District Legal Services Authority ಸಾರ್ವಜನಿಕ ಆಡಳಿತದ ಮೂರು ಅಂಗಗಳಿಗೆ ಸಹಕಾರ, ಸಲಹೆ ನೀಡುವ ಹಾಗೂ ಸಾರ್ವಜನಿಕ ಆಡಳಿತ ಸುಗಮಗೊಳಿಸುವಲ್ಲಿ ವಕೀಲ ಸಮುದಾಯ ಸದಾ ಮುಂದಿರುತ್ತದೆ ಎಂದು ಮಾನ್ಯ ನ್ಯಾಯಮೂರ್ತಿಗಳು ಹಾಗೂ ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಘಟಕ ಮತ್ತು ಜಿಲ್ಲಾ ವಕೀಲರ ಸಂಘ, ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕ ಆಡಳಿತ ಮತ್ತು ಉತ್ತಮ ಆಡಳಿತದಲ್ಲಿ ವಕೀಲರ ಪಾತ್ರ ಕುರಿತು ಏರ್ಪಡಿಸಲಾಗಿದ್ದ ವಕೀಲರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟು ಮಾತನಾಡಿದರು.
ಹಿಂದೆ ರಾಷ್ಟ್ರ ಕಟ್ಟುವಲ್ಲಿ ವಕೀಲರ ಪಾತ್ರ ಮಹತ್ವದಾಗಿತ್ತು. ಬಹುತೇಕ ಸ್ವಾತಂತ್ರ್ಯಹೋರಾಟಗಾರರೆಲ್ಲ ವಕೀಲರಾಗಿದ್ದರು. ಮೇಲ್ಪಂಕ್ತಿಯ ಸಮುದಾಯ ಇದು. ಸರ್ಕಾರದ ಇತರೆ ಅಂಗಗಳಿಗಿಂತ ನ್ಯಾಯಾಂಗದ ಮೇಲೆ ಜನರಿಗೆ ಹೆಚ್ಚಿನ ನಂಬಿಕೆ, ವಿಶ್ವಾಸ ಇದೆ.
ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ವಕೀಲರ ಪಾತ್ರ ಹೆಚ್ಚಿದೆ. ನಮ್ಮ ದೇಶದಲ್ಲಿ ವಕೀಲರು, ನ್ಯಾಯಾಧೀಶ ಸಂಖ್ಯೆ ಕಡಿಮೆ ಇದೆ. ಆದರೂ ವ್ಯವಸ್ಥೆ ಕುಸಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಈ ಮೂರು ಅಂಗಗಳು ಸೇರಿದರೆ ಮಾತ್ರ ಸಾರ್ವಜನಿಕ ಆಡಳಿತ ಸಾಧ್ಯ.
District Legal Services Authority ಇಡೀ ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಯಾವಾಗಲೂ ವಕೀಲರು ಧ್ವನಿ ಎತ್ತುವ ಕೆಲಸ ಮಾಡುತ್ತಾ ಬಂದಿದ್ದಾರೆ. ಕಾರಣ ಅವರು ಕಾನೂನು, ವಿಶ್ಲೇಷಣೆಯಲ್ಲಿ ತರಬೇತಿ ಹೊಂದಿದ ಸಮುದಾಯವಾಗಿರುವುದು. ಈ ಪರಿಣಿತಿ, ಜ್ಞಾನದ ಜೊತೆ ಸಾಮಾಜಿಕ ಪ್ರವೃತ್ತಿಯನ್ನೂ ಬೆಳೆಸಿಕೊಂಡರೆ ಇತರೆ ಅಂಗಗಳಿಗೆ ಒತ್ತಾಸೆಯಾಗಿ ನಿಲ್ಲಬಹುದಾಗಿದೆ. ಸಾರ್ವಜನಿಕ ಆಡಳಿತದ ಮೂರು ಅಂಗಗಳಿಗೆ ಸಲಹೆ ನೀಡಿ, ಸಹಕರಿಸುವ, ಲೋಪಗಳನ್ನು ಸರಿಪಡಿಸುವ ಅವಕಾಶ ಈ ಸಮುದಾಯಕ್ಕಿದೆ. ಆಗ ಮೂರು ಅಂಗಗಳನ್ನು ಬಲಗೊಳಿಸಬಹುದು ಎಂದ ಅವರು ಜಿಲ್ಲೆಯ ವಕೀಲರು ಮನಸ್ಸು ಮಾಡಿದರೆ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದರು.
ಶಾಸಕಾಂಗ ಕಾನೂನು ರಚಿಸಿದರೆ, ಕಾರ್ಯಾಂಗ ಕಾನೂನು, ಸರ್ಕಾರ ರೂಪಿಸುವ ಯೋಜನೆಗಳು, ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತದೆ. ಆದರೆ ನ್ಯಾಯಾಂಗಕ್ಕೆ ಈ ಎಲ್ಲವನ್ನೂ ವಿಶ್ಲೇಷಣೆ ಮಾಡುವ ಶಕ್ತಿ ಇದೆ. ಯಾವ ಹೊಸ ಕಾನೂನು ಬೇಕು, ಯಾವುದು ಬೇಡ ಎಂಬ ಸಲಹೆಗಳನ್ನು ನೀಡುವ ಶಕ್ತಿ ವಕೀಲ ಸಮುದಾಯಕ್ಕಿದೆ. ವ್ಯಾಖ್ಯಾನ, ವಿಶ್ಲೇಷಣೆ ಮತ್ತು ಉತ್ತಮ ತೀರ್ಪುಗಳಿಗೆ ಮುಖ್ಯ ಕಾರಣಕರ್ತರು ವಕೀಲರು.
ಸರ್ಕಾರದ ನಿಯಮಾವಳಿಗಳು, ನಿರ್ದೇಶನ, ಒಟ್ಟಾರೆ ಚಟುವಟಿಕೆಗಳನ್ನು ಪ್ರಶ್ನೆ ಮಾಡುತ್ತಿರುವುದು ವಕೀಲ ಸಮುದಾಯ. ಶಾಸಕಾಂಗ ಪ್ರಕ್ರಿಯೆಯಲ್ಲಿ ವಕೀಲರ ಕೊಡುಗೆ ಮಹತ್ವದ್ದಾಗಿದ್ದು, ಕಾರ್ಯಾಂಗದ ಲೋಪಗಳನ್ನೂ ಪ್ರಶ್ನಿಸುವ ಮೂಲಕ ಸರಿಪಡಿಸುವ ಕೆಲಸವನ್ನು ಈ ಸಮುದಾಯ ಮಾಡುತ್ತಿದೆ.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ನಾಯಕ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಜಿಲ್ಲಾ ನ್ಯಾಯಾಧೀಶರು ಮತ್ತು ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರು ಹಾಗೂ ವಿಚಾರಣೆಗಳು-14 ರ ಎನ್.ಆರ್. ಲೋಕಪ್ಪ, ಜಿಲ್ಲಾ ನ್ಯಾಯಾಧೀಶರು ಮತ್ತು ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರು ಹಾಗೂ ವಿಚಾರಣೆಗಳು-05ರ ಜಿ.ವಿ. ವಿಜಯನಂದ, ಸಿವಿಲ್ ನ್ಯಾಯಾಧೀಶರು ಮತ್ತು ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿಯಾದ ಕಿರಣ್ ಪಿ.ಎಂ. ಪಾಟೀಲ್ ಪಾಲ್ಗೊಂಡಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ ಎಸ್, ವಿಶೇಷ ಸಾರ್ವಜನಿಕ ಅಭಿಯೋಜಕರಾದ ಸುಂದರರಾಜ್ ಎಂ.ಡಿ, ಜಿಲ್ಲಾ ವಕೀಲರ ಸಂಘದ ಪ್ರಧಾನ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಎಸ್ ಎ, ನ್ಯಾಯಾಧೀಶರು, ವಕೀಲರು ಪಾಲ್ಗೊಂಡಿದ್ದರು.
District Legal Services Authority ನ್ಯಾಯಾಂಗದ ಮೇಲೆ ಜನರಿಗೆ ಹೆಚ್ಚಿನ ನಂಬಿಕೆ, ವಿಶ್ವಾಸವಿದೆ- ನ್ಯಾ.ಕೆ.ಎನ್.ಫಣೀಂದ್ರ
Date: