International Women’s Day ಇಂದು ಮಹಿಳೆಯರು ಸ್ವಾವಲಂಬಿ ಬದುಕನ್ನು ನಡೆಸುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲು ಮಹಿಳೆ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆ ಪಡುವಂತಹ ವಿಷಯ ಎಂದು ಜೆಸಿಐ ಶಿವಮೊಗ್ಗ ಸ್ಟಾರ್ಸ್ ಅಧ್ಯಕ್ಷ ಕಾರ್ಕಳ ಗಣೇಶ್ ರಾಮೇಶ್ ಪೈ ತಿಳಿಸಿದರು. ಶಿವಮೊಗ್ಗ ನಗರದ ಲತಾ ಬ್ಯೂಟಿ ಸಲೂನ್ ಅವರ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಹೆಣ್ಣು ಸಂಸಾರದ ಕಣ್ಣು ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ, ಇಡೀ ದಿನ ಕುಟುಂಬದ ಸದಸ್ಯರ ಯೋಗಕ್ಷೇಮ ನೋಡಿಕೊಂಡು ಕೊನೇ ಉಸಿರಿರು ವವರೆಗೂ ಸಂಸಾರಕ್ಕಾಗಿ ದುಡಿಯುತ್ತಾಳೆ ಎಂದು ತಿಳಿಸಿದರು.
ಪತಿಯ ದುಡಿಮೆಗೆ ಸಹಕಾರಿ ಯಾಗಿ, ಮಕ್ಕಳ ಆರೋಗ್ಯ, ಓದಿಗೆ, ಏಳಿಗೆಗೆ ಸದಾ ಶ್ರಮಿಸುತ್ತಾಳೆ. ಉದ್ಯೋ ಗಿಯಾಗಿದ್ದರೆ ಹೊರಗೂ ದುಡಿದು, ಮನೆಯಲ್ಲೂ ದುಡಿಯುತ್ತಾಳೆ. ಮಹಿಳೆ ತ್ಯಾಗಮಯಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಯೂಟಿ ಪಾರ್ಲರ್ ಸಿಬ್ಬಂಧಿಗಳಿಗೆ ಬ್ಯೂಟಿಷಿಯನ್ ತರಬೇತಿ ಕರ‍್ಯಕ್ರಮ ನಡೆಸಿ, ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಅತಿಥಿ ಡಾ. ಶೋಭಾ ಗಿರೀಶ್, ಐಪಿಪಿ ನವೀನ್ ಕುಮಾರ್ ಎನ್.ವಿ, ಸಂಸ್ಥಾಪಕ ಅಧ್ಯಕ್ಷೆ ಅಶ್ವಿನಿ ಇ.ಎಂ, ಕಾರ್ಯದರ್ಶಿ ಪ್ರಿಯಾಂಕಾ ಎಸ್.ಎಂ, ಲೇಡಿ ಜೆಸಿ ಲತಾ ಗೋವಿಂದ್ ಮತ್ತು ಕಿಶನ್ ಸೇರಿದಂತೆ ಹಲವರಿದ್ದರು.
International Women’s Day ಕುಟುಂಬ ಕ್ಷೇಮಕ್ಕಾಗಿ ಕೊನೆ ಉಸಿರಿರುವವರೆಗೂ ಮಹಿಳೆಯ ತ್ಯಾಗ ದೊಡ್ಡದು- ಗಣೇಶ್ ರಮೇಶ್ ಪೈ
Date: