State Film Awards 2020ನೇ ಸಾಲಿನ ಆಯ್ಕೆ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ 2020ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದ ಒಟ್ಟು 71 ಚಲನಚಿತ್ರಗಳನ್ನು ವೀಕ್ಷಿಸುವಾಗ ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿ ನೀಡುವ ಪ್ರಮಾಣ ಪತ್ರಗಳನ್ನು ಆರಂಭದಲ್ಲಿಯೇ ಪರಿಶೀಲಿಸಿದ್ದು ಸಮಿತಿಯು ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ, ಒಮ್ಮತದಿಂದ ಕನ್ನಡ ಭಾಷೆಯ 1) ಭುಗಿಲು, 2)ಕನಸು ಮಾರಾಟಕ್ಕಿದೆ, 3)ಡೊಳ್ಳು, 4) ಕಲ್ಯಾಣ ಕುವರ ಹಾಗೂ ತುಳು ಪ್ರಾದೇಶಿಕ ಭಾಷೆಯ 5) ಶಕಲಕ ಬೂಮ್ ಬೂಮ್ ಚಲನಚಿತ್ರಗಳನ್ನು ವೀಕ್ಷಿಸಿರುವುದಿಲ್ಲ.
State Film Awards ಈ ಚಲನಚಿತ್ರಗಳು 2020ನೇ ಕ್ಯಾಲೆಂಡರ್ ವರ್ಷದಲ್ಲಿ ಪ್ರಮಾಣ ಪತ್ರ ಪಡೆದುಕೊಂಡಿದ್ದರೂ, ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಂಡು ಮುಂದಿನ ವರ್ಷಗಳಿಗೆ ಅನುಮೋದಿತ ಮರು ಪ್ರಮಾಣಪತ್ರ ಪಡೆದುಕೊಂಡಿದ್ದ ಹಿನ್ನೆಲೆಯಲ್ಲಿ ಮೇಲ್ಕಂಡ ಚಲನಚಿತ್ರಗಳನ್ನು ಆಯಾ ವರ್ಷಕ್ಕೆ ಅನ್ವಯಿಸಿಕೊಂಡು ಮರು ಅರ್ಜಿ ಸಲ್ಲಿಸಲು ಅವಕಾಶವಿರುವ ಹಿನ್ನೆಲೆಯಲ್ಲಿ ಈ ಚಿತ್ರಗಳನ್ನು ಸಮಿತಿಯು ವೀಕ್ಷಿಸಿರುವುದಿಲ್ಲ. ಈ ಐದು ಚಲನಚಿತ್ರಗಳನ್ನು ಹೊರತು ಪಡಿಸಿ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಯು 66 ಚಲನಚಿತ್ರಗಳನ್ನು ವೀಕ್ಷಿಸಿ, 2020ನೇ ಕ್ಯಾಲೆಂಡರ್ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಾಗಿ ಒಮ್ಮತದಿಂದ ಆಯ್ಕೆ ಮಾಡಲಾಗಿದೆಯೆಂದು ತಿಳಿಸುತ್ತಾ, ಪ್ರಶಸ್ತಿಗಳ ವಿವರಗಳನ್ನೊಳಗೊಂಡ ಅನುಬಂಧ-1ರ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ