Karnataka Sahitya Academy ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ, ಹಾವೇರಿ ಜಿಲ್ಲೆ ಇವರ ಸಹಯೋಗದಲ್ಲಿ ಗಿರಿಜನ ಉಪಯೋಜನೆಯಡಿ ಕನ್ನಡ ಸಾಹಿತ್ಯ ಮತ್ತು ಸಾಂವಿಧಾನಿಕ ಮೌಲ್ಯಗಳು ಕುರಿತು ಏ. 21 ರಿಂದ 23 ರವರೆಗೆ 3 ದಿನಗಳ ಕಮ್ಮಟವನ್ನು ಹಾವೇರಿ ಜಿಲ್ಲೆ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿದ 20-45 ವಯೋಮಿತಿಯ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಅಕಾಡೆಮಿಯ ವೆಬ್‌ಸೈಟ್ ರಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಏ.05 ರೊಳಗಾಗಿ ಸಲ್ಲಿಸುವುವಂತೆ ಅಕಾಡೆಮಿಯ ರಿಜಿಸ್ಟಾçರ್ ಕರಿಯಪ್ಪ ಎನ್. ತಿಳಿಸಿದ್ದಾರೆ.
Karnataka Sahitya Academy ಏಪ್ರಿಲ್ 21 ರಿಂದ 23 ವರೆಗೆ ಕನ್ನಡ ಸಾಹಿತ್ಯ ಮತ್ತು ಸಾಂವಿಧಾನಿಕ ಮೌಲ್ಯ ಕುರಿತು ಕಮ್ಮಟ
Date: