Chandragutti ಸೊರಬ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿಂದ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ವಕೀಲರ ಸಂಘದ ನೇತೃತ್ವದಲ್ಲಿ ಶಿವರಾತ್ರಿ ಪ್ರಯುಕ್ತ ಪಾದಯಾತ್ರೆ ನಡೆಸಲಾಯಿತು.
ಉಧೋ.. ಉಧೋ… ಶ್ರೀ ರೇಣುಕಾಂಬ ಉಧೋ.. ಎನ್ನುತ್ತಾ ಸುಮಾರು 18 ಕಿ.ಮೀ., ಪಾದಯಾತ್ರೆ ನಡೆಸಲಾಯಿತು. ಬೆಳಗಿನ ಜಾವ 5ಕ್ಕೆ ಆರಂಭವಾದ ಪಾದಯಾತ್ರೆ ಬೆಳಗ್ಗೆ 9ಕ್ಕೆ ಚಂದ್ರಗುತ್ತಿ ದೇವಸ್ಥಾನ ತಲುಪಿತು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಸಿ.ವೈ. ಅಶೋಕ್ ಮಾತನಾಡಿ, ದೇಶದಲ್ಲಿ ಸುಖ, ಶಾಂತಿ ನೆಲೆಸಲಿ, ಉತ್ತಮ ಮಳೆ-ಬೆಳೆಯಾಗಿ ನಾಡಿನ ರೈತ ಸಮೂಹ ನೆಮ್ಮದಿಯಾಗಿರಲಿ ಎಂದು ಪ್ರಾರ್ಥಿಸಿ ಮಲೆನಾಡಿನ ಅಧಿದೇವತೆ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಪಾದಯಾತ್ರೆ ನಡೆಸಲಾಯಿತು. ಸಮಾನ ಮನಸ್ಕರರು ಒಗ್ಗೂಡಿ ನಡೆಸಿದ ಪಾದಯಾತ್ರೆಗೆ ಜನತೆಯಿಂದಲೂ ಉತ್ತಮ ಪ್ರಶಂಸೆ ವ್ಯಕ್ತವಾಯಿತು. ಸರ್ವ ಸಮುದಾಯದವರಿಗೂ ಶಿವ ಆರಾಧ್ಯ ದೈವ. ಶಿವರಾತ್ರಿಯ ಪ್ರಯುಕ್ತ ಚಂದ್ರಗುತ್ತಿಯ ಕಾಲಭೈರವ, ತ್ರಿಶೂಲ ಭೈರವ ದೇವರಿಗೂ ಸಹ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದು ತಿಳಿಸಿದರು.
Chandragutti ಯುವ ವಕೀಲ ಆಶೀಕ್ ನಾಗಪ್ಪ ಮಾತನಾಡಿ, ವಕೀಲ ವೃತ್ತಿಯಲ್ಲಿ ಸದಾ ಒತ್ತಡದಲ್ಲಿರುವವರಿಗೆ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ನೆಮ್ಮದಿಯು ದೊರೆಯುತ್ತದೆ. ಇದರಿಂದ ಮತ್ತಷ್ಟು ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
ಪಾದಯಾತ್ರೆಯಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಎಸ್. ಅರುಣ್, ಓಂಕಾರಪ್ಪ, ಸತ್ಯನಾರಾಯಣ, ಚಂದ್ರಶೇಖರ್, ಎಚ್. ಆನಂದ್, ಗುರುಮೂರ್ತಿ, ಆಶೀಕ್ ನಾಗಪ್ಪ, ಪರಶುರಾಮ, ಶ್ರೀ ರೇಣುಕಾಂಬ ಭಕ್ತ ಸಮೂಹದ ಹೂವಪ್ಪ ಯಂಕೇನ್, ಏಕಾಂತಪ್ಪ, ತನ್ಮಯ್, ಭರತ್ ಪಾಲ್ಗೊಂಡಿದ್ದರು.
Chandragutti ಸೊರಬದಿಂದ ಚಂದ್ರಗುತ್ತಿಗೆ ಭಕ್ತಾದಿಗಳಿಂದ ಶಿವರಾತ್ರಿಯ ವಿಶೇಷ ಪಾದಯಾತ್ರೆ
Date:
