Supreme Court ಒಳಮೀಸಲಾತಿ ಜಾರಿಯಾಗುವುದರಿಂದ ಸಾಮಾಜಿಕ ನ್ಯಾಯ ಸಿಗುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ, ಕೂಡ ಕೇವಲ ವೋಟ್ ಬ್ಯಾಂಕ್ ತೆವಲಿಗಾಗಿ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್ ಇತ್ತೀಚೆಗೆ ವಿಜಯಪುರದ ಸಭೆಯೊಂದರಲ್ಲಿ ಒಳಮೀಸಲಾತಿ ವಿರೋಧಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ದಲಿತ ವಿದ್ಯಾರ್ಥಿ ಪರಿಷತ್ ಸಂಚಾಲಕ ಅಭಿಲಾಷ್ ಎನ್. ಹುರುಳಿಕೊಪ್ಪ ಆರೋಪಿಸಿದ್ದಾರೆ.
ಒಳಮೀಸಲಾತಿಯಿಂದಾಗಿ ಬಿಜೆಪಿ ಪಕ್ಷಕ್ಕೆ ಅಧಿಕಾರ ನಷ್ಟವಾಯಿತು, ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒಳಮೀಸಲಾತಿ ಕುರಿತು ಕ್ರಮ ತೆಗೆದುಕೊಳ್ಳಬಾರದು ಎಂದು ಹೇಳಿರುವುದನ್ನು ವಿರೋಧಿಸಿದ್ದೆನು. ಒಳ ಮೀಸಲಾತಿ ಜಾರಿಗೆ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದರೂ, ಸಮುದಾಯಗಳ ಮಧ್ಯ ಒಡಕು ಹುಟ್ಟಿಸುವ ಮೂಲಕ ಒಡೆದು ಆಳುವ ನೀತಿಯನ್ನು ತೋರಿರುವ ಬಸವನಗೌಡ ಪಾಟೀಲ್ ಯತ್ನಾಳರ ನಡೆಯನ್ನು ಉಗ್ರವಾಗಿ ಖಂಡಿಸುತ್ತೇನೆ. ಗೊಸುಂಬೆಯಂತೆ ಬಣ್ಣ ಬದಲಿಸಿ ಒಳಮೀಸಲಾತಿ ವಿರೋಧಿ ಹೇಳಿಕೆ ನೀಡಿರುವುದು ಅವರ ನೈತಿಕ ಅಧೋಗತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಮಾದಿಗ ಸಮುದಾಯದ ಓಟುಗಳನ್ನು ಪಡೆಯದೇ ತಾವು ಇಷ್ಟು ವರ್ಷಗಳಿಂದ ಗೆದ್ದಿರುವಂತೆ ಬಣ್ಣಿಸಿ ಮಾತನಾಡಿದ ಅವರ ಹೇಳಿಕೆಯಿಂದ ಸಮುದಾಯಕ್ಕೆ ಅತೀವ ನೋವುಂಟು ಮಾಡಿದೆ. ಯತ್ನಾಳ್ ಅವರ ಹಿಂದೆ ಮುಂದೆ ಸುತ್ತುತ್ತಿರುವ ಮಾದಿಗ ಸಮುದಾಯದ ಮುಖಂಡರು ಅವರ ಮಾದಿಗ ವಿರೋಧಿ ನೀತಿಯನ್ನು ಅರಿತು ಅವರನ್ನು ಬಹಿಷ್ಕಾರ ಮಾಡಬೇಕಾಗುತ್ತದೆ. ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಗೆ ಆಗುವವರೆಗೂ ಬ್ಯಾಕ್ ಲಾಕ್ ಹುದ್ದೆಗಳನ್ನು ನೇಮಕ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರು ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
Supreme Court ಎರಡು ತಿಂಗಳ ಹಿಂದೆ ವಿಜಯಪುರದ ಇಟ್ಟಂಗಿ ಭಟ್ಟಿಯಲ್ಲಿ ಮಾದಿಗ ಸಮುದಾಯದ ಕಾರ್ಮಿಕರ ಮೇಲೆ ಅಮಾನುಷ ಹಲ್ಲೆಯಾದ ಸಂದರ್ಭದಲ್ಲಿ ಇಡೀ ರಾಜ್ಯಾದ್ಯಂತ ಜನಸ್ಪಂದನೆ ದೊರೆತರೂ, ಅದೇ ಜಿಲ್ಲೆಯವರಾದ ಬಸವನಗೌಡ ಪಾಟೀಲ್ ಯತ್ನಾಳ್ ಮಾತ್ರ ಸೌಜನ್ಯಕ್ಕಾದರೂ ಒಂದು ಹೇಳಿಕೆ ಸಹ ನೀಡಲಿಲ್ಲ ಎಂಬುದನ್ನು ಮಾದಿಗ ಸಮುದಾಯ ಮರೆತಿಲ್ಲ. ಇದೀಗ ಯತ್ನಾಳ್ ತಮ್ಮ ಭಾಷಣದಲ್ಲಿ ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಮಾದಿಗ ಸಮುದಾಯದ ಓಟುಗಳನ್ನು ಪಡೆಯದೇ ತಾವು ಇಷ್ಟು ವರ್ಷಗಳಿಂದ ಗೆದ್ದಿರುವಂತೆ ಬಣ್ಣಸಿ ಮಾತನಾಡಿರುವುದನ್ನು ಕರ್ನಾಟಕದ ಇಡೀ ಮಾದಿಗ ಸಮುದಾಯಕ್ಕೆ ಅತೀವ ನೋವುಂಟು ಮಾಡಿದೆ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.