ಶಿವಮೊಗ್ಗ ಮತ್ತು ಚಿಕ್ಕಮಗಳೂರು ಕಾಫಿ ಹಾಗೂ ಅಡಿಕೆ ತೋಟಗಳ ಮಧ್ಯೆ ಬೆಳೆಯುವ ಕಾಳು ಮೆಣಸಿಗೆ ಜಿಎಸ್‌ಟಿ ರದ್ದು ಮಾಡದ್ದು,
ಕಾಳುಮೆಣಸು ಬೆಳೆಗಾರರಿಗೆ ನೆಮ್ಮದಿ ಇಲ್ಲದಂತಾಗಿದೆ.
ಕಾಳು ಮೆಣಸು ಕೊಯ್ಲಿಗೆ ಬೆಳೆಗಾರರು ಹರಸಾಹಸ ಪಡುತ್ತಿದ್ದಾರೆ. ಕಾಳು ಮನಸಿಗೆ ಜಿಎಸ್‌ಟಿ ರದ್ದಾಗಿದ್ದರೂ ಕೂಡ ತೆರಿಗೆ ಪಾವತಿಯಿಂದ ಬಚಾವ್ ಆಗಿಲ್ಲ ಎನ್ನುತ್ತಾರೆ ರೈತರು.
ಇಷ್ಟು ದಿನ ರೈತರೇ ತಾವು ಬೆಳೆದ ಕಾಳುಮೆಣಸಿಗೆ ಶೇ.5 ರಷ್ಟು ಜಿಎಸ್ ಟಿ ಪಾವತಿಸ ಬೇಕಿತ್ತು.ಕಾಳುಮೆಣಸು ಬೆಳೆಗಾರರು ತಮ್ಮ ಬೆಳೆಯನ್ನು ಗುತ್ತಿಗೆದಾರರಿಗೆ ಗುತ್ತಿಗೆ ನೀಡುತ್ತಿದ್ದರು.
ಕೇಂದ್ರ ಸರ್ಕಾರ ಕಾಳುಮೆಣಸಿನ ಮೇಲೆ ಜಿಎಸ್ ಟಿ ತೆಗೆದಿದೆಇದರಿಂದ ಯಾವುದೇ ಬದಲಾವಣೆ ಆಗೋದಿಲ್ಲವೆಂದು ರೈತರು ಹೇಳುತ್ತಿದ್ದಾರೆ. ಜಿಎಸ್ಟಿ ಕಡಿಮೆ ಮಾಡಿರುವುದು ಕೊಳ್ಳುವವನಿಗೆ ಲಾಭ ಆಗುತ್ತಿದೆ.ಬೆಳೆಗಾರರಿಗೆ ಯಾವುದೇ ಪ್ರಯೋಜನ ಇಲ್ಲ.
ರಾಜಕಾರಣಿಗಳ ಮಕ್ಕಳು ಕಾಳು ಮೆಣಸಿನನ್ನು ಬೇರೆ ದೇಶದಿಂದ ಆಮದು ಮಾಡುತ್ತಿದ್ದಾರೆ.ಸರ್ಕಾರ ಅದರ ಬಗ್ಗೆ ಚಿಂತಿಸ ಬೇಕು.
ಬೆಳೆಗಳಿಗೆ ಬರುತ್ತಿರುವ ರೋಗಗಳ ಬಗ್ಗೆ ಸರ್ಕಾರ ಗಮನಹರಿಸಬೇಕು.
ಸ್ಪೈಸ್ ಬೋರ್ಡ್ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಲಿ ಎಂದಿದ್ದಾರೆ.
ಸತ್ತುಹೋಗಿರುವ ಸ್ಪೈಸ್ ಬೋರ್ಡ್ ಗೆ ಅಧಿಕಾರಿಗಳನ್ನು ನೇಮಿಸುವಂತೆ ಒತ್ತಾಯಿಸಿರುವ ರೈತರು ಕೇವಲ ಎಸಿ ರೂಮ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.