Shivaganga Yoga Center ಶಿವಮೊಗ್ಗ ಕೃಷಿ ನಗರದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರದ ನೇತೃತ್ವದಲ್ಲಿ 21 ದಿನಗಳ ಉಚಿತ ಯೋಗ ಪ್ರಾಣಾಯಾಮ ಧ್ಯಾನದ ಶಿಬಿರವನ್ನು ಉದ್ಘಾಟಿಸಲಾಯಿತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮೆಟ್ರೋ ಆಸ್ಪತ್ರೆಯ ವೈದ್ಯಾಧಿಕಾರಿಯಾದ ಡಾ. ಪೃಥ್ವಿ ಒತ್ತಡ ನಿರ್ವಹಣೆಯಲ್ಲಿ ಯೋಗ ತುಂಬಾ ಸಹಕಾರಿಯಾಗಿದೆ. ಒತ್ತಡದ ದಾವಂತದ ಬದುಕಿನಲ್ಲಿ ಪ್ರತಿನಿತ್ಯ ನಾವು ಯೋಗ ಪ್ರಾಣಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಂಡರೆ ಮಾನಸಿಕ ನೆಮ್ಮದಿ ಮತ್ತು ಆರೋಗ್ಯ ವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದರು. ನಿಯಮಿತ ಆಹಾರ ಪದ್ಧತಿ ಕ್ರಮಬದ್ಧವಾದಂತಹ ಜೀವನಶೈಲಿರೂಡಿಸಿಕೊಳ್ಳಿ ಎಂದು ಕರೆ ನೀಡಿದರು. ಶಿವಗಂಗಾ ಯೋಗ ಕೇಂದ್ರದ ಗುರುಗಳಾದ ಯೋಗಾಚಾರ್ಯ ಶ್ರೀ ರುದ್ರಾರಾಧ್ಯ ಅವರು ಯೋಗ ಮಾಡುವುದರಿಂದ ನಾವು ಆರೋಗ್ಯವಾಗಿ ಇರುವುದರ ಜೊತೆ ಸಮಾಜದ ಸ್ವಾಸ್ಥವನ್ನು ಕಾಪಾಡಿಕೊಂಡು ಬರಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಬಳ್ಳೇಕೆರೆ ಸಂತೋಷ ಪ್ರಾಸ್ತಾವಿಕವಾಗಿ ಮಾತನಾಡಿ ಈ 21 ದಿನಗಳ ಕಾಲ ನಡೆಯುವ ಯೋಗ ಶಿಬಿರವನ್ನು ಅತ್ಯಂತ ಯಶಸ್ವಿಯಾಗಿ ಪ್ರಯೋಜನ ಪಡೆದುಕೊಳ್ಳಿ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ರವೀಂದ್ರ ಹಾಗೂ ಶಿವಗಂಗಾ ಯೋಗ ಕೇಂದ್ರದ ಯೋಗ ಶಿಕ್ಷಕರುಗಳಾದ ಚಂದ್ರಶೇಖರಯ್ಯ ನೀಲಕಂಠರಾವ್, ಡಾ.ನಾಗರಾಜ್ ಪರಿಸರ, ಶ್ರೀ ಅಶೋಕ್, ಶ್ರೀ ರವಿ, ಶ್ರೀಮತಿ ವಿಜಯ ಬಾಯರಿ , ಜಗದೀಶ್. ಜಿ ವಿಜಯಕುಮಾರ್ ಉಪಸ್ಥಿತರಿದ್ದರು.
Shivaganga Yoga Center ಮಾನಸಿಕ ಒತ್ತಡ ನಿರ್ವಹಣೆಯಲ್ಲಿ ಯೋಗ ತುಂಬಾ ಸಹಕಾರಿ- ಡಾ.ಬಿ.ಸಿ.ಪೃಥ್ವಿ
Date: