Saturday, March 1, 2025
Saturday, March 1, 2025

KUWJ Shivamogga ಶಿವಮೊಗ್ಗದ ಪತ್ರಕರ್ತರಾದ ಗಿರೀಶ್ ‌ಉಮ್ರಾಯ್, ಶೃಂಗೇರಿ ಚಂದ್ರಶೇಖರ್ & ಕವಿತಾ ಅವರಿಗೆ ವಾರ್ಷಿಕ ದತ್ತಿ ಪ್ರಶಸ್ತಿ

Date:

KUWJ Shivamogga ವೃತ್ತಿ ಸೇವೆ, ಸಾಮಾಜಿಕ ಬದ್ಧತೆ ಮತ್ತು ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ನಗರದ ಹಿರಿಯ ಪತ್ರಕರ್ತರು, ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕ ಚಂದ್ರಶೇಖರ್ ಶೃಂಗೇರಿಯವರಿಗೆ ಮಿಂಚು ಶ್ರೀನಿವಾಸ್ ಪ್ರಶಸ್ತಿ, ಹಿರಿಯ ಪತ್ರಕರ್ತ ಗಿರೀಶ್ ಉಮ್ರಾಯ್‌ರವರಿಗೆ ಎಸ್. ಹೆಚ್. ರಂಗಸ್ವಾಮಿ ಪ್ರಶಸ್ತಿ, ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ್ತಿ ಕವಿತಾರವರಿಗೆ ಗಿರಿಜಮ್ಮ, ರುದ್ರಪ್ಪ ತಾಳಿಕೋಟಿ ಪ್ರಶಸ್ತಿ ಪ್ರಕಟವಾಗಿದೆ.
ಕೊಪ್ಪಳದಲ್ಲಿ ಮಾ.09ರಂದು ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ತಿಳಿಸಿದ್ದಾರೆ. ಚಂದ್ರಶೇಖರ್ ಶೃಂಗೇರಿ
ಇವರು ಸ್ನಾತಕೋತ್ತರ ಪದವಿ ನಂತರ ಶಿವಮೊಗ್ಗದಲ್ಲಿ ಎರಡು ವರ್ಷಗಳ ಕಾಲ ಉಪನ್ಯಾಸಕ ವೃತ್ತಿ, ನಂತರ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದ್ದು, ಶಿವಮೊಗ್ಗದ ಸ್ಥಳೀಯ ದಿನ ಪತ್ರಿಕೆ (ಹಾಲಿ ದಾವಣಗೆರೆಯಿಂದ ಪ್ರಕಟ) ಮಲೆನಾಡುವಾಣಿ'ಗೆ ವರದಿಗಾರನಾಗಿ ಸೇರ್ಪಡೆಗೊಂಡವರು.ಅಲ್ಲಿಂದ ಶಿವಮೊಗ್ಗದ ಅತ್ಯಂತ ಹಳೆಯ ದಿನಪತ್ರಿಕೆಯಾದಎಚ್ಚರಿಕೆ’ ಸಂಜೆ ದಿನಪತ್ರಿಕೆ, ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಕನ್ನಡಜನ ಅಂತರಂಗ ಪತ್ರಿಕೆಯ ಶಿವಮೊಗ್ಗ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸಿದವರು. ರವಿ ಬೆಳಗೆರೆರವರಹಾಯ್ ಬೆಂಗಳೂರು’ ಪತ್ರಿಕೆಯ ಮೈಸೂರು ಪ್ರಾಂತ್ಯದ ವರದಿಗಾರನಾಗಿಯೂ ಕಾರ್ಯನಿರ್ವಹಣೆ ಮಾಡಿರುವ ಇವರು, ಮಂಗಳೂರು ಮತ್ತು ಬೆಂಗಳೂರು ಆವೃತ್ತಿಗಳಲ್ಲಿ ಪ್ರಕಟವಾಗುತ್ತಿದ್ದ ಜನವಾಹಿನಿ' ರಾಜ್ಯಮಟ್ಟದ ಪತ್ರಿಕೆಗೆ ಹಾಸನ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರನಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದಾರೆ. ನಂತರವಿಜಯಕರ್ನಾಟಕ’ ದಿನಪತ್ರಿಕೆಯ ಹಾಸನ ಜಿಲ್ಲಾ ವರದಿಗಾರನಾಗಿ, ರಾಜ್ಯದ ನಾಲ್ಕು ಆವೃತ್ತಿಗಳಲ್ಲಿ ಪ್ರಕಟವಾಗುತ್ತಿದ್ದ ಕರುನಾಡು ಸಂಜೆ' ದಿನಪತ್ರಿಕೆಯ ದಾವಣಗೆರೆ ಆವೃತ್ತಿಯ ಮುಖ್ಯಸ್ಥನಾಗಿ ಕಾರ್ಯನಿರ್ವಹಣೆ ಮಾಡಿರುವ ಇವರು, ವಿಜಯಕರ್ನಾಟಕ ದಿನ ಪತ್ರಿಕೆಯ ಸಹ ಪತ್ರಿಕೆಯಾಗಿ ಆರಂಭವಾದಉಷಾ ಕಿರಣ’ದ ಶಿವಮೊಗ್ಗದ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ, ನಂತರ ಶಿವಮೊಗ್ಗದ ಜನಹೋರಾಟ' ಪತ್ರಿಕೆಯಲ್ಲಿ ಸಹ ಸಂಪಾದಕನಾಗಿ, ವಿಜಯ ಸಂಕೇಶ್ವರರ ನೇತೃತ್ವದಲ್ಲಿ ಆರಂಭವಾದವಿಜಯವಾಣಿ’ ದಿನಪತ್ರಿಕೆಗೆ 2013 ರಲ್ಲಿ ಸೇರ್ಪಡೆಗೊಂಡು, ಗಂಗಾವತಿ ಆವೃತ್ತಿಯ ಸ್ಥಾನಿಕ ಸಂಪಾದಕನಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ.
ವಿಜಯ ಕರ್ನಾಟಕ 'ದಿನಪತ್ರಿಕೆಗೆ ಸೇರ್ಪಡೆಯಾಗಿ ಶಿವಮೊಗ್ಗ ಆವೃತ್ತಿಯ ಸ್ಥಾನಿಕ ಸಂಪಾದಕನಾಗಿ ಮೂರು ವರ್ಷ ಕಾರ್ಯನಿರ್ವಹಣೆ ಮಾಡಿ ಇದೀಗವಿಜಯವಾಣಿ’ ದಿನಪತ್ರಿಕೆಯ ಶಿವಮೊಗ್ಗ ಆವೃತ್ತಿಯ ಸ್ಥಾನಿಕ ಸಂಪಾದಕ ಹಾಗೂ ಬ್ಯುರೋ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸುದೀರ್ಘವಾಗಿ 28 ವರ್ಷಗಳ ಕಾಲ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಮೆ ಇವರದ್ದು.
ಗಿರೀಶ್ ಉಮ್ರಾಯ್
ಮೈಸೂರು ವಿಶ್ವವಿದ್ಯಾಲಯದಿಂದ ಬಿಎ ಪದವೀಧರರಾಗಿರುವ ಹಿರಿಯ ಪತ್ರಕರ್ತ ಗಿರೀಶ್ ಉಮ್ರಾಯ್‌ರವರು ಭಂಡಿಗಡಿ ನಂಜುಂಡಪ್ಪರವರ ವಾಯ್ಸ್ ಶಿವಮೊಗ್ಗ ಪತ್ರಿಕೆಯಿಂದ ವೃತ್ತಿಯನ್ನು ಆರಂಭಿಸಿದವರು.
2009 ರಿಂದ 2014ರವರೆಗೆ ನಾವಿಕ ಪತ್ರಿಕೆಯಲ್ಲಿ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿರುವ ಇವರು,2014 ರಿಂದ 2019ರವರೆಗೆ ನಾವಿಕ ಪತ್ರಿಕೆಯ ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. 2020ರಿಂದ ಹವ್ಯಾಸಿ ಪತ್ರಕರ್ತರಾಗಿ ನಗರದ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿವಮೊಗ್ಗೆಯಲ್ಲಿ ಸ್ಥಾಪಿತವಾಗಿರುವ ಜಿಲ್ಲೆಯ ಪತ್ರಕರ್ತರ ಕೇಂದ್ರವಾದ ಪತ್ರಿಕಾ ಭವನದ ನಿವೇಶನ ಮಂಜೂರಾತಿ, ನಿರ್ಮಾಣ ಹಾಗೂ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸಿದವರು.
ಸುದ್ದಿ ಸಂಗ್ರಹ ಹಾಗೂ ವಿಶ್ಲೇಷಣೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಇವರು, ಪ್ರತೀ ಸುದ್ದಿಯ -ಲೋಅಪ್ ಮಾಡಿ ಓದುಗರ ಮುಂದೆ ವಾಸ್ತವವನ್ನು ತೆರೆದಿಡುವಲ್ಲಿ ನಿಷ್ಣಾತರು. ಕವಿತಾ
ಅಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರೆಯಾಗಿರುವ ಕವಿತಾರವರು, ಪ್ರಸ್ತುತ ಸಂಯುಕ್ತ ಕರ್ನಾಟಕ ಪತ್ರಿಕೆಯ ಪ್ರಧಾನ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
1999 ರಿಂದ ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕವಿತಾ, 2007ರ ರವರೆಗೆ ಕನ್ನಡ ಪ್ರಭ – ಇಂಡಿಯನ್ ಎಕ್ಸ್ಪ್ರಸ್ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 2007 ರಿಂದ 2010ರವರೆಗೆ ಸಂಯುಕ್ತ ಕರ್ನಾಟಕ ಪತ್ರಿಕೆಯ ದಾವಣಗೆರೆ ಆವೃತ್ತಿಯಲ್ಲಿ ಕೆಲಸ ಮಾಡಿರುವ ಇವರು, 2010ರಿಂದ ಶಿವಮೊಗ್ಗೆಯಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕರ್ತವ್ಯದಲ್ಲಿದ್ದಾರೆ.
ಪತ್ರಿಕಾ ಕ್ಷೇತ್ರದ ಜೊತೆಗೆ ಪುಷ್ಪೋದ್ಯಮದಲ್ಲಿಯೂ ಆಸಕ್ತಿ ವಹಿಸಿರುವ ಇವರು, ಅದೇ ಸೂಕ್ಷ್ಮತೆ ಹಾಗೂ ಸಂವೇದನೆಯನ್ನು ತಮ್ಮ ವರದಿಗಾರಿಕೆಯಲ್ಲಿಯೂ ಮೆರೆಯುತ್ತಿದ್ದಾರೆ.
ಉಳಿದ ಪ್ರಶಸ್ತಿ ಪುರಸ್ಕೃತರ ವಿವರ ಇಂತಿದೆ
ಸುಬ್ಬು ಹೊಲೆಯಾರ್ (ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ), ರಾಘವೇಂದ್ರ ಗಣಪತಿ, ವಿಜಯವಾಣಿ (ಡಿ.ವಿ.ಜಿ.ಪ್ರಶಸ್ತಿ), ಯು.ಜಿ.ಭಟ್, ಉದಯವಾಣಿ, ಹೊನ್ನಾವರ ( ಎಚ್. ಎಸ್. ದೊರೆಸ್ವಾಮಿ ಪ್ರಶಸ್ತಿ), ಅನು ಶಾಂತರಾಜು, ಹಿರಿಯ ಪೋಟೋ ಜರ್ನಲಿಸ್ಟ್, ತುಮಕೂರು (ಎಸ್.ವಿ. ಜಯಶೀಲರಾವ್ ಪ್ರಶಸ್ತಿ), ಸುಭಾಷ್ ಹೂಗಾರ, ಹಿರಿಯ ಪತ್ರಕರ್ತರು (ಪಾಟೀಲ್ ಪುಟ್ಟಪ್ಪ(ಪಾಪು) ಪ್ರಶಸ್ತಿ), ಎಂ.ಆರ್.ಸತ್ಯನಾರಾಯಣ, ಮೈಸೂರು (ಗೊಮ್ಮಟ ಮಾಧ್ಯಮ ಪ್ರಶಸ್ತಿ), ಉಗಮ ಶ್ರೀನಿವಾಸ್, ಕನ್ನಡಪ್ರಭ (ಸಿ.ಆರ್.ಕೃಷ್ಣರಾವ್ ಪ್ರಶಸ್ತಿ), ಮಂಜುಶ್ರೀ ಎಂ ಕಡಕೊಳ, ಪ್ರಜಾವಾಣಿ (ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿ), ಗಂಗಹನುಮಯ್ಯ, ಅಮೃತವಾಣಿ, ತುಮಕೂರು (ಬದರಿನಾಥ ಹೊಂಬಾಳೆ ಪ್ರಶಸ್ತಿ), ಡಾ.ಸಿದ್ಧನಗೌಡ ಪಾಟೀಲ್, ಸಂಪಾದಕರು, ಹೊಸತು (ಡಾ.ಎಂ.ಎಂ.ಕಲ್ಬುರ್ಗಿ ಪ್ರಶಸ್ತಿ), ಮು.ವೆಂಕಟೇಶಯ್ಯ, ಸಿಂಹ ಬೆಂಗಳೂರು (ಕಿಡಿಶೇಷಪ್ಪ ಪ್ರಶಸ್ತಿ), ಎಂ.ಕೆ.ಹೆಗಡೆ, ಹಿರಿಯ ಪತ್ರಕರ್ತರು, ಬೆಳಗಾವಿ (ರವಿ ಬೆಳಗೆರೆ ಪ್ರಶಸ್ತಿ), ಎಂ.ಯೂಸುಫ್ ಪಟೇಲ್, ಹಿರಿಯ ಪತ್ರಕರ್ತರು (ಪಿ.ಆರ್. ರಾಮಯ್ಯ ಸ್ಮಾರಕ ಪ್ರಶಸ್ತಿ), ಬಸವರಾಜ ಹೆಗ್ಗಡೆ, ಸಂಜೆ ಮಿತ್ರ, ಮಂಡ್ಯ (ಹೆಚ್.ಕೆ. ವೀರಣ್ಣಗೌಡ ಸ್ಮಾರಕ ಪ್ರಶಸ್ತಿ), ಕೆ.ಕೆ.ಬೋಪಣ್ಣ, ಆಂದೋಲನ, ಕೊಡಗು (ರಾಜಶೇಖರ ಕೋಟಿ ಪ್ರಶಸ್ತಿ), ಎಸ್.ಟಿ.ರವಿಕುಮಾರ್, ಸ್ಟಾರ್ ಆಪ್ ಮೈಸೂರು (ಪಿ.ರಾಮಯ್ಯ ಪ್ರಶಸ್ತಿ), ತಾ.ನಂ. ಕುಮಾರಸ್ವಾಮಿ, ಆನೆಕಲ್ (ಮಾ. ರಾಮಮೂರ್ತಿ ಸ್ಮಾರಕ ಪ್ರಶಸ್ತಿ), ಪ್ರಭುಲಿಂಗ ನಿಲೂರೆ, ವಿಜಯ ಕರ್ನಾಟಕ, ಕಲಬುರ್ಗಿ (ಮಹದೇವ ಪ್ರಕಾಶ್ ಪ್ರಶಸ್ತಿ), ಕೆ.ಬಿ.ಜಗದೀಶ್, ಸಂಜೆವಾಣಿ, ಕೋಲಾರ (ಎಂ.ನಾಗೇಂದ್ರ ರಾವ್ ಪ್ರಶಸ್ತಿ), ಗಣೇಶ್ ಕಾಸರಗೋಡು, ಹಿರಿಯ ಪತ್ರಕರ್ತರು (ಅಪ್ಪಾಜಿಗೌಡ (ಸಿನಿ)ಪ್ರಶಸ್ತಿ), ಎಂ.ಚಿರಂಜೀವಿ, ಹಿರಿಯ ಪತ್ರಕರ್ತರು, ಹಾವೇರಿ (ಮೂಡಣ, ಹಾವೇರಿ ಪ್ರಶಸ್ತಿ).
ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿಗಳು ರಂಗನಾಥ್ ಎಸ್. ಭಾರದ್ವಾಜ್- ಟಿವಿ -09, ರಮಾಕಾಂತ್-ಟಿವಿ – 05, ಶ್ರೀನಿವಾಸ್-ಬೆಂಗಳೂರು. ಬಿ.ಪಿಳ್ಳರಾಜು- ಬೆಂಗಳೂರು ಗ್ರಾಮಾಂತರ, ಬಾಸ್ಕರ ರೈ ಕಟ್ಟ-ಮಂಗಳೂರು, ಗುರುಶಾಂತ.ಎನ್. -ಬಳ್ಳಾರಿ, ಎಸ್.ಎಂ.ಮನೋಹರ-ಹೊಸಪೇಟೆ, ವಿಜಯನಗರ. ಸಿ.ಬಿ.ಸುಬೇದಾರ್- ನರಗುಂದ, ಗದಗರವರಿಗೆ ಪ್ರಕಟಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

National Science Day ವೈಜ್ಞಾನಿಕ ಚಿಂತನೆಯಿಂದ ಮೂಢ ನಂಬಿಕೆ ತೊಡೆದು ಹಾಕಿ-ಡಿಡಿಪಿಐ ಮಂಜುನಾಥ್

National Science Day ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳಿಸಿಕೊಂಡು, ವಿಜ್ಞಾನದ ಅಧ್ಯಯನದಲ್ಲಿ...

Karnataka Govt Urban Development ಹೊರಗುತ್ತಿಗೆ ವಾಹನ ಚಾಲಕರು & ಸಹಾಯಕರಿಗೆ ನೇರ‌ಪಾವತಿ ಮಾಡಲು ಮನವಿ

Karnataka Govt Urban Development ಶಿವಮೊಗ್ಗನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ವಾಹನ...

CM Siddaramaiah ಮೊಬೈಲ್ & ಡಿಜಿಟಲ್ ಗೀಳಿನಿಂದ ಹೊರ ಬಂದು ಪುಸ್ತಕ‌ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು- ಸಿದ್ಧರಾಮಯ್ಯ

CM Siddaramaiah ನಾವು ಮಾನವೀಯ ಮೌಲ್ಯಗಳನ್ನು ರೂಪಿಸಿಕೊಳ್ಳಲು ಒಳ್ಳೆಯ ಪುಸ್ತಕಗಳನ್ನು ಓದುವ...