Bangalore Metropolitan Transport Corporation ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ದಿನಾಂಕ 24.03.2025 ರಂದು ರಸ್ತೆ ಅವಘಡಗಳ ತ್ವರಿತ ನಿವಾರಣೆಗಾಗಿ ಹೊಸದಾಗಿ ಖರೀದಿಸಿರುವ 5 ಸಂಚಾರಿ ದುರಸ್ಥಿ ವ್ಯಾನುಗಳನ್ನು ಸನ್ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಲೋಕಾರ್ಪಣೆಗೊಳಿಸಿದರು ಮತ್ತು ಸಂಸ್ಥೆಯ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ವಿತರಿಸಿರುತ್ತಾರೆ.
Bangalore Metropolitan Transport Corporation ಕಾರ್ಯಕ್ರಮದಲ್ಲಿ ಸನ್ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ, ಶ್ರೀ ರಾಮಚಂದ್ರನ್.ಆರ್, ಭಾ.ಆ.ಸೇ, ವ್ಯವಸ್ಥಾಪಕ ನಿರ್ದೇಶಕರು, ಬೆಂಮಸಾಸಂಸ್ಥೆ, ಶ್ರೀ ಅಬ್ದುಲ್ ಅಹದ್, ಭಾ.ಪೋ.ಸೇ, ನಿರ್ದೇಶಕರು (ಭ&ಜಾ) ಮತ್ತು ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.