Samarpan Trust ಉದಯೋನ್ಮುಖ ಗಾಯಕರಾಗಲು ಬಯಸುವ ಸಂಗೀತಾಸಕ್ತರಿಗೆ ಪ್ರಸಿದ್ಧ ಗಾಯಕಿ ಸುರೇಖಾ ಹೆಗಡೆಯವರ ಸಂಗೀತ್ ಸಮರ್ಪಣ್ ಟ್ರಸ್ಟ್ ಉತ್ತಮ ಅವಕಾಶವನ್ನು ತೆರೆದಿಟ್ಟಿದ್ದು, ಇದೇ ಮಾ. 15ರ ಶನಿವಾರ, 16ರ ಭಾನುವಾರ ಆರ್‌ಟಿಓ ಕಛೇರಿ ರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ಎರಡು ದಿನಗಳ ಕಾಲ ಧ್ವನಿ ಸಂಸ್ಕರಣ, ಗ್ರಹಿಕೆ, ಜೊತೆಗೆ ಸುಗಮ ಸಂಗೀತದ ಕಲಿಕಾ ಶಿಬಿರ (ಕಾರ್ಯಾಗಾರ) ವನ್ನು ಆಯೋಜಿಸಲಾಗುತ್ತಿದೆ. ನಾಡಿನ ಹೆಸರಾಂತ ಸುಗಮ ಸಂಗೀತಗಾರರಾದ ಪುತ್ತೂರು ನರಸಿಂಹ ನಾಯಕ್, ಪ್ರಸಿದ್ಧ ಪಕ್ಕವಾದ್ಯ ಕಲಾವಿದ ಮ್ಯಾಂಡೋಲಿನ್ ಪ್ರಸಾದ್ ಹಾಗೂ ಟ್ರಸ್ಟ್ನ ಗಾಯಕಿ ಸುರೇಖಾ ಹೆಗಡೆಯವರು ಈ ಸುಗಮ ಸಂಗೀತ ಕಲಿಕಾ ಶಿಬಿರವನ್ನು ನಡೆಸಿಕೊಡಲಿದ್ದಾರೆ.
ಎಲ್ಲ ವಯೋಮಾನದ ಜಿಲ್ಲೆಯ ಗಾಯಕರಾಗಲು ಬಯಸುವ ಸಂಗೀತಾಸಕ್ತರೆಲ್ಲರಿಗೂ ಅವಕಾಶ ತೆರೆದಿದೆ. ಎರಡು ದಿನಗಳ ಈ ಶಿಬಿರಕ್ಕೆ ಒಬ್ಬರಿಗೆ 500ರೂ.ಗಳ (ಮಧ್ಯಾಹ್ನದ ಊಟ ಸೇರಿ) ಶುಲ್ಕ ನಿಗದಿಪಡಿಸಲಾಗಿದೆ.
Samarpan Trust ಆಸಕ್ತರು ತಮ್ಮ ಹೆಸರನ್ನು ಕೂಡಲೇ ನೋಂದಾಯಿಸಿಕೊಳ್ಳುವAತೆ ಕೋರಲಾಗಿದ್ದು, ವಿವರಗಳಿಗೆ 99803 15679 / 94816 62308ರಲ್ಲಿ ಸಂಪರ್ಕಿಸಬಹುದು.