World Sparrow Day ಎಲ್ಲಿ ಹಾರಿಹೋದೆ ಗುಬ್ಬಚ್ಚಿ? ಅಂಗಳದ ಕಾಳುಗಳ ಪುಟ್ಟ ಕೀಟಗಳ ಕೊಕ್ಕಿನಿಂದ ಹೆಕ್ಕಿ ತಿನ್ನುವ ಹಕ್ಕಿ ಮರೆಯಾದೆ ಎಲ್ಲಿ?
ಬ್ರಹ್ಮಾಸ್ತ್ರಗಳೇ ಇಲ್ಲ ಈಗ.
ಭಯವೇಕೆ? ಕಾಳುಗಳ ಹರಡಿ ಕಾದಿರುವೆ ಕಳವಳವೇ ಹೊದ್ದಿದೆ ಅಂಗಳದ ತುಂಬಾ.
ಅಪ್ಪಚ್ಚಿಗಳ ತಿನ್ನೆ. ಪಾಪಚ್ಚಿಗಳ ಮನದನ್ನೆ. ಹಾರಿ ಹೋದೆ ಎಲ್ಲಿ?
ನಾನಂತೂ ಕಟ್ಟಿರುವೆ ನಿನಗೊಂದು ಗೂಡು. ನೀರಿಟ್ಟು,ಕಾಳಿಟ್ಟು
ನನ್ನೆಲ್ಲ ಸಮಯ ನಿನಗಿಟ್ಟು. ಬಾ ಭಯ ಬಿಟ್ಟು.