Shivaganga Yoga Kendra ಸದೃಢವಾದ ಆರೋಗ್ಯ ಯುತ ದೇಹವೇ ನಿಜವಾದ ಸಂಪತ್ತು ಪ್ರತಿದಿನ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎಂದು ಯಾರು ಯೋಗ ಪ್ರಾಣಾಯಾಮ ಧ್ಯಾನ ಮಾಡುತ್ತಾರ ಅವರು ದೀರ್ಘಾಯುಷ್ಯ ಉಳ್ಳವರಾಗುತ್ತಾರೆ ಹಾಗೂ ಸದಾ ಲವಲವಿಕೆಯಿಂದ ಇರುತ್ತಾರೆ ಪ್ರತಿದಿನ ನಮಗೋಸ್ಕರ ಒಂದು ಗಂಟೆಗಳ ಕಾಲ ಮಾಡುವ ಯೋಗ ಇಡೀ ದಿನವನ್ನು ಚೈತನ್ಯ ಭರಿತವಾಗಿ ಇರಿಸುತ್ತದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಯೋಗಾಚಾರ್ಯ ಸೀಮೆ ರುದ್ರಾರಾಧ್ಯ ರವರು ಅಭಿಮತ ವ್ಯಕ್ತಪಡಿಸಿದರು.
ಅವರು ಶಿವಮೊಗ್ಗ ಕೃಷಿ ನಗರದ ಯೋಗ ಶಾಖೆಗೆ ಭೇಟಿ ನೀಡಿ ಶಿಬಿರಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದರು ಔಷಧಿ ಮಾತ್ರೆಯಿಂದ ಗುಣವಾಗದೆ ಇರುವ ಅನೇಕ ಕಾಯಿಲೆಗಳು. ಇಂದು ಯೋಗದಿಂದ ಪರಿಹಾರ ಕಂಡುಕೊಂಡಿವೆ ಸದೃಢ ಸಮಾಜ ನಿರ್ಮಾಣದಲ್ಲಿ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಯೋಗವು ಸಹ ಪ್ರಮುಖ ಪಾತ್ರ ವಹಿಸಿದೆ ಎಂದು ನುಡಿದರು ಯೋಗ ಪ್ರಾಣಯಾಮ ಧ್ಯಾನದಿಂದ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವುದರಿಂದ. ಉತ್ತಮ ಆರೋಗ್ಯ ನಿರ್ಮಾಣವಾಗುತ್ತದೆ. ಯೋಗವು ಮನೆ ಮನಗಳನ್ನು ತಲುಪಬೇಕು. ನಗರದಲ್ಲಿ 33 ಕೇಂದ್ರಗಳಲ್ಲಿ ಯಶಸ್ವಿಯಾಗಿ ಈ ದಿನ ಯೋಗ ಪ್ರಾಣಾಯಾಮ ಧ್ಯಾನದ ಶಿಬಿರಗಳು ನಡೆಯುತ್ತೇವೆ ಅಂದರೆ ಅದಕ್ಕೆ ಶಿಕ್ಷಕರ ಹಾಗೂ ಸಾರ್ವಜನಿಕರ ಸಹಕಾರ ತುಂಬಾ ಮುಖ್ಯವಾಗಿದೆ ಸಾವಿರಕ್ಕೂ ಹೆಚ್ಚು ಯೋಗಪಟುಗಳು ಇಂದು ಅಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಶಕ್ತಿ ವೃದ್ಧಿಯಾಗುತ್ತದೆ ಎಂದು ನುಡಿದರು.
Shivaganga Yoga Kendra ಶಿಬಿರದಲ್ಲಿ ಯೋಗ ಶಿಕ್ಷಕರಾದ ಚಂದ್ರಶೇಖರಯ್ಯ. ನಾಗರತ್ನಮ್ಮ ಚಂದ್ರಶೇಖರ್. ಜಿ ವಿಜಯಕುಮಾರ್. ಅನಿಲ್. ಪರಮೇಶ್ ಕೃಷ್ಣಮೂರ್ತಿ. ಜ್ಯೋತಿ ಟೀಕಾ ರೆ. ಶರ್ಮಿಳಾ ಮನು ವಿನ್ನು ವಿಜಯಕುಮಾರ್ ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದರು.