H.S. Sundaresh ಅಭಿವೃದ್ಧಿಯ ವಿಷಯದಲ್ಲಿ ನಾವು ಪಕ್ಷ ರಾಜಕಾರಣ ಮಾಡುವುದಿಲ್ಲ. ಜನತೆಯ ಸಮಸ್ಯೆ , ಆಕಾಂಕ್ಷೆಗಳಿಗೆ ಸ್ಪಂದಿಸುವುದೇ ನಮ್ಮ ಗುರಿ. ಪ್ರಸ್ತುತ ಐದು ಬಡಾವಣೆಗಳ ಸಂಯುಕ್ತ ಸಂಘವಾಗಿರುವ ಸಿರಿಮಲ್ಲಿಗೆ ನಿವಾಸಿ ಸಂಘದ ಬಡಾವಣೆಗೆ ಎರಡು ಉದ್ಯಾನವನ
ಅಭಿವೃದ್ಧಿಪಡಿಸಲು
ತಲಾ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನ ನೀಡಲಾಗುವುದು ಎಂದು ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಚ್.ಎಸ್.ಸುಂದರೇಶ್ ಹೇಳಿದರು.
ಅವರು ಶಿವಮೊಗ್ಗ ನಗರದ ಸಾಗರ ರಸ್ತೆಯ. ಪುರದಾಲ್ ಕ್ರಾಸ್ ನಲ್ಲಿ ಸಿರಿಮಲ್ಲಿಗೆ ನಿವಾಸಿಗಳ ಸಂಘದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
H.S. Sundaresh ಸೂಡಾದಿಂದ ನಿವೇಶನ ರಹಿತರಿಗೆ 5000 ನಿವೇಶನಗಳನ್ನ ಸೃಜಿಸುವ ಸಂಕಲ್ಪ ನನಗಿದೆ ಎಂದು ಸುಂದರೇಶ್ ತಮ್ಮಭಾಷಣದಲ್ಲಿ ತಿಳಿಸಿದರು. ಸಮಾರಂಭದಲ್ಲಿ ನಿವಾಸಿಗಳ ಸಂಘದ ಅಧ್ಯಕ್ಷ ಡಾ.ಸುಧೀಂದ್ರ, ಗೌರವ ಅಧ್ಯಕ್ಷರಾದ ಅಸಗೋಡು ಚಂದ್ರಕಾಂತ್, ಓಂಕಾರಪ್ಪ, ಉಪಾಧ್ಯಕ್ಷ ದೇವರಾಜ್, ಶರಣಪ್ಪ ಓಲೆಕಾರ್. ಕಾರ್ಯದರ್ಶಿ ಶ್ರೀಧರ್, ,ಸಹ ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಖಜಾಂಚಿ ಮಹೇಶ್ ಯಲಿಗಾರ್ ಉಪಸ್ಥಿತರಿದ್ದರು .
H.S. Sundaresh ಸಿರಿಮಲ್ಲಿಗೆ ಬಡಾವಣೆಗಳಿಗೆ ಎರಡು ಪಾರ್ಕ್ ನಿರ್ಮಾಣಕ್ಕೆ ರೂ ಐವತ್ತು ಲಕ್ಷ ಸೂಡಾದಿಂದ ನೀಡುವೆ – ಎಚ್.ಎಸ್.ಸುಂದರೇಶ್
Date: