World Smile Day ವೃತ್ತಿಯ ಜೊತೆಗೆ ಸಮಾಜ ಸೇವೆಯು ಅತ್ಯಂತ ಮುಖ್ಯ ಅದರಲ್ಲೂ ರಕ್ತದಾನದಂತಹ ಬಹಳ ಶ್ರೇಷ್ಠವಾದ ದಾನ. ಮತ್ತೊಂದಿಲ್ಲ ರಕ್ತದಾನ ಮಾಡುವುದ ರಿಂದ. ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಮತ್ತೊಬ್ಬರ ಜೀವ ಉಳಿಸಿದ ಪುಣ್ಯ ಲಭಿಸುತ್ತದೆ ಎಂದು ಮಾಚೇನಹಳ್ಳಿಯ ಪೊಲೀಸ್ ಸಶಸ್ತ್ರ ಪಡೆಯ ಮುಖ್ಯ ಕಮಾಂಡೆಂಟ್ ಯುವಕುಮಾರ್ ಅಭಿಮತ ವ್ಯಕ್ತಪಡಿಸಿದರು. ಅವರು ಮಾಚೇನಹಳ್ಳಿಯ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 8ನೇ ಪಡೆಯ ವತಿಯಿಂದ ವಿಶ್ವ ನಗು ದಿನದ ಅಂಗವಾಗಿ ತಮ್ಮ ಪೊಲೀಸ್ ಪಡೆಯ ಸಹಕಾರದಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿ ಕೊಂಡು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಜೀವಿನಿ ರಕ್ತ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ದಿನಕರ್ ಪಾಲ್ಗೊಂಡು ಸುರಕ್ಷಿತ ರಕ್ತದಾನದ ಬಗ್ಗೆ ಸರ್ವರನ್ನು ಪ್ರೇರೇಪಿಸಿದರು ಮತ್ತು ರಕ್ತದಾನದ ಮಹತ್ವವನ್ನು ತಿಳಿಸಿದರು ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ ಜಿ.ಪಿ ನವೀನ್ ಹಾಗೂ ಸಿಬ್ಬಂದಿಗಳಾದ ಶ್ರುತಿ ,ಧರಣೇಂದ್ರ ದಿನಕರ್ ,ತಾರಾನಾಥ್ ,ಲಕ್ಷ್ಮಿ ಪಾಲ್ಗೊಂಡಿದ್ದರು, ಪೊಲೀಸ್ ಸಿಬ್ಬಂದಿ ವರ್ಗದವರು ರಕ್ತ ಗುಂಪು ತಪಾಸಣೆ ಹಾಗೂ ರಕ್ತದಾನ ಮಾಡಿದರು