Rotary Shivamogga ಪ್ರಸ್ತುತ ಮನೆಗಳಲ್ಲಿ ಕಥೆಗಳನ್ನು ಹೇಳುವವರ ಸಂಖ್ಯೆ ಕ್ಷೀಣಿಸುತ್ತಿದ್ದು, ಮೊಬೈಲ್ ಹಾವಳಿಯಿಂದ ಮಕ್ಕಳ ಮನಸ್ಸು ಸಂಕುಚಿತವಾಗುತ್ತದೆ. ಉತ್ತಮ ಕಥೆಗಳನ್ನು ಆಲಿಸುವುದರಿಂದ ಮಕ್ಕಳಲ್ಲಿ ಕ್ರೀಯಾತ್ಮಕ ಆಲೋಚನಾ ಶಕ್ತಿ ವೃದ್ಧಿಯಾಗುತ್ತದೆ ಎಂದು ಲೇಖಕಿ ಉಷಾ ನಟೇಶ್ ಕಾಸರವಳ್ಳಿ ಹೇಳಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಮಾಯಣ, ಮಹಾಭಾರತ ಕುರಿತಾದ ಕಥನಗಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಹೇಳುವ ಕೆಲಸ ಮನೆಗಳಲ್ಲಿ ಆಗಬೇಕು. ಕಿರುತೆರೆ, ಬೆಳ್ಳಿತೆರೆಗಳನ್ನು ಕಥನಗಳನ್ನು ಪ್ರಸ್ತುತಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಪೊನ್ನಜ್ಜಿ ಕಥೆಗಳು ಬದುಕನ್ನು ಬದಲಾಯಿಸುವ ಜತೆಯಲ್ಲಿ ಮಾನಸಿಕ ಸಾಮಾರ್ಥ್ಯ ವೃದ್ಧಿಸುತ್ತದೆ. ಕಥೆಗಳು ನಮ್ಮ ಬಾಲ್ಯದ ಬದುಕನ್ನು ಉತ್ತಮಗೊಳಿಸುವ ಜತೆಯಲ್ಲಿ ಜೀವನ ಮೌಲ್ಯಗಳನ್ನು ಕಲಿಸುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ಯಶಸ್ಸಿನ ಕಥೆಗಳು ಎಲ್ಲರ ಬದುಕಿಗೂ ಸ್ಪೂರ್ತಿಯಾಗುತ್ತದೆ. ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಪ್ರೇರಕ ಶಕ್ತಿಯಾಗುತ್ತವೆ. ಬಾಲ್ಯದಲ್ಲಿ ಮಕ್ಕಳಿಗೆ ಜೀವನಮೌಲ್ಯ ತಿಳಿಸುವ ನೀತಿ ಕಥೆಗಳನ್ನು ಕಲಿಸಬೇಕು ಎಂದು ಹೇಳಿದರು.
Rotary Shivamogga ಆಕಾಶವಾಣಿ ಕಲಾವಿದರಾದ ಉಷಾ ನಟೇಶ್ ಕಾಸರವಳ್ಳಿ ಅವರನ್ನು ಸನ್ಮಾನಿಸಲಾಯಿತು. ನಂತರ ಸದಸ್ಯರೊಂದಿಗೆ ಸಂವಾದ ನಡೆಸಲಾಯಿತು. ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಡಾ. ಪರಮೇಶ್ವರ ಶಿಗ್ಗಾವ್, ನಟೇಶ್ ಕಾಸರವಳ್ಳಿ, ಎಚ್.ಬಿ.ಆದಿಮೂರ್ತಿ, ಡಾ. ಅರುಣ್, ಡಾ. ಧನಂಜಯ, ಎನ್.ಎಚ್.ಶ್ರೀಕಾಂತ್, ಕಿಶೋರ್‌ಕುಮಾರ್, ಗಣೇಶ್, ಶ್ರೀನಿವಾಸ್, ಕೃಷ್ಣಮೂರ್ತಿ, ರೋಟರಿ ಶಿವಮೊಗ್ಗ ಪೂರ್ವ, ಇನ್ನರ್‌ವ್ಹೀಲ್ ಶಿವಮೊಗ್ಗ ಸದಸ್ಯೆಯರು ಹಾಜರಿದ್ದರು.