Sahyadri Narayana Hospital Shimoga ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ದಾಖಲಾಗಿರುವ ೫೯ ವರ್ಷದ ರೋಗಿ ಶ್ರೀಮತಿ ಮೀನಾಕ್ಷಿಯವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಕೆಲ ಮಾಧ್ಯಮ ವರದಿಗಳಲ್ಲಿ ಬಂದಿರುವ ತಪ್ಪು ಮಾಹಿತಿ ಸ್ಪಷ್ಟಪಡಿಸುವ ಉದ್ದೇಶದಿಂದ, ಅವರ ಚಿಕಿತ್ಸೆಗೆ ಸಂಬಂಧಿಸಿದ ನಿಜವಾದ ಅಂಶಗಳನ್ನು ತಿಳಿಸಲು ಈ ಹೇಳಿಕೆ ಬಿಡುಗಡೆ ಮಾಡಲಾಗಿದೆ.
ಶ್ರೀಮತಿ ಮೀನಾಕ್ಷಿಯವರು, 24 ಫೆಬ್ರವರಿ ಸೋಮವಾರದಂದು ಮತ್ತೊಂದು ಖಾಸಗಿ ಆಸ್ಪತ್ರೆಯಿಂದ ರೆಫರ್ ಆಗಿ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ದಾಖಲಾಗಿದ್ದರು, ಅಲ್ಲಿ ಅವರು ಸೋಂಕು ಮತ್ತು ರಕ್ತದೊತ್ತಡ ಕುಸಿತಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿದ್ದರು. ನಮ್ಮ ಆಸ್ಪತ್ರೆಗೆ ದಾಖಲಾದ ಕೂಡಲೇ ಅವರನ್ನು ತುರ್ತು ನಿಗಾ ಘಟಕಕ್ಕೆ ಕರೆದೊಯ್ಯಲಾಯಿತು ಮತ್ತು ನಂತರ ವೈದ್ಯಕೀಯ ತೀವ್ರ ನಿಗಾ ಘಟಕ (MICU) ಗೆ ವರ್ಗಾಯಿಸಲಾಯಿತು. ಅವರ ಗಂಭೀರ ಸ್ಥಿತಿಯನ್ನು ಗಮನಿಸಿ, ವೆಂಟಿಲೇಟರ್ ಸಹಿತ ಸಂಪೂರ್ಣ ಚಿಕಿತ್ಸೆ ನೀಡಲಾಯಿತು.
ಕೆಲವು ಮಾಧ್ಯಮ ವರದಿಗಳಲ್ಲಿ, ನಮ್ಮ ವೈದ್ಯರು ಶ್ರೀಮತಿ ಮೀನಾಕ್ಷಿಯವರನ್ನು ಮೃತ ಪಟ್ಟಿದ್ದಾರೆ ಎಂದು ಘೋಷಿಸಿದರು ಮತ್ತು ಅವರ ಮನೆಗೆ ತಲುಪಿದ ಮೇಲೆ ಅವರು “ಅವರು ಮತ್ತೆ ಉಸಿರಾಡಲು ಪ್ರಾರಂಭಿಸಿದರು” ಎಂಬ ಮಾಹಿತಿ ತಪ್ಪಾಗಿ ಪ್ರಕಟಿಸಲಾಗಿದೆ. ನಾವು ಈ ವರದಿಗಳನ್ನು ಪೂರ್ತಿಯಾಗಿ ತಿರಸ್ಕರಿಸುತ್ತೇವೆ ಮತ್ತು ನಮ್ಮ ವೈದ್ಯರು ಯಾವುದೇ ಹಂತದಲ್ಲಿಯೂ ರೋಗಿ ಮೃತ ಪಟ್ಟಿದ್ದಾರೆ ಎಂದು ಘೋಷಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ. ಕುಟುಂಬದ ಒತ್ತಾಯದ ಮೇರೆಗೆ, ವೈದ್ಯಕೀಯ ಸಲಹೆ ವಿರುದ್ಧ (DAMA) ಅವರನ್ನು ಬಿಡುಗಡೆ ಮಾಡಲಾಯಿತು.
Sahyadri Narayana Hospital Shimoga 25 ಫೆಬ್ರವರಿ ಮಂಗಳವಾರದ ಬೆಳಿಗ್ಗೆ, ಅವರ ಆರೋಗ್ಯ ಮತ್ತಷ್ಟು ಗಂಭೀರಗೊಂಡಿದ್ದರಿಂದ ಅವರ ಆರೋಗ್ಯ ಪುನಶ್ಚೇತನಗೊಳ್ಳುವ ಸಾಧ್ಯತೆ ಕಡಿಮೆ ಇರುವ ಬಗ್ಗೆ ಕುಟುಂಬಕ್ಕೆ ತಿಳಿಸಲಾಯಿತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲು ರೋಗಿ ಸಂಬಂಧಿಕರಿಗೆ ತಿಳಿಸಿದರೂ, ಕುಟುಂಬದ ಸದಸ್ಯರು ಅವರ ಬಿಡುಗಡೆಗಾಗಿ ಒತ್ತಾಯಿಸಿದರು. ಹೀಗಾಗಿ, ವೈದ್ಯಕೀಯ ಸಲಹೆಯ ವಿರುದ್ಧವಾಗಿ, ಅಂದು ಬೆಳಿಗ್ಗೆ ಅವರನ್ನು ಬಿಡುಗಡೆ ಮಾಡಲಾಯಿತು. ವೈದ್ಯಕೀಯ ತಂಡವು ಅದರಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಕುಟುಂಬಕ್ಕೆ ಸ್ಪಷ್ಟವಾದ ಮಾಹಿತಿ ನೀಡಿತ್ತು.
ಆ ನಂತರ, ಮನೆಗೆ ತಲುಪಿದ ಬೆನ್ನಲ್ಲೇ, ರೋಗಿಯ ಪ್ರತಿಕ್ರಿಯೆಯಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಂತೆ ಕಂಡುಬಂದ ಕಾರಣ, ಅವರ ಕುಟುಂಬ ಅದೇ ದಿನ ಕೆಲವೇ ಗಂಟೆಗಳಲ್ಲಿ ಅವರನ್ನು ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಬಂದರು. ತಕ್ಷಣ ಅವರನ್ನು ಪುನಃ ದಾಖಲಿಸಿ, ನಮ್ಮ ವೈದ್ಯಕೀಯ ತಂಡ ಅವರಿಗೆ ಅಗತ್ಯವಾದ ಚಿಕಿತ್ಸೆ ನೀಡುತ್ತಿದೆ. ಆದರೆ, ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ.