Dr. KP Anshumanth ಭದ್ರಾ ಅಚ್ಚುಕಟ್ಟು ಪ್ರದೇಶಭಿವೃದ್ಧಿ ಕಚೇರಿಯ ಸಭಾಂಗಣದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆಗಾಗಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ತರಬೇತಿಯಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಮತ್ತು ಅಚ್ಚುಕಟ್ಟು ಭಾಗದ ರೈತರುಗಳು ಉಪಸ್ಥಿತರಿದ್ದರು. ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಡಾ ಅಧ್ಯಕ್ಷರಾದ ಡಾ. ಕೆ. ಪಿ. ಅಂಶುಮಂತ್ ರವರು, ನೀರಾವರಿ ಕ್ಷೇತ್ರದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಜವಾಬ್ದಾರಿಗಳ ಬಗ್ಗೆ ವಿವರಿಸುತ್ತಾ.ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ನೀರನ್ನು ಮಿತವಾಗಿ ಬಳಸಬೇಕು ರೈತರು ಒಗ್ಗಟ್ಟಿನಿಂದ ಬೆಳೆಯನ್ನು ಬೆಳೆಯಬೇಕು ಎಂದು ತಿಳಿಸಿದರುಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ.ಸುದೀಪ್ ಎಚ್ ಪಿ ಹಿರಿಯ ಸಂಶೋಧಕರು ಅಡಿಕೆ ಸಂಶೋಧನಾ ಕೇಂದ್ರ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ Dr. KP Anshumanth ಶಿವಮೊಗ್ಗ ಇವರು ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದಂತೆ ಪ್ರತಿ ಬೆಳೆಗೂ ಕೂಡ ಇರಬೇಕಾದ ಅಂತರ, ಮಿಶ್ರ ಕೃಷಿ, ಕೃಷಿ ಮಾಡುವ ಪದ್ಧತಿ, ನೀರಿನ ಸಮರ್ಥ ಬಳಕೆ, ಗೊಬ್ಬರದ ಉಪಯೋಗ ಮತ್ತು ರೈತರು ಈ ವಿಷಯದಲ್ಲಿ ಸಾಮಾನ್ಯವಾಗಿ ಮಾಡುವ ತಪ್ಪುಗಳ ಕುರಿತು ವಿಶದವಾಗಿ ವಿವರಿಸಿ ಜಾಗೃತಿ ಮೂಡಿಸಿದರು ಹಾಗೂ ಅಚ್ಚುಕಟ್ಟುದಾರರೊಂದಿಗೆ ಸಂವಾದವನ್ನು ನಡೆಸಿ ಅವರ ಅನುಮಾನಗಳನ್ನು ಬಗೆಹರಿಸಿದರು. ಟಿ. ಎಸ್. ಮಹದೇವಸ್ವಾಮಿ .ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪೈಪ್ ಕಾಂಪೋಸ್ಟ್ ತಜ್ಞರು,ನೀರಿನ ಮಿತವ್ಯಯ ಮತ್ತು ನೀರಿನ ಅತಿಯಾದ ಬಳಕೆಯಿಂದ ಸೀಮಿತ ಸಂಪನ್ಮೂಲವಾದ ನೀರನ್ನು ಅಚ್ಚುಕಟ್ಟಾಗಿ ನಗರ, ಪಟ್ಟಣ ಮತ್ತು ಕೃಷಿಗೆ ಸಂಬಂಧಿಸಿದಂತೆ ಯಾವ ರೀತಿಯಲ್ಲಿ ಬಳಸಬೇಕೆಂದು ತಮ್ಮ ಅನುಭವದ ಮೂಲಕ ತಿಳಿಸಿದರು ಸಂದರ್ಭದಲ್ಲಿ ಕಾಡಾ ಆಡಳಿತಾಧಿಕಾರಿಗಳು ಆರ್, ಸತೀಶ್ ಹಾಗೂ ಭೂ ಅಭಿವೃದ್ಧಿ ಅಧಿಕಾರಿಗಳು ಕೆ ಪ್ರಶಾಂತ್ (ತಾಂತ್ರಿಕ), ಶ್ರೀಮತಿ ರಾಜಸುಲೋಚನಾ (ಕೃಷಿ), ಹಾಗೂ ಡಾ. ನಾಗೇಶ್ ಎಸ್, ಡೋಂಗರೆ (ಸಹಕಾರ) ಮತ್ತು ಭದ್ರ ಕಾಡಾ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.
Dr. KP Anshumanth ನೀರಾವರಿ ನೀರನ್ನ ಮಿತವಾಗಿ ಬಳಸಿ-ಡಾ.ಕೆ.ಪಿ.ಅಂಶುಮಂತ್
Date: