Ministry of Youth Affairs and Sports ಭಾರತ ಸರ್ಕಾರ, ಯುವ ವ್ಯವಹಾರ ಮ್ತತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಶಿವಮೊಗ್ಗ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿವಮೊಗ್ಗ ಮತ್ತು ಇನ್ನೋವೆಟರ್ ಯೂತ್ ಕ್ಲಬ್, ಶಿವಮೊಗ್ಗ ಇವರ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ದಿನಾಂಕ 23.03.2025 ರ ಭಾನುವಾರದಂದು ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
Ministry of Youth Affairs and Sports ಈ ಕ್ರೀಡಾಕೂಟದಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಿದ್ದು 15 ರಿಂದ 29 ವರ್ಷದ ವಯೋಮಿತಿವುಳ್ಳವರು ಭಾಗವಹಿಸಬಹುದಾಗಿದೆ. ಗುಂಪು ವಿಭಾಗದಲ್ಲಿ ವಾಲಿಬಾಲ್ ಸ್ಪರ್ಧೆ (ಪುರುಷರಿಗೆ), ಖೋ,ಖೋ(ಮಹಿಳೆಯರಿಗೆ) ಹಾಗೂ ವೈಯಕ್ತಿಕ ವಿಭಾಗದಲ್ಲಿ ಮಹಿಳೆಯರಿಗಾಗಿ 100ಮೀ. ಓಟ ಮತ್ತು ಗುಂಡು ಎಸೆತ, ಪುರುಷರಿಗಾಗಿ ಬ್ಯಾಟ್ಮಿಟನ್, ಗುಂಡು ಎಸೆತ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಲು ಆಸಕ್ತ ಸ್ಪರ್ಧಿಗಳು ದಿನಾಂಕ 21.03.2025 ರೊಳಗೆ ನಿಮ್ಮ ಹೆಸರನ್ನು ಈ ಕೆಳಕಂಡ ಮೊಬೈಲ್ ನಂ. 9961332968 ಗೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳತಕ್ಕದ್ದು.
ಕ್ರೀಡಾಕೂಟದ ದಿ: 23.03.2025 ರಂದು ಬೆಳಿಗ್ಗೆ 09.30 ರ ಒಳಗೆ ನಿಗದಿತ ಸ್ಥಳದಲ್ಲಿ ಹಾಜರಿರಬೇಕೆಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ.: 9961332968 ಸಂಪರ್ಕಿಸುವುದು.
Ministry of Youth Affairs and Sports ಮಾರ್ಚ್ 23. ಶಿವಮೊಗ್ಗದಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟ
Date: