Tuesday, March 18, 2025
Tuesday, March 18, 2025

Sangeet Samarpan Trust ಕಲಿಯುವ ಎಳೆಯ‌ ಮನಸ್ಸುಗಳಿಗೆ ಸಂಗೀತ ಚೇತೋಹಾರಿ- ಕೆ.ವಿ.ಶಿವಕುಮಾರ್

Date:

Sangeet Samarpan Trust ಸಂಗೀತವೇ ಒಂದು ಭಾಷೆ. ಅದು ವಿಶ್ವದೆಲ್ಲೆಡೆ ಪಸರಿಸುವ ಜಾಗತಿಕ ಭಾಷೆ. ಇದಕ್ಕೆ ಯಾವುದೇ ಗಡಿಯ ಮಿತಿಗಳಿಲ್ಲ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷರು, ನಮ್ಮ ನಾಡು ಪತ್ರಿಕೆಯ ಸಂಪಾದಕರೂ ಅದ ಕೆ. ವಿ. ಶಿವಕುಮಾರ್ ಪ್ರತಿಪಾದಿಸಿದರು.
ಶಿವಮೊಗ್ಗ ನಗರದ “ಸಂಗೀತ್ ಸಮರ್ಪಣ್ ಟ್ರಸ್ಟ್” ವತಿಯಿಂದ ಆರ್.ಟಿ.ಓ. ಕಛೇರಿ ರಸ್ತೆಯ ಪತ್ರಿಕಾ ಭವನದ ಮೊದಲ ಮಹಡಿಯಲ್ಲಿ ನಡೆದ ಧ್ವನಿ ಸಂಸ್ಕರಣ, ಸಂಗೀತದ ವಿಧಾನ ಶಾಸ್ತ್ರ ಹಾಗೂ ಸುಗಮ ಸಂಗೀತದ ಕಲಿಕಾ ಶಿಬಿರ (ಕಾರ್ಯಾಗಾರ) ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮನುಷ್ಯನ ನೋವು ನಲಿವಿಗೆ ಸಂಗೀತ ಒಂದು ಪರಿಣಾಮಕಾರಿ ಅಭಿವ್ಯಕ್ತಿ. ಸಂಗೀತ ಮಾನಸಿಕ ಸಂತೋಷ, ಉಲ್ಲಾಸಕ್ಕೆ ಕಾರಣವಾಗುತ್ತದೆ ಎಂದರು.
ಸAಗೀತವೂ ಸೇರಿದಂತೆ ಯಾವುದೇ ಕಲೆಯ ಕಲಿಕೆ ಮತ್ತು ಗ್ರಹಿಕೆಗೆ ಅವಸರದ ಪ್ರವೃತ್ತಿ ಸಲ್ಲ. ಇದಕ್ಕೆ ವಯೋಮಾನದ ಮಿತಿಯೂ ಇರಲ್ಲ ಎಂದು ಕಿವಿ ಮಾತು ಹೇಳಿದ ಅವರು, ಮುಖ್ಯವಾಗಿ ನಮ್ಮ ಪರಂಪರಾಗತ ಸಂಗೀತ, ಸುಗಮ ಸಂಗೀತವನ್ನು ಪೋಷಕರು ಮಕ್ಕಳಿಗೆ ಕಲಿಸುವುದರ ಮೂಲಕ ಆ ಎಳೆಯ ಮನಸ್ಸನ್ನು ಚೇತೂಹಾರಿಯಾಗಿಸಬಹುದು. ನಿರಂತರ ಕಲಿಕೆಯಿಂದ ಮಾತ್ರ ಯಶಸ್ಸು ಸಾಧ್ಯ ಎಂಬುದನ್ನು ಮರೆಯಬಾರದು ಎಂದರು.
ಸುಗಮ ಸಂಗೀತ ಕ್ಷೇತ್ರಕ್ಕೆ ತನ್ನದೇ ಆದ ಶ್ರೇಷ್ಟ ಪರಂಪರೆ ಇದೆ. ಇಂದಿನ ವೇಗದ ಬದುಕಿನಲ್ಲಿ ಈ ಪ್ರಕಾರವನ್ನು ಮುಂದಿನ ಪೀಳಿಗೆಗೆ ದಾಟಿಸುವ ಅಗತ್ಯವೂ ಇದೆ. ಈ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಾಗಾರ ಹೆಚ್ಚು ಅರ್ಥಪೂರ್ಣ. ಗಾಯಕಿ ಸುರೇಖಾ ಹೆಗಡೆಯವರ ಶ್ರಮ ಸಾರ್ಥಕ ಎಂದ ಅವರು, ಶಿಬಿರದಲ್ಲಿ ಪಾಲ್ಗೊಂಡು ಕ್ರಮಬದ್ಧ ಕಲಿಕೆಯ ಮಾರ್ಗದರ್ಶನ ನೀಡಿರುವ ಸಂಪನ್ಮೂಲ ವ್ಯಕ್ತಿಗಳಾದ ಪುತ್ತೂರು ನರಸಿಂಹ ನಾಯಕ್, ಮ್ಯಾಂಡೋಲಿನ್ ಮುರಳಿಯವರ ಚಿಂತನೆಗಳನ್ನು ಗಾಯನ ಬದುಕಿನಲ್ಲಿ ಸಮರ್ಥವಾಗಿ ಬಳಸಿಕೊಳ್ಳಿ ಎಂದರು.
Sangeet Samarpan Trust ಎರಡು ದಿನಗಳ ಈ ಕಾರ್ಯಾಗಾರದಲ್ಲಿ ನಾಡಿನ ಪ್ರಖ್ಯಾತ ಸುಗಮ ಸಂಗೀತ ಗಾಯಕ, ಸಂಗೀತ ನಿರ್ದೇಶಕ ಪುತ್ತೂರು ನರಸಿಂಹ ನಾಯಕ್ ಹಾಗೂ ಸಂಗೀತ ಸಂಯೋಜಕ, ವ್ಯವಸ್ಥಾಪಕ ಮೆಂಡೋಲಿನ್ ಎನ್.ಎಸ್. ಪ್ರಸಾದ್ ರವರು ಪಾಲ್ಗೊಂಡು ಧ್ವನಿ ಸಂಸ್ಕರಣ, ಗ್ರಹಿಕೆ, ಸಂಗೀತದ ರಾಗ-ತಾಳಗಳ ಮಾಹಿತಿ, ಸಂಯೋಜನೆ ಮಹತ್ವ, ಜೊತೆಗೆ ಸುಗಮ ಸಂಗೀತದ ಕಲಿಕೆಯ ಮಾರ್ಗಗಳನ್ನು ಪರಿಚಯಿಸಿದರು.
ಹಳೆಯ ಹೆಸರಾಂತ ಕವಿಗಳ ಕಾಣದಿಹ ದಾರಿಯಲಿ, ಹುದುಗಲಾರದ ದುಃಖ, ದೃಢ ಆಗು ನೋವಿಂದ, ಯಾಕೋ ಕಾಣೆ ರುದ್ರವೀಣೆ, ಹೂವರಳುವ ಸಮಯದಲ್ಲಿ, ಎಲೆ ಎಲೆ ಮಲ್ಲಿಗೆ ಹೀಗೆ ಹಲವಾರು ಹೊಸ ಹೊಸ ಕವಿಗೀತೆಗಳನ್ನು ಆರಿಸಿ, ಉತ್ತಮ ರಾಗ ಸಂಯೋಜನೆಗಳನ್ನು ಹೊಂದಿರುವ, ಸಂಪನ್ಮೂಲ ವ್ಯಕ್ತಿಗಳೇ ಸಂಯೋಜಿಸಿದ ಒಂದಷ್ಟು ಹೊಸ ಭಾವಗೀತೆಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿಕೊಡಲಾಯಿತು.
ಟ್ರಸ್ಟ್ ಅಧ್ಯಕ್ಷೆ, ಗಾಯಕಿ ಸುರೇಖಾ ಹೆಗಡೆ ಈ ಶಿಬಿರವನ್ನು ಸಂಘಟಿಸಿದ್ದರು. ನಗರದ ತಬಲ ಮಾಂತ್ರಿಕ ಪಂಡಿತ್ ತುಕಾರಾಂ ರಂಗಧೋಳ್ ತಬಲದಲ್ಲಿ ಹಾಗೂ ಕೀಬೋರ್ಡ್ ನಲ್ಲಿ ನಗರ ನಾಗಭೂಷಣ ಉಡುಪ ಸಾಥ್ ನೀಡಿದರು.
ಈ ಶಿಬಿರದಲ್ಲಿ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ನೂರಕ್ಕೂ ಹೆಚ್ಚು ಸಂಗೀತ ಕಲಿಕಾ ಅಭ್ಯರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kumsi MESCOM ಕುಂಸಿ ಮೆಸ್ಕಾಂ ಕಛೇರಿಯಲ್ಲಿ ಮಾರ್ಚ್ 18. ಜನಸಂಪರ್ಕ ಸಭೆ

Kumsi MESCOM ಕುಂಸಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮಾ.18 ರಂದು ಬೆಳಿಗ್ಗೆ...

Karnataka Legislative Council ಇಡೀ ರಾಷ್ಟ್ರವೇ ಮೆಚ್ಚುವ ‌ಕಾನೂನು ಶಿಕ್ಷಣ ಸಿಗಲಿ- ಮಾಜಿ ನ್ಯಾ.ಎಂ.ಎನ್.ವೆಂಕಟಾಚಲಯ್ಯ

Karnataka Legislative Council ಪ್ರವಾಹೋಪಾದಿಯಲ್ಲಿ ಸಾಧನೆ ಮಾಡುವ ಹಂಬಲ ಉಳ್ಳವರನ್ನು ತಡೆಯಲು...

District Consumer Disputes Redressal Commission ರೆಫ್ರಿಜಿರೇಟರ್ ಸೇವಾನ್ಯೂನತೆ. ಜಿಲ್ಲಾ ವ್ಯಾಜ್ಯ ಪರಿಹಾರ ಆಯೋಗದಿಂದ ಗ್ರಾಹಕರಿಗೆ ಸಿಕ್ಕಿತು ನ್ಯಾಯ

District Consumer Disputes Redressal Commission ದೂರುದಾರರಾದ ಎಸ್.ವಿ.ಲೋಹಿತಾಶ್ವ ಇವರು ಎದುರುದಾರರಾದ...