Shimoga News ಆರೋಗ್ಯಕರ ಜೀವನ ಹೊಂದುವುದು ಹದಿಹರೆಯದ ಹೆಣ್ಣು ಮಕ್ಕಳಿಗೆ ಕಷ್ಟ ಸಾಧ್ಯ. ಋತು ಚಕ್ರದ ಸಂದರ್ಭದಲ್ಲಿ ವೈಯುಕ್ತಿಕ ಶುಚಿತ್ವ ಕಾಪಾಡಿಕೊಳ್ಳುವುದು ವಿದ್ಯಾರ್ಥಿನಿಯರಿಗೆ ಅತಿ ಮುಖ್ಯ ಎಂದು ರೋಟರಿ ಶಿವಮೊಗ್ಗ ಜ್ಯೂಬಿಲಿ ಅಧ್ಯಕ್ಷೆ ರೂಪಾ ಪುಣ್ಯಕೋಟಿ ಹೇಳಿದರು.
ರೋಟರಿ ಜಿಲ್ಲೆ 3182 ಜಿಲ್ಲಾ ಅನುದಾನದಲ್ಲಿ ಮಂಜೂರಾಗಿದ್ದ ಅರ್ಥಿಕ ನೆರವಿನಲ್ಲಿ ಬಿ.ಹೆಚ್.ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ’ಪ್ಯಾಡ್ ಬರ್ನಿಂಗ್ ಮಿಷನ್’ ಅಳವಡಿಸಿದ್ದನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಕಾಲೇಜಿನಲ್ಲಿ ಏಳುನೂರುಕ್ಕಿಂತ ಹೆಚ್ಚು ಹೆಣ್ಣು ಮಕ್ಕಳು ಪದವಿ ಪೂರ್ವ ವಿದ್ಯಾಭ್ಯಾಸ ಮಾಡುತ್ತಿದ್ದು, ಬಹಳಷ್ಟು ಮಕ್ಕಳು ಗ್ರಾಮಾಂತರ ಪ್ರದೇಶದಿಂದ ಬಂದವರಿದ್ದಾರೆ. ಇವರಿಗೆ, ಶುಚಿತ್ವದ ಬಗ್ಗೆ ತಿಳುವಳಿಕೆ ನೀಡಲು ಹಾಗೂ ಉತ್ತಮ ಆರೋಗ್ಯ ಹೊಂದಿ ಹೆಚ್ಚು ಅಂಕಗಳಿಸಲು ಅನುಕೂಲ ಮಾಡಿಕೊಡುವ ಸಲುವಾಗಿ ಕಾಲೇಜಿನ ಪ್ರಾಂಶುಪಾಲರು ಅದ್ಯಾಪಕರು, ಪ್ಯಾಡ್ ಬನಿರ್ಂಗ್ ಮಿಷನ್ ಕೊಡಿಸುವಂತೆ ಕೋರಿದ್ದರು. ಅದನ್ನು ನಮ್ಮ ರೋಟರಿ ಜ್ಯೂಬಿಲಿ ಕ್ಲಬ್ ಇಂದು ಪೂರೈಸಿದೆ ಎಂದರು.
ಕಾರ್ಯದರ್ಶಿ ಡಾ. ಪ್ರಕೃತಿ ಮಂಚಾಲೆ ಮಾತನಾಡಿ, ಹದಿಹರೆಯದ ಹೆಣ್ಣು ಮಕ್ಕಳು ಋತುಚಕ್ರದ ವೇಳೆ ವೈಯುಕ್ತಿಕ ಶುಚಿತ್ವಕ್ಕೆ ಹೆಚ್ಚಿನ ಗಮನ ಕೊಡಬೇಕು. ಮೂರು-ನಾಲ್ಕು ಗಂಟೆಗೆ ಒಮ್ಮೆ ಪ್ಯಾಡ್ ಬದಲಾಯಿಸಬೇಕು. ಉಪಯೋಗಿಸಿದ ಪ್ಯಾಡ್ ಎಲ್ಲೆಂದರಲ್ಲಿ ಎಸೆಯಬಾರದು. ಆದ್ದರಿಂದ ಇಂದು ಈ ಕಾಲೇಜಿಗೆ ಪ್ಯಾಡ್ ಬರ್ನಿಂಗ್ ಮಿಷನ್ ಕೊಡಿಸಿದ್ದೇವೆ. ಅದು ಕೆಲವೇ ಕ್ಷಣಗಳಲ್ಲಿ ಸುಟ್ಟು ಪೂರ್ಣ ಬಸ್ಮ ಮಾಡುವುದು. ಇದರಿಂದ ಹಲವಾರು ಸಂಕಷ್ಟಗಳು ದೂರವಾಗುತ್ತದೆ ಎಂದರು.
Shimoga News ಈ ಸಮಯದಲ್ಲಿ ಹೆಣ್ಣುಮಕ್ಕಳು ಹೆಚ್ಚು ನೀರು ಕುಡಿಯಬೇಕು, ನಿಶಕ್ತರಾಗುವುದನ್ನು ತಡೆಗಟ್ಟಬೇಕು. ಹೆಚ್ಚು ಕಬ್ಬಿಣಾಂಶ ಇರುವ ಧಾನ್ಯ, ಕಾಳು, ಮೊಟ್ಟೆ, ತರಕಾರಿ ಆಹಾರದೊಂದಿಗೆ ಸೇವಿಸಬೇಕು, ದೈನಂದಿನ ಚಟುವಟಿಕೆಯಾಗಿ ವ್ಯಾಯಾಮ ಮತ್ತು ಯೋಗ ಮಾಡುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ. ಯಾವುದೇ ಸಮಸ್ಯೆ ಕಂಡಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಎಂದರು.
ರೊ. ಭಾರದ್ವಾಜ ಮಾತನಾಡಿ, ಸರ್ಕಾರಿ ಪದವಿಪೂರ್ವ ಕಾಲೇಜಿಗೆ ನಮ್ಮ ಕ್ಲಬ್ ವತಿಯಿಂದ ಈ ಯಂತ್ರ ಕೊಡುಗೆ ನೀಡಿರುವುದು ಉತ್ತಮ ಕೆಲಸ, ಕಳೆದ ವರ್ಷ ಶುದ್ಧ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದ್ದನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಎಸ್.ಎಸ್.ವಾಗೇಶ್, ನಾಗರಾಜ್, ರೇಣುಕಾರಾದ್ಯ, ರಾಜಶೇಖರ್, ಪ್ರಾಂಶುಪಾಲ ಜಯಂತ್.ಎಸ್, ಪ್ರಾಚಾರ್ಯರಾದ ಭಾರತಿ, ಚಂದ್ರಶೇಖರಪ್ಪ.ಬಿ.ಅರ್, ಗಾಯತ್ರಿ.ಎಂ, ಇಂದಿರಾ, ಗೀತಾ ಕೆ.ಸಿ.ರಾಧಾಮಣಿ.ಎಂ.ಎನ್ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.