Karnataka Lokayukta ಕರ್ನಾಟಕ ಲೋಕಾಯುಕ್ತದಲ್ಲಿ ದಾಖಲಾದ ಶಿವಮೊಗ್ಗ ಜಿಲ್ಲೆಯ ಒಟ್ಟು ಪ್ರಕರಣಗಳಲ್ಲಿ ಆಯ್ದ 64ಪ್ರಕರಗಳಿಗೆ ಸಂಬಂಧಿಸಿದಂತೆ ದೂರುದಾರರು ಮತ್ತು ಎದಿರುದಾರರಿಗೆ ನೋಟಿಸ್ ನೀಡಿ ನೀಡಿ, ವಿಚಾರಣೆಗೆ ಬರುವಂತೆ ಸೂಚಿಸಲಾಗಿತ್ತು.
ಅದರಂತೆ 64ಪ್ರಕರಣಗಳ ಪೈಕಿ ವಿಚಾರಣೆಯಲ್ಲಿ ಭಾಗವಹಿಸಿದ್ದ 54 ಮೊಕದ್ದಮೆಗಳ ವಿಚಾರಣೆ ನಡೆಸಿ, 41ಪ್ರಕರಣಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಗಿದೆ. ಇದರಿಂದಾಗಿ ದೂರುದಾರರಿಗೆ ಸಮಾಧಾನ ದೊರೆತಿದೆ ಮಾತ್ರವಲ್ಲ ಪ್ರಕರಣಗಳಲ್ಲಿ ಎದುರುದಾರಾರಾಗಿದ್ದ ಅಧಿಕಾರಿ – ನೌಕರರು ಪ್ರಕರಣ ಪೂರ್ಣಗೊಂಡಿದ್ದರಿಂದಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದರು.
ಭೇಟಿಯ ಮೊದಲ ದಿನದಂದು ದಾಖಲಾದ ಒಟ್ಟು ಪ್ರಕರಣಗಳಲ್ಲಿ 40 ಅರ್ಜಿದಾರರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಗಿದೆ ಎಂದ ಅವರು, ಇಂದು 292ಜನರಿಗೆ ಟೋಕನ್ ನೀಡಲಾಗಿತ್ತು. ಅವುಗಳಲ್ಲಿ 191ಅರ್ಜಿಗಳನ್ನು ಸ್ವೀಕರಿಸಿ, 120 ಅರ್ಜಿಗಳ ಮೇಲೆ ಮೊಕದ್ದಮೆ ದಾಖಳಿಸಿಕೊಳ್ಳಲಾಗಿದೆ. ಇಂದು ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಉಳಿದ ದೂರುದಾರರು ಸೋಮವಾರದ ನಂತರ ಸ್ಥಳೀಯ ಲೋಕಾಯುಕ್ತ ಉಪಾದೀಕ್ಷಕರಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದರು.
ಜಿಲ್ಲೆಯ್ ವಿವಿಧ ಇಲಾಖೆಗಳಲ್ಲೂ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ, ಅರ್ಹರಿಗೆ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಮನವಿ ಮಾಡಿದ ಅವರು ಸೌಲಭ್ಯ ಕೋರಿ ಕಚೇರಿಗೆ ಬರುವ ಅರ್ಜಿಗಳನ್ನು ತ್ವರಿತವಾಗಿ ವಿಲೇ ಮಾಡಬೇಕು. ಪ್ರಸ್ತುತ ದಾಖಲಾಗಿರುವ ಪ್ರಕರಣಗಳ ಹೆಚ್ಚಿನ ಮಾಹಿತಿ ಹಾಗೂ ಕ್ರಮಕ್ಕಾಗಿ ಪುನಃ ತಮಗೆ ಕಳುಹಿಸಿಕೊಡಲಾಗುವುದು ಎಂದರು.
ಭೇಟಿಯ ಅವಧಿಯಲ್ಲಿ ಜಿಲ್ಲಾಡಳಿತದ ಸ್ಪಂದನೆ ಬಗ್ಗೆ ಉಪಲೋಕಾಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.
Karnataka Lokayukta ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಾತನಾಡಿ, ಎರಡು ದಿನಗಳ ಅವಧಿಯಲ್ಲಿ ಉಪಲೋಕಾಯುಕ್ತರು ತೋರಿದ ಉತ್ಸಾಹ, ಶ್ರದ್ಧೆ, ನಿಷ್ಠೆ ಮತ್ತು ಆಸಕ್ತಿ ಎಲ್ಲರಿಗೂ ಮಾದರಿಯಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಮಾತ್ರವಲ್ಲದೆ ಪ್ರಮಾಣಿಕವಾಗಿ ಸೇವೆ ಸಲ್ಲಿಸುವ ನೌಕರರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ನಿರ್ಲಕ್ಷ ಮಾಡುವವರನ್ನು ಸಂರಕ್ಷಿಸುವುದು ಸಾಧ್ಯವಿಲ್ಲ ಎಂಬುದನ್ನು ತಿಳಿಸಿದ್ದಾರೆ. ಲೋಕಾಯುಕ್ತಡಾ ಬಗ್ಗೆ ನೌಕರರಿಗೆ ನೀಡಿದ ಮಾಹಿತಿ ಉಪಯುಕ್ತವಾಗಿದೆ ಎಂದರು.
ದೂರು ಸ್ವೀಕಾರ, ವಿಚಾರಣೆಯ ಸಮಾರೋಪ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ. ಕೆ. ಮಿಥುನ್ ಕುಮಾರ್, ಸಿ.ಇ.ಒ. ಎನ್. ಹೇಮಂತ್, ನ್ಯಾ. ವಿಜಯಾನಂದ್, ನ್ಯಾ. ಲೋಕಪ್ಪ, ಕಿರಣ್ ಪಾಟೀಲ್, ಎಂ. ಎಸ್. ಸಂತೋಷ್, ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ಮತ್ತಿತರರು ಉಪಸ್ಥಿತರಿದ್ದರು.