಿಸಲಾಗುವುದು. ವಿಶೇಷವೆಂದರೆ ಸ್ಪೀಡ್ ಮತ್ತು ಮೀಡಿಯಂ ಬೌಲಿಂಗ್ ಮಿಷನ್ ಮೂಲಕ ಕೂಡ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
MVS Shetty Cricket Academy ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿ ಉತ್ತಮ ಕ್ರಿಕೆಟ್ ಆಟಗಾರರಾಗಿ ಹೊರ ಹೊಮ್ಮಲು ಇದೊಂದು ಸದಾವಕಾಶ ವಾಗಿದೆ. ಅರ್ಜಿಗಳನ್ನು ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗೆ ವಿ. ಸ್ವಾಮಿ ಕುಮಾರ್ ಮೊ. 8884561987, ಲತೇಶ್ ಮೊ. 7025621914ರಲ್ಲಿ ಸಂಪರ್ಕಿಸಲು ಕೋರಲಾಗಿದೆ.
MVS Shetty Cricket Academy ಕ್ರಿಕೆಟ್ ಆಡಲು ಆಸಕ್ತಿಯುಳ್ಳವರೆ.! ನಿಮಗಿದೋ ಏಪ್ರಿಲ್ 4 ರಿಂದ ಬೇಸಿಗೆ ಕ್ರಿಕೆಟ್ ಶಿಬಿರ
Date: