Monday, March 10, 2025
Monday, March 10, 2025

International Women’s Day ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಛಾಪು ಮೂಡಿಸಬೇಕು- ಶಾರದಾ ಪೂರ್ಯಾನಾಯಕ್

Date:

International Women’s Day ಮಹಿಳೆಯರು ಎಲ್ಲಾ ಕ್ಷೇತ್ರದಲ್ಲು ತಮ್ಮ ಛಾಪನ್ನು ಮೂಡಿಸುವ ಮೂಲಕ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಸಾಧನೆ ಶಿಖರವನ್ನು ಏರಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯನಾಯ್ಕ್‌ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಇತಿಹಾಸದಲ್ಲಿ ಮಹತ್ವವಾದ ಸ್ಥಾನ ಇದೆ. ಶತಮಾನಗಳಿಂದ ಸಾಕಷ್ಟು ಸಮಸ್ಯೆಗಳ ವಿರುದ್ದ ಸಂಘಟನೆ ಕಟ್ಟಿಕೊಂಡು ಹೋರಾಡುತ್ತಾ ಬಂದಿದ್ದಾರೆ. ಅದರಿಂದ ಬಹಳಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಅದರ ಜೊತೆ ಜೊತೆಗೆ ಕುಟುಂಬದ ನಿರ್ವಹಣೆಯನ್ನು ಕೂಡ ಮಾಡುತ್ತಾ ಬಂದಿರುವ ಅವರು ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಬೇಕು ಎಂದರು.
ಸಾವಿತ್ರ ಬಾಫುಲೆ , ಅಂಬೇಡ್ಕರ್‌ ಅವರುಗಳನ್ನು ನಾವೆಲ್ಲ ಈ ಕ್ಷಣದಲ್ಲಿ ನೆನೆಯಬೇಕು. ಮಹಿಳೆಯರಿಗೆ ಶಿಕ್ಷಣವನ್ನೆ ನೀಡದ ಸಂದರ್ಭದಲ್ಲಿ ಫುಲೆ ಅವರು ಇಂತಹ ಎಲ್ಲ ಕಟ್ಟಳೆಗಳನ್ನು ಮೀರಿ ಶಿಕ್ಷಣವನ್ನು ಪಡೆದರು. ಅಂಬೇಡ್ಕರ್‌ ರವರು ಮಹಿಳೆಯರಿಗೆ ಶಿಕ್ಷಣ, ಮತದಾನ ಹಕ್ಕನ್ನು ಕೊಡಿಸುವ ಮೂಲಕ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸಬಲರನ್ನಾಗಿ ಮಾಡಿದರು. ನಾವೆಲ್ಲ ಅವರ ದಾರಿಯಲ್ಲಿ ಸಾಗಬೇಕು ಎಂದರು.
ವಿಧಾನ ಪರಿಷತ್‌ ಶಾಸಕರಾದ ಬಲ್ಕೀಶ್ ಬಾನು ಮಾತನಾಡಿ, ನಾವೆಲ್ಲ ನಮ್ಮ ಹಕ್ಕು, ನಮ್ಮ ತನ ಹಾಗೂ ಮಹಿಳೆಯ ಮೇಲೆ ನಡೆಯುತ್ತಿರುವ ಶೋಷಣೆ, ಅತ್ಯಾಚಾರ, ದೌರ್ಜನ್ಯಗಳಂತಹ ಕೃತ್ಯಗಳ ಬಗ್ಗೆ ಚಿಂತನೆ ಮಾಡಬೇಕಿದೆ. ನಾವು ಹೆಣ್ಣು ನಮ್ಮಿಂದ ಏನನ್ನು ಮಾಡಲು ಆಗುವುದಿಲ್ಲ ಎಂಬ ಆಲೋಚನೆ ಬಿಡಬೇಕು. ನಮಗೆ ನಾವೇ ಆತ್ಮಸ್ಥೈರ್ಯ ತುಂಬಿಕೊಳ್ಳಬೇಕು. ನಮಗೆ ಎಲ್ಲಿಯವರೆಗೆ ನಮ್ಮ ಮೇಲೆ ನಂಬಿಕೆ ಬರುವುದಿಲ್ಲವೋ ಅಲ್ಲಿಯವರೆಗೂ ನಮ್ಮನ್ನು ನಾವು ಕಾಪಾಡಿಕೊಳ್ಳಲು ಆಗುವುದಿಲ್ಲ ಎಂದರು.
ಕೇವಲ ಸಂಸ್ಕಾರ, ಸಂಸಾರ ನಡೆಸುವುದು ಮಾತ್ರ ಹೆಣ್ಣಿನ ಜವಾಬ್ದಾರಿಯಲ್ಲ. ಈ ಸಮಾಜಕ್ಕೆ ಹೆಣ್ಣಿನ ಅವಶ್ಯಕತೆ ಇದೆ. ಆಕೆ ಎಲ್ಲ ಕ್ಷೇತ್ರದಲ್ಲೂ ಮುಂದೆ ಬರಬೇಕು, ಸಾಧನೆ ಮಾಡಬೇಕು. ನಾನಿಲ್ಲದಿದ್ದರೆ ಈ ಸಮಾಜವಿಲ್ಲ ಎಂಬ ತೀರ್ಮಾನ ಮಾಡಬೇಕು. ಹಾಗಾಗಿ ಈಗಿನ ಸರ್ಕಾರ ಮಹಿಳೆಯ ಸಬಲೀಕರಣದ ದೃಷ್ಟಿಯಿಂದಲೆ ಗ್ಯಾರಂಟಿ ಯೋಜನೆ ಕೊಟ್ಟಿರೋದು ಹೊರತು ಯಾವುದೇ ರಾಜಕೀಯವಾಗಿ ಅಲ್ಲ. ಹೆಣ್ಣು ಸಾಮಾಜಿಕವಾಗಿ ಹೂಡಿಕೆ ಮಾಡಿದರೆ ಮಾತ್ರ ಸಮಾಜದ ಮುಖ್ಯಭೂಮಿಕೆಗೆ ಬರಲು ಸಾಧ್ಯ ಎಂದರು.
ಶಾಸಕರಾದ ಎಸ್‌.ಎನ್‌.ಚನ್ನಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ಕುಟುಂಬ ಚೆನ್ನಾಗಿ ಇರಬೇಕೆಂದರೆ ಮಹಿಳೆ ಚೆನ್ನಾಗಿ ಇರಬೇಕು. ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನನಾಡಿ ಕಾರ್ಯಕರ್ತರು ಮಾಡಿದ ಕೆಲಸ ಅವಿಸ್ಮರಣೀಯ. ಇಂತಹ ಒಳ್ಳೆಯ ಕಾರ್ಯವನ್ನು ಗುರುತಿಸುವುದು ನಮ್ಮ ಸಮಾಜದ ಕರ್ತವ್ಯವಾಗಿದ್ದು ಈ ಮೂಲಕ ಅವರೆಲ್ಲರಿಗೂ ಅಭಿನಂದನೆ ತಿಳಿಸುತ್ತೇನೆ ಎಂದರು.
ಹೆಣ್ಣು ಪ್ರಕೃತಿ. ಅವಳನ್ನು ಆರಾಧಿಸಬೇಕು. ಭಾರತ ದೇಶ ಮಾತ್ರ ಹೆಣ್ಣಿಗೆ ಆರಾಧನೆ ಸ್ಥಾನ ನೀಡಿರುವುದು. ತಾಯಿ ತಮ್ಮ ಮಕ್ಕಳು ಎಷ್ಟೇ ಕೆಟ್ಟವರಾಗಿದ್ದರು ಅವರನ್ನು ತಿದ್ದಿ ಸರಿಯಾದ ದಾರಿಗೆ ತಂದು ಸಮಾಜಕ್ಕೆ ಒಬ್ಬ ಒಳ್ಳೆಯ ಮಾದರಿ ಮಕ್ಕಳನ್ನಾಗಿ ಮಾಡುತ್ತಾರೆ. ಮಕ್ಕಳಲ್ಲಿ ಯಾವುದೇ ಸ್ವಾರ್ಥಭಾವವನ್ನು ತುಂಬದೆ ಸದಾ ದೇಶ, ಸಮಾಜ ಸೇವೆಯಲ್ಲಿ‌ ತೊಡಗಿಕೊಳ್ಳಲು ಬೆಂಬಲಿಸುತ್ತಾರೆ. ಹೀಗೆ ಇಡೀ ತಾಯಿಯಂದಿರ ಸಮೂಹವು ನಮಗೆ ಶಕ್ತಿ ಕೊಡುವಂತಹ ಕೆಲಸ ಮಾಡಿದ್ದಾರೆ ಎಂದರು.
ಹೆಣ್ಣಿನ ಶಕ್ತಿ ಅಪರಿಮಿತವಾದದ್ದು, ಅದು ಒಳ್ಳೆಯದಕ್ಕೆ ಉಪಯೋಗ ಆಗಬೇಕು. ಮಸುದೈವ ಕುಟುಂಬಕಂ ಎಂಬ ಪರಿಲ್ಪನೆ ಬಂದಿದೆ . ಹೆಣ್ಣಿನ ಸಹನೆ, ತ್ಯಾಗದಿಂದ. ಆಕೆ ಯಾವತ್ತೂ ತನ್ನ ಹಕ್ಕನ್ನು ಚಲಾಯಿಸಲಿಲ್ಲ. ಕುಟುಂಬಕ್ಕಾಗಿ ಅನೇಕ ತ್ಯಾಗಗಳನ್ನು ಮಾಡುತ್ತಾ ಕರ್ತವ್ಯ ನಿರ್ವಹಿಸುವಳು. ಪ್ರೀತಿಯೇ ಇಲ್ಲದೆ ಹೋದರೆ ಹಠ ಗೆಲ್ಲಲ್ಲು ಆಗದು ಎಂದು ಅರಿತಿರುವ ಹೆಣ್ಣು ಪ್ರೀತಿಯ ಮೂಲಕವೇ ಎಲ್ಲವನ್ನೂ ಪಡೆಯುತ್ತಿದ್ದಾಳೆ ಎಂದರು.
ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ, ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಪಲ್ಲವಿ ಮಾತನಾಡಿ, ಮಹಿಳೆಯರಿಗೆ ಈ ಸಮಾಜದಲ್ಲಿ ಸಾಧನೆ ಮೆಟ್ಟಿಲು ಏರಲು ಅಷ್ಟು ಸುಲಭವಿಲ್ಲ. ಯಾಕೆಂದರೆ ಯಾವುದೇ ಕ್ಷೇತ್ರಕ್ಕೂ ಹೋದರೂ ಹೆಣ್ಣನ್ನು ನಿಂದಿಸುವ , ಆಕೆಯನ್ನು ತುಳಿಯುವ ಪ್ರಯತ್ನ ನಡೆಯುತ್ತಲೆ ಇರುತ್ತದೆ. ಅದು ಹೆಣ್ಣಿಗೆ ಕಬ್ಬಿಣದ ಕಡಲೆಯಂತಾಗಿದೆ. ಆದರೆ ನಮ್ಮೊಳಗಿನ ಕಿಚ್ಚನ್ನು ನಾವು ಬಿಡಬಾರದು. ಅದು ಸದಾ ಉರಿಯುತ್ತಲೇ ಇರಬೇಕು. ಅದರಿಂದ ಈ ಸಮಾಜವನ್ನು ಸರಿಪಡಿಸುವಲ್ಲಿ ಮುಂದಾಗಬೇಕು ಎಂದರು.
ನಾವು ಹೆಣ್ಣು ಮಕ್ಕಳನ್ನು ಅಬಲೆಯಂತೆ ಮಾಡುತ್ತಿದ್ದೇವೆ. ಅವಳಿಗೆ ೧೮ ವರ್ಷ ದಾಟಿದ ಕೂಡಲೆ ಸಂಪ್ರದಾಯಕ ಕಟ್ಟುಪಾಡುಗಳಿಗೆ ನೂಕಿ ಮದುವೆ ಮುಂದಾಗುತ್ತಿದ್ದೇವೆ. ಆ ಮೂಲಕ ಶಿಕ್ಷಣ, ಉದ್ಯೋಗ, ಆಕೆಯ ಆಸೆ-ಆಕಾಂಕ್ಷೆಗಳಿಂದ ದೂರ ಮಾಡುತ್ತಿದ್ದೇವೆ. ಹೆಣ್ಣು ಮಕ್ಕಳಿಗೆಂದೆ ಆಕೆ ಸಬಲರಾಗಬೇಕೆಂದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಸಂವಿಧಾನದ ಮೂಲಕ ಶಿಕ್ಷಣ, ಮತದಾನದ ಹಕ್ಕನ್ನು ಕೊಟ್ಟಿದ್ದಾರೆ. ಇದಕ್ಕೆಂದೆ ಅಂಬೇಡ್ಕರ್‌ ತಮ್ಮ ಕೇಂದ್ರ ಕಾನೂನು ಮಂತ್ರಿ ಪದವಿಗೆ ರಾಜೀನಾಮೆ ನೀಡಿದರು. ಇಂತಹ ಮಹನೀಯರ ಹೋರಾಟ ಹಾಗೂ ತ್ಯಾಗವನ್ನು ಮರೆಯಬಾರದು. ಇಡೀ ಮಹಿಳೆ ಸಮುದಾಯವೇ ಅಂಬೇಡ್ಕರನ್ನು ದೇವರಂತೆ ಪೂಜೆ ಮಾಡಬೇಕು. ಮಹಿಳೆಯರಿಗೆ ತಮ್ಮ ಹಕ್ಕನ್ನು ಪಡೆಯಲು ನಾವೆಲ್ಲ ಅವಕಾಶ ಮಾಡಿಕೊಡಬೇಕು ಎಂದರು.
ಪ್ರಸ್ತುತದಲ್ಲಿ ಮಹಿಳೆಯರಲ್ಲಿ ಕಾನೂನು ಅರಿವು ಮೂಡಿಸುವುದು ಅವಶ್ಯಕ. ಯಾಕೆಂದರೆ ಸಮಾಜದಲ್ಲಿ ಅತ್ಯಾಚಾರ, ಶೋಷಣೆ, ಲೈಂಗಿಕ ದೌರ್ಜನ್ಯಗಳು ಮಹಿಳೆಯ ಮೇಲೆ ನಿರಂತರವಾಗಿ ನಡೆಯುತ್ತಲೆ ಇವೆ. ಎಲ್ಲಿಯವರೆಗೆ ಕಾನೂನು ಕ್ರಮ ಇರುತ್ತದೆಯೋ ಅಲ್ಲಿಯವರೆಗೆ ಇಂತಹ ಕೃತ್ಯ ನಡೆಯುವುದಿಲ್ಲ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಗತಿಪರರಾಗಿ ಯೋಚಿಸೊಣ. ಒಂದಾಗಿ ಸಮಾಜವನ್ನು ಕಟ್ಟುವಲ್ಲಿ ಶ್ರಮಿಸೊಣ ಎಂದರು.
International Women’s Day ಕುವೆಂಪು ವಿವಿಯ ಎನ್‌ಎಸ್‌ಎಸ್‌ ನ ಕಾರ್ಯಕ್ರಮ ಸಂಯೋಜನಾಧಿಕಾರಿ ಶುಭಾ ಮರವಂತೆ ಉಪನ್ಯಾಸ ನೀಡಿ, ಮಹಿಳೆಯರು ಎಂದ ಕೂಡಲೆ ನಮ್ಮ ಮನಸ್ಸಿನಲ್ಲಿ ಮೂಡುವ ಭಾವನೆ ದೇವಿಯ ಚಿತ್ರಣ. ನಮ್ಮ ಭಾರತವೇ ಹೆಣ್ಣನ್ನು ಗೌರವಿಸುವ ಸಂಸ್ಕೃತಿಯ ಹೊಂದಿದ್ದು, ಹೆಣ್ಣು ಇಲ್ಲದಿದ್ದರೆ ಸಮಾಜವೇ ಮುಂದುವರೆಯಲು ಆಗದು. ಹೆಣ್ಣಿನ ದನಿಯು ಪ್ರತಿ ವಲಯದಲ್ಲೂ ದಾಖಲಿಸಬೇಕು. ಮಹಿಳೆಯರು ತಮ್ಮ ಮಾತುಗಳಿಂದ ಅವರ ಅಸ್ಮಿತೆಯನ್ನು ಕಳೆದುಕೊಳ್ಳದೆ ಎಚ್ಚರವಹಿಸಬೇಕು ಎಂದರು.
ಶತಮಾನದಿಂದ ಈ ಸಮಾಜ ನಮ್ಮನ್ನು ಶೋಷಣೆಯಿಂದ ಅವಕಾಶ ವಂಚಿತರನ್ನಾಗಿ ಮಾಡಿದೆ. ಈ ಉದ್ಧೇಶದಿಂದ ಯುರೋಪಿನಲ್ಲಿ ಮಹಿಳಾ ಚಳುವಳಿ ಹುಟ್ಟಿಕೊಂಡಿತು. ತನ್ನ ಕೆಲಸಕ್ಕೆ ತಕ್ಕಂತಹ ಕೂಲಿ ನೀಡಬೇಕೆಂದು ಮಹಿಳೆಯರು ಹೋರಾಟ ಮಾಡಿದರು. ಅದರ ಫಲವಾಗಿ ಯಶಸ್ಸು ಪಡೆದು. ನಂತರ ಕಾಲದ ಬದಲಾದಂತೆ ಹೆಣ್ಣು ಸಬಲೀಕರಣಗೊಂಡಳು ಈಗ ಇಡೀ ದೇಶವೇ ಹೆಣ್ಣಿನ ಪರವಾಗಿ ನಿಂತಿದೆ. ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಸಬಲೀಕರಣಗೊಂಡು ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ ಎಂದರು.
ಪ್ರಸ್ತುತದ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆಯಿಲ್ಲದೆ ಉದ್ಯೋಗ ಸ್ಥಳ, ಶಾಲಾ-ಕಾಲೇಜು ಒಳಗೊಂಡಂತೆ ಎಲ್ಲ ಹಂತದಲ್ಲು ದೌರ್ಜನ್ಯ ನಡೆಯುತ್ತಿದೆ. ನಾವೆಲ್ಲರೂ ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನಾಡಿ ಕಾರ್ಯಕರ್ತರು ಇಂತಹ ಕೃತ್ಯದ ಬಗ್ಗೆ ಮನೆ ಮನೆಗೆ ತಿಳಿಸಿ ಜಾಗೃತಿ ಮೂಡಿಸಬೇಕು. ಆ ಮೂಲಕ ಹೆಣ್ಣು ತನ್ನ ಸ್ವಸಾಮರ್ಥ್ಯದ ಬಗ್ಗೆ ಆಲೋಚನೆ ಮಾಡಬೇಕು ಎಂದರು ಕಿವಿ ಮಾತು ಹೇಳಿದರು.
ಹೆಣ್ಣು ನಾನು ಕುಟುಂಬಕ್ಕೆ ಮಾತ್ರಕ್ಕೆ ಸಿಮೀತವಲ್ಲದೆ ಸಮಾಜಕ್ಕೆ ನನ್ನ ಅವಶಕ್ಯತೆ ಇದೆ ಎಂದು ಅರಿಯಬೇಕು. ಅಂಜಿಕೆ, ಆತಂಕ ಪಡದೆ ಸಮಾಜದಲ್ಲಿ ಮುನ್ನೆಲೆಗೆ ಬರಬೇಕು ಆ ಮೂಲಕ ಗಂಡು ಹೆಣ್ಣು ಸಮಾನವಾಗಿ ಜೊತೆ ಜೊತೆ ಸಾಗುವಂತಹ ವಾತಾವರಣ ನಿರ್ಮಾಣ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್, ಜಿಲ್ಲಾ ನಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್, ಡಿಹೆಚ್‌ಓ ಡಾ.ನಟರಾಜ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಿ.ಹೆಚ್‌.ಕೃಷ್ಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಜಿಲ್ಲಾ ನಿರೂಪಣಾಧಿಕಾರಿ ಡಾ. ಹೆಚ್‌. ಸಂತೋಷ್ ಕುಮಾರ್, ಬಾಲನ್ಯಾಯ ಮಂಡಳಿಯ ರೇಖಾ ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Shivamogga ಜೆಸಿಐ ನಲ್ಲಿ ತೊಡಗಿಸಿಕೊಂಡರೆ ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆ- ಸೂರ್ಯ ನಾರಾಯಣ ವರ್ಮ

JCI Shivamogga ಸಮಾಜಮುಖಿ ಚಟುವಟಿಕೆಗಳ ಜತೆಯಲ್ಲಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ...

Karnataka Lokayukta ಮಾರ್ಚ್ 18 ರಿಂದ 21 ವರೆಗೆ ರಾಜ್ಯ ಉಪಲೋಕಾಯುಕ್ತ ನ್ಯಾ.ಕೆ.ಫಣೀಂದ್ರ ಅವರ ಜಿಲ್ಲಾ ಕಾರ್ಯಕ್ರಮಗಳ ಮಾಹಿತಿ

Karnataka Lokayukta ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಮಾ. 18...

CM Siddharamaih ಕುರ್ಚಿ ಉಳಿಸಿಕೊಳ್ಳುವ ಯತ್ನದಲ್ಲಿ ಸಿದ್ಧರಾಮಯ್ಯನವರ ಬಜೆಟ್…!

CM Siddharamaih ಕರ್ನಾಟಕದ ಅಭಿವೃದ್ಧಿಗೆ ಪೂರಕವೇ ಅಥವಾ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ...

Guarantee Scheme ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ.‌ ಊಹಾಪೋಹಗಳಿಗೆ ಬೆಲೆಕೊಡಬೇಡಿ- ಸಿ.ಎಸ್.ಚಂದ್ರಭೂಪಾಲ್

Guarantee Scheme ಕರ್ನಾಟಕ ಸರ್ಕಾರದ ಮಹತ್ವದ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ,...