Rotary Club Shivamogga ವಿಶ್ವದ ಎಲ್ಲ ದೇಶಗಳಲ್ಲಿ ಹೆಚ್ಚು ಸೇವಾ ಕಾರ್ಯಗಳನ್ನು ನಡೆಸಲು ರೋಟರಿ ದತ್ತಿನಿಧಿ ಸಹಕಾರಿಯಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವ್ ಆನಂದ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಮಾಜದಲ್ಲಿ ಅಸಹಾಯಕ, ದುರ್ಬಲ ವ್ಯಕ್ತಿಗಳನ್ನು ಗುರುತಿಸಿ ನಿಸ್ವಾರ್ಥ ಭಾವನೆಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಹಾಯ ಮಾಡುವುದು ಹಾಗೂ ಸಮಾಜದಲ್ಲಿ ಶಾಂತಿ ಕಾಪಾಡಿ ಸಕಾರಾತ್ಮಕ ವಾತಾವರಣ ಸೃಷ್ಟಿ ಮಾಡುವುದು ರೋಟರಿ ಸಂಸ್ಥೆಯ ಮೂಲ ಧ್ಯೇಯವಾಗಿದೆ. ಸಾಮಾಜಿಕ ಸೇವೆಗಾಗಿ ರೋಟರಿ ಸಂಸ್ಥೆಯು ಬದ್ಧವಾಗಿದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವ್ ಆನಂದ್, ರೇಖಾ ದೇವ್ ಆನಂದ್ ಹಾಗೂ ಸಹಾಯಕ ಗವರ್ನರ್ ಸುರೇಶ್ ಅವರನ್ನು ಸನ್ಮಾನಿಸಲಾಯಿತು.
Rotary Club Shivamogga ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಗವರ್ನರ್ ಅವರಿಗೆ ಸೆಂಟ್ರಲ್ ನಿಂದ ಅದ್ದೂರಿ ಸ್ವಾಗತ ಮಾಡಲಾಯಿತು. ಸ್ವಾಗತದಲ್ಲಿ ಚಂಡೆ ಮಹಿಳಾ ತಂಡದವರಿಂದ ಮತ್ತು ಕ್ಲಬ್ ಮಹಿಳಾ ಸದಸ್ಯರಿಂದ ಪೂರ್ಣ ಕುಂಭ ಮತ್ತು ಹೂವಿನಿಂದ ಸ್ವಾಗತಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಸೇವಾ ಕಾರ್ಯಗಳನ್ನು ನಡೆಸಲಾಗುತ್ತಿದೆ. ಜನರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ರೋಟರಿ ಸಹಾಯಕ ಗವರ್ನರ್ ಸುರೇಶ್ ಎಚ್.ಎಂ., ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಈಶ್ವರ್, ಪಿಡಿಜಿ ಪ್ರಕಾಶ್, ಚಂದ್ರಶೇಖರ್, ವಲಯ 10 ಸಹಾಯಕ ಗವರ್ನರ್ ನಾಗರಾಜ ಹಾಗೂ ಮಾಜಿ ಸಹಾಯಕ ಗವರ್ನರ್ ರವಿ ಕೋಟೋಜಿ, ಜಿ.ವಿಜಯಕುಮಾರ್, ಚೂಡಾಮಣಿ ಪವಾರ್, ಆನಂದ್ ಮತ್ತು ವಲಯದ ಮತ್ತು ಜಿಲ್ಲಾ ನಾಯಕರುಗಳು ಉಪಸ್ಥಿತರಿದ್ದರು
Rotary Club Shivamogga ಸಮಾಜದಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೆ ಸಹಾಯಮಾಡುವುದು ರೋಟರಿಸಂಸ್ಥೆಯ ಗುರಿ-ಸಿ.ಎ.ದೇವ್ ಆನಂದ್
Date: