Sri Shivaganga Yoga Kendra ಶಿವಮೊಗ್ಗ ನಗರದ ಶ್ರೀ ಶಿವಗಂಗಾ ಯೋಗ ಕೇಂದ್ರ ಕಲ್ಲಹಳ್ಳಿಯಲ್ಲಿ ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ ಅವರ ನೇತೃತ್ವದಲ್ಲಿ ಮಹಾಶಿವರಾತ್ರಿ ಆಚರಣೆ ನೆರವೇರಿತು.
ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ ಮಾತನಾಡಿ, ಸಾವಿರಾರು ವರ್ಷಗಳ ಹಿಂದೆ ಆದಿಯೋಗಿ ಶಿವನು ಹಿಮಾಲಯದ ತಪ್ಪಲಿನಲ್ಲಿರುವ ಕಾಂತಿ ಸರೋವರದ ಬಳಿ ಯೋಗದ ದಿವ್ಯ ಜ್ಞಾನವನ್ನುಪ್ರಥಮವಾಗಿ ಸಪ್ತಋಷಿಗಳಿಗೆ ಬೋಧಿಸಿದಂನೆಂದು ನಂಬಿಕೆ ಎಂದು ತಿಳಿಸಿದರು.
ಶಿವರಾತ್ರಿಯನ್ನು ವೈವಿಧ್ಯಮಯವಾಗಿ ಆಚರಿಸಲಾಯಿತು. ಕರ್ಮ ಯೋಗ ಪೂರ್ವಭಾವಿ ಸಿದ್ಧತೆಯಾಗಿ ಹಿಂದಿನ ದಿನವೇ ಯೋಗ ಶಿಕ್ಷಣಾರ್ಥಿಗಳಿಂದ ಕರ್ಮ ಯೋಗ ಆಚರಿಸಲಾಯಿತು. ಸಂಪೂರ್ಣ ಯೋಗ ಕೇಂದ್ರದ ಆವರಣ ಕಟ್ಟಡವನ್ನು ಐದು ವರ್ಷದ ಮಕ್ಕಳಿಂದ ಆರಂಭವಾಗಿ 84ರ ಪ್ರಾಯದ ಯೋಗಭ್ಯಾಸಿಗಳೆಲ್ಲರೂ ಸೇರಿ ಶುಚಿಗೊಳಿಸಿ ತಳಿರು ತೋರಣ ಹೂವಿನ ಅಲಂಕಾರ, ರಂಗವಲ್ಲಿ, ಆಸನ ವ್ಯವಸ್ಥೆ ಎಲ್ಲದರಲ್ಲೂ ಭಾಗಿಯಾದರು. ಶಿವನ ಹೆಸರಿನಲ್ಲಿ ಜವಾಬ್ದಾರಿ ವಹಿಸಿದ ಕಾಯಕದಲ್ಲಿ ನಿಷ್ಠೆ ಪ್ರಾಮಾಣಿಕತೆಯಿಂದ ಶಿವ ಭಕ್ತಿಯ ಪಥದಲ್ಲಿ ನಡಿಗೆ ಎಂದು ಭಾವಿಸಿ ಸಿದ್ಧತೆಯಲ್ಲಿ ಭಾಗವಹಿಸಿದ್ದರು.
ಪ್ರತಿಯೊಂದು ಶಾಖೆಯ ಶಿಕ್ಷಣಾರ್ಥಿಗಳು ಶಿವನ ಪೂಜೆಗೆ ಫಲಪ್ರಸಾದಕ್ಕೆ ಹಣ್ಣುಗಳು, ತ್ರಿವೇಣಿ ಸಂಗಮದಿಂದ ತಂದ ಗಂಗಾಜಲ, ಎಳನೀರು ಹೂವು ಬಿಲ್ವಪತ್ರೆ ಭಕ್ತಿಯಿಂದ ಸಮರ್ಪಿಸಿದರು. ಭಕ್ತಿಯಲ್ಲಿ ಎಲ್ಲರೂ ಒಂದಾಗಿ ಆಚರಿಸುವ ಹಬ್ಬ ಶಿವರಾತ್ರಿ. ಆದಿ ಯೋಗಿ ಶಿವನಿಗೆ ತೈಲ ಮಜ್ಜನ, ರುದ್ರಾಭಿಷೇಕ, ಅಭಿಷೇಕ, ಜಲಾಭಿಷೇಕ, ಭಸ್ಮ ಧಾರಣೆ, ಆಭರಣ ಪ್ರಿಯನಲ್ಲದ ಶಿವನಿಗೆ ಸರಳವಾದ, ಬಿಲ್ವಪತ್ರೆ ಎಕ್ಕದ ಹೂವು ನಾನಾ ಪುಷ್ಪಗಳ ಸಮರ್ಪಿಸಿ ಅಷ್ಟೋತ್ತರ ಶತನಾಮಾವಳಿಗಳಿಂದ ಪೂಜಾಭಿಷೇಕ ನೆರವೇರಿತು.
Sri Shivaganga Yoga Kendra ವೈದ್ಯ ವೃತ್ತಿಯೊಂದಿಗೆ ಯೋಗವನ್ನು ಪ್ರವೃತ್ತಿಯಾಗಿಸಿಕೊಂಡು ರೋಗಿಗಳಿಗೆ ಆರೋಗ್ಯ ಸಲಹೆಯೊಂದಿಗೆ ಸರಳ ವ್ಯಾಯಾಮ, ಯೋಗ, ಪ್ರಾಣಾಯಾಮಗಳಿಂದ ನಿಶುಲ್ಕ ಅಥವಾ ಕನಿಷ್ಠ ಶುಲ್ಕ ಪಡೆದು ನಗರದಲ್ಲಿ ಬಡವರ ಬಂಧು ಎಂದು ಹೆಸರಾಗಿರುವ ಡಾ. ಎನ್.ಎಲ್.ನಾಯಕ್ ಮತ್ತು ಜಯಂತಿ ನಾಯಕ್ ಅವರಿಂದ ದೀಪ ಪ್ರಜ್ವಲನೆ ಮೂಲಕ ಭಜನೆ ಕಾರ್ಯಕ್ರಮ ಉದ್ಘಾಟನೆಯಾಯಿತು.
ಎಲ್ಲ ಶಾಖೆಗಳಿಂದ ಆಗಮಿಸಿದ ಯೋಗಿಗಳಿಂದ ಯೋಗ ಶಿಕ್ಷಣಾರ್ಥಿಗಳು ಶಿವನಿಗೆ ತಾವು ಅಭ್ಯಾಸಿಸಿದ ಭಜನೆಯ ಮೂಲಕ ಭಕ್ತಿ ಸಮರ್ಪಿಸುವಲ್ಲಿ ಆರೋಗ್ಯ ಪೂರ್ಣ ಸ್ಪರ್ಧೆ ತಡ ರಾತ್ರಿವರೆಗೆ ನೆರೆವೇರಿತು.
ಆಗಮಿಸಿದ ಎಲ್ಲ ಭಕ್ತರಿಗೆ ಮಹಾಪ್ರಸಾದವಾಗಿ ಫಲ ನೀಡಲಾಯಿತು. ನಗರದ ಪ್ರಮುಖರಾದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್, ಕಲಗೋಡು ರತ್ನಾಕರ್, ಜಿ.ವಿಜಯಕುಮಾರ್, ಓಂಕಾರ್, ವಿಜಯ ಕೃಷ್ಣ. ಹರೀಶ್ , ಯೋಗಪಟುಗಳು ಉಪಸ್ಥಿತರಿದ್ದರು.
ಶಿSri Shivaganga Yoga Kendra ವನೇ ಆದಿಯೋಗಿ.ದಿವ್ಯ ಯೋಗಜ್ಞಾನ ಬೋಧಿಸಿದ ಪ್ರಥಮ- ಸಿ.ವಿ.ರುದ್ರಾರಾಧ್ಯ
Date: