Narayana Hrudayalaya ಬಂಟರ ಯಾನೆ ನಾಡವರ ಸಂಘ ಶಿವಮೊಗ್ಗ ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮಾ.23ರ ಭಾನುವಾರ ಬೆಳಿಗ್ಗೆ 10ಗಂಟೆಗೆ ಬಂಟರ ಭವನ,100 ಅಡಿ ರಸ್ತೆ, ಗೋಪಾಲಗೌಡ ಬಡಾವಣೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
ನಾರಾಯಣ ಹೃದಯಾಲಯ, ವಾಸನ್ ಐ ಕೇರ್ ಮತ್ತು ದಂತ ವೈದ್ಯ ಸಂಯುಕ್ತ ಆಶ್ರಯದಲ್ಲಿ ಬಿಪಿ, ಜಿಆರ್‌ಬಿಸ್, ಇಸಿಜಿ, ಇಸಿಹೆಚ್‌ಓ, ದಂತ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ಇದರ ಸದುಪಯೋಗವನ್ನು ಸಮಾಜ ಬಾಂಧವರು ಮತ್ತು ಸಾರ್ವಜನಿಕರು ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷರು-ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಮುಂಚಿತವಾಗಿ ಹೆಸರು ನೊಂದಾಯಿಸುವವರು ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿ.ಮಂಜುನಾಥ್ ಮೊ : ೯೬೧೧೫೮೪೧೫೩ ಸಂಪರ್ಕಿಸಬಹುದು.