Dr. Gururaj Karajagi ಮಕ್ಕಳು ರಜಾ ದಿನಗಳಲ್ಲಿ ಬರೆದ ಅನುಭವ ಸಂಗತಿಗಳನ್ನು ಹೊತ್ತಿಗೆ ರೂಪದಲ್ಲಿ ಹೊರತಂದಿರುವ ಅದ್ಭುತ ಕಾರ್ಯ ಎಂದು ಪ್ರಖ್ಯಾತ ವಾಗ್ಮಿ ಹಾಗೂ ಶಿಕ್ಷಣ ತಜ್ಞರಾದ ಡಾ. ಗುರುರಾಜ್ ಕರಜಗಿ ತಿಳಿಸಿದರು.
ಕುವೆಂಪು ರಂಗಮಂದಿರದಲ್ಲಿ ನಡೆದ “ಬುಗುರಿ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂತಹ ಕಾರ್ಯಕ್ರಮ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿರಬೇಕು ಎಂದು ತಿಳಿಸಿದರು.
ರಜೆಯ ದಿನಗಳಲ್ಲಿ ನೀಡಿದ ಯೋಜನೆಯ ಕಾರ್ಯವನ್ನು ರಸವತ್ತಾಗಿ ಬರೆಯಬಹುದು, ಪುಸ್ತಕದ ಸಾಕಾರ ರೂಪವನ್ನು ತರಬಹುದು ಎಂದು ಮಕ್ಕಳು ಸಾಬೀತುಮಾಡಿದರು. ಮಕ್ಕಳಲ್ಲಿದ್ದ ಅಡಗಿದ್ದ ಸೃಜನಾತ್ಮಕ ಲೇಖಕವನ್ನು ಈ ಬುಗುರಿ ಪುಸ್ತಕದಿಂದ ಬಂದಿದೆ” ಎಂದು ತಿಳಿಸಿದರು.
ತಟ್ಟಂತ ಹೇಳಿ ಕಾರ್ಯಕ್ರಮದ ನಿರೂಪಕರಾದ ಡಾ. ನಾ.ಸೋಮೇಶ್ವರ ರವರು ಬುಗುರಿ ಪುಸ್ತಕಕ್ಕೆ ಮುನ್ನುಡಿ ಕುರಿತು ” ಮನುಷ್ಯನಲ್ಲಿ ಹಲವು ಮೆದುಳುಗಳು ಇವೆ ಅದು ಹೊಟ್ಟೆ, ಮನಸ್ಸುಗಳಲ್ಲಿರುತ್ತವೆ ಅದನ್ನು ಕಾರ್ಯರೂಪಕ್ಜೆ ತರಬೇಕು. ವಾಲ್ಮೀಕಿ ಮಹರ್ಷಿಗಳು ಶಾಪ ನೀಡಲು ಇರುವ ಭಾವಾನಾತ್ಮಕ ಮೆದುಳು ಇನ್ನೊಂದು ತಾರ್ಕಿಕ ಮೆದುಳು ಇದರ ಬಳಕೆಯಿಂದ ಮಕ್ಕಳು ಸವ್ಯಸಾಚಿಯಾಗಬೇಕು. ಮಕ್ಕಳ ಭಾವನೆ ಹೊರರೂಪಕ್ಕೆ ತರುವಲ್ಲಿ ಈ ಪುಸ್ತಕ ಕೆಲಸ ಮಾಡಿದೆ. ಮೆದುಳಿನ ಎರಡು ಅರೆಗೋಡಗಳ ಬಳಕೆಯಾಗಿದೆ. ಪುಸ್ತಕದಲ್ಲಿನ ಎರಡು ಲೇಖನಗಳನ್ನು ಉದಾಹರಣೆ ನೀಡಿದರು.
ಸಂಸ್ಕ್ರತ ಶಿಕ್ಷಕರಾದ ವಿದ್ವಾನ್ ಶ್ರೀಯುತ ಶ್ರೀಧರ್ ಭಟ್ ಮಾತನಾಡುತ್ತಾ “ಶಿಕ್ಷಕನಾಗಿ ಪಾಠಮಾಡುವುದಕ್ಕಿಂತ ಮಕ್ಕಳಿಂದ ಕಲಿತಿದ್ದೆ ಹೆಚ್ಚು, ರಜೆಯ ಅನುಭವ ಹಂಚಿಕೆ ಇದೊಂದು ಕಲಿಕೆ ಬಹುಮುಖತೆ. ಇದು ಶಾಶ್ವತವಾದ ಕಲಿಕೆ, ಮಕ್ಕಳಿಗೆ ಇದು ಮುಂದಿನ ದೊಡ್ಡ ಸಾಹಿತಿಯಾಗಲು ಪ್ರೇರಣೆ ನೀಡುತ್ತದೆ. ಬರವಣಿಗೆ ಇದು ನಿಲ್ಲದೆ ಮುಂದೆಯೂ ಸಾಗಬೇಕು ಎಂದರು. ಬುಗುರಿ ಪುಸ್ತಕವು ಮಕ್ಕಳಲ್ಲಿ ಇತಿಹಾಸದ ಬಗ್ಗೆ ಅಭಿರುಚಿ ಬೆಳಸಿದೆ ಹಾಗೂ ಇತಿಹಾಸವನ್ನು ಭವಿಷ್ಯತ್ ನೊಂದಿಗೆ ಸೇರಿಸುವುದು ಇದರ ವಿಶೇಷತೆಯಾಗಿದೆ. ಸಾಹಿತ್ಯವು ಪ್ರವಾಸಿ ತಾಣಗಳನ್ನು ಕಣ್ಣಮುಂದೆ ತರುವ ಶಕ್ತಿ ಪುಸ್ತಕಕಿದೆ” ಎಂದು ಹೇಳಿದರು.
ಶ್ರೀಮತಿ ಸವಿತಾ ಯಾಜಿ ಪ್ರಕಾಶಕರು ಬುಗುರಿ ಪುಸ್ತಕವು 114 ನೇ ಪ್ರಕಟಣೆಯಾಗಿದೆ. ಪ್ರತಿಯೊಂದು ಲೇಖನವು ಅದ್ಭುತವಾಗಿದ್ದವು. ಇದರಿಂದ ಪರೋಕ್ಷವಾಗಿ ಐತಿಹ್ಯ ಮಹತ್ವ ತಿಳಿಯುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಸುಕೇಶ ಸೇರಿಗಾರ ಮಾತನಾಡಿ, ಪುಸ್ತಕಗಳು ಮಾತ್ರವಲ್ಲ ವ್ಯಕ್ತಿಗಳು ಕೂಡ ಜೀವನದಲ್ಲಿ ಸ್ಪೂರ್ತಿ ದಾಯಕರಾಗಿರುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಡಾ.ಗುರುರಾಜ್ ಕರಜಗಿ ಕೂಡ ಒಬ್ಬರು. ಪ್ರಖ್ಯಾತ ಲೇಖಕರಾದ ಚೇತನ ಭಗತ್ ರವರು ತಮ್ಮ ಶಾಲಾ ಜೀವನದಲ್ಲಿ ಬರೆದ ಒಂದು ಕಥೆ ಅವರ ಜೀವನ ಬದಲಾಯಿಸಿತು ಅದು ಬರೆವಣೆಗೆ ಇರುವ ಸಾಮ್ಯರ್ಥವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಹಲವಾರು ಪುಸ್ತಕಗಳನ್ನು ಬಿಡುಗಡೆ ಮಾಡಲು ಸದಾ ಆಸಕ್ತದಾಯಕರಾಗಿರುತ್ತೇನೆ ಎಂದು ತಿಳಿಸಿದರು.
Dr. Gururaj Karajagi ಈ ಕಾರ್ಯಕ್ರಮದಲ್ಲಿ ಖ್ಯಾತ ನಿರೂಪಕರಾದ ಶ್ರೀಯುತ ನಾ. ಸೋಮೇಶ್ವರ ವಿಶೇಷವಾಗಿತ್ತು. ಈ ಶೈಕ್ಷಣಿಕ ಕಾರ್ಯಕ್ರಮ ಕ್ಕೆ ಮೆರೆಗು ನೀಡುವಂತೆ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರು ಗೋವರ್ಧನ ಗಿರಿ ಮತ್ತು ಕಾಳಿಂಗ ಮರ್ಧನ ಯಕ್ಷಗಾನದ ಪ್ರಸಂಗಳಿಗೆ ಅಭನಯಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸುಮಾರು 1000 ಪೋಷಕರು, ಸಾಹಿತ್ಯ ಆಸಕ್ತರು, ಶಿಕ್ಷಕರು ಭಾಗವಹಿಸಿದ್ದರು.
ಬುಗುರಿ ಪುಸ್ತಕಕ್ಕೆ ಲೇಖನ ಬರೆದ ಮಕ್ಕಳಿಗೆ ಹಾಗೂ ಬಿಡುಗಡೆ ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪೊದಾರ್ ಸಂಸ್ಥೆಯ ಕರ್ನಾಟಕ ವೃತ್ತದ ಪ್ರಬಂಧಕರಾದ ರವೀಂದ್ರ ವಂಕೇಲಾ, ಉಪ ಪ್ರಾಂಶುಪಾಲೆಯಾದ ಶ್ರೀಮತಿ ನೇತ್ರಾ .ಹೆಚ್, ಪ್ರಕಾಶಕರಾದ ಶ್ರೀಮತಿ ಸವಿತಾ ಯಾಜಿ ಉಪಸ್ಥಿತರಿದ್ದರು.
ಶ್ರೀಮತಿ ನೇತ್ರಾ ಸ್ವಾಗತಿಸಿದರು, ಶ್ರೀಮತಿ ರೂಪ.ಸಿ ವಂದನಾರ್ಪಣೆ ಶ್ರೀಪತಿ ಹಾಗೂ ಶ್ರೀಮತಿ ಶೃತಿ ನಿರೂಪಣೆಯನ್ನು ನೆರವೇರಿಸಿದರು.