Sunday, December 14, 2025
Sunday, December 14, 2025

Ambedkar Bhavan ದೇಶದ ಸಂವಿಧಾನಕ್ಕೆ ಗೌರವ ಕೊಟ್ಟರೆ ನಾವು ನಮ್ಮ ಹೆತ್ತ ತಂದೆ ತಾಯಿಗೆ ಗೌರವ ಕೊಟ್ಟಂತೆ: ಎಸ್‌ ಮಧು ಬಂಗಾರಪ್ಪ

Date:

Ambedkar Bhavan ದೇಶದ ಸಂವಿಧಾನಕ್ಕೆ ಗೌರವ ಕೊಟ್ಟರೆ ನಾವು ನಮ್ಮ ಹೆತ್ತ ತಂದೆ ತಾಯಿಗೆ ಗೌರವ ಕೊಟ್ಟಂತೆ, ಈಗ ನಮ್ಮ ದೇಶದಲ್ಲಿ ನಮ್ಮ ಸಂವಿಧಾನ ಉಳಿಸಿ ಎನ್ನುವ ಹೋರಾಟ ಮಾಡಬೇಕಿದೆ ಎಂದು ಶಿಕ್ಷಣ ಸಚಿವರಾದ ಎಸ್‌ ಮಧು ಬಂಗಾರಪ್ಪ ತಿಳಿಸಿದರು.

ಶಿವಮೊಗ್ಗ ನಗರದ ಅಂಬೇಡ್ಕರ್‌ ಭವನದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ರಕ್ಷಕ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶದಲ್ಲಿರುವ ಸಂವಿಧಾನಕ್ಕೆ ಶ್ರೀಮಂತರು ಬಡವರು ಎಂಬ ಬೇಧವಿಲ್ಲ. ಈ ಹಿಂದೆ ಬ್ರಿಟಿಷರಿಂದ ಸ್ವಾತಂತ್ರ್ಯ ಬೇಕೆಂದು ಅನೇಕ ಹೋರಾಟಗಾರರು ಹೋರಾಟ ಮಾಡಿ ಸ್ವಾತಂತ್ರ್ಯವನ್ನು ನಮಗೆ ತಂದುಕೊಟ್ಟರು. ನಂತರ ಬಾಬಾ ಸಾಹೇಬ್‌ ಅಂಬೇಡ್ಕರ್‌ರವರು ವಿವಿಧ ದೇಶಗಳಿಂದ ಅಧ್ಯಯನ ಮಾಡಿ ಉತ್ತಮವಾದ ಸಂವಿಧಾನವನ್ನು ರಚನೆ ಮಾಡಿ ನಮಗೆ ನೀಡಿದರು. ಈಗ ದೇಶದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ನಮ್ಮ ದೇಶದ ಸಾತಂತ್ರ್ಯವನ್ನು ನಾವು ರಕ್ಷಣೆ ಮಾಡಬೇಕಿದೆ. ಈಗ ನಮ್ಮ ದೇಶದಲ್ಲಿ ನಮ್ಮ ಸಂವಿಧಾನ ಉಳಿಸಿ ಎನ್ನುವ ಹೋರಾಟ ಮಾಡಬೇಕಿದೆ. ನಾವು ಸಂವಿಧಾನಕ್ಕೆ ಗೌರವ ಕೊಟ್ಟರೆ ನಮ್ಮ ತಂದೆ ತಾಯಿಗೆ ಗೌರವ ಕೊಟ್ಟಂತೆ ಎಂದರು. ಈ ಹಿಂದೆ ಪಠ್ಯ ಪುಸ್ತಕ ಕೇಸರಿಕರಣದಿಂದ ತುಂಬಿ ಹೋಗಿತ್ತು. ನಾನು ಅಧಿಕಾರಕ್ಕೆ ಬಂದ ಮೊದಲು ಪಠ್ಯ ಪುಸ್ತಕದಲ್ಲಿದ್ದ ಕೇಸರಿಕರಣ ತೆಗೆದು ಪಠ್ಯ ಪುಸ್ತಕ ಪರಿಷ್ಕರಣೆಗೆ ಸಹಿ ಮಾಡಿದೆ. ಅದರ ಮೂಲಕ ಸಂವಿಧಾನಕ್ಕೆ ಗೌರವ ನೀಡುತ್ತೇ. ಹಾಗೆಯೇ ರಾಜ್ಯದ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಕಲಿಕೆಯ ಮಾಧ್ಯಮದಲ್ಲಿ ಸಂವಿಧಾನದ ಪೀಠಿಕೆ ಕಡ್ಡಾಯ ಮಾಡಿದ್ದೇನೆ. ದೇಶದ ಎಲ್ಲಾ ಜನರಿಗೂ ಅಧಿಕಾರ ಪಡೆಯುವ ಅವಕಾಶ ಕಲ್ಪಿಸಿದ್ದು ನಮ್ಮ ಸಂವಿಧಾನ. ನಮ್ಮ ಸಂವಿಧಾನವನ್ನು ರಕ್ಷಿಸುವ ಕೆಲಸ ಸಿಕ್ಕಿರುವುದು ನಮ್ಮ ಪುಣ್ಯ. ಸಂವಿದಾನ ರಕ್ಷಣೆ ಮಾಡುವ ಉದ್ದೇಶದಿಂದ ಸಂವಿಧಾನ ರಕ್ಷಕ್ ಅಭಿಯಾನವನ್ನು ಕೈಗೊಂಡಿದ್ದೇವೆ. ಈ ಕಾರ್ಯಕ್ರಮ ನಮ್ಮ ಪಕ್ಷದಿಂದ ಇಡೀ ರಾಜ್ಯದಾದ್ಯಂತ ನಡೆಯುತ್ತದೆ. ಇದಕ್ಕೆ ನಮ್ಮ ಸಹಕಾರ ಯಾವಾಗಲೂ ಇರುತ್ತದೆ ಎಂದರು. ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು ಮಾತನಾಡಿ, ನಮ್ಮ ಸಂವಿಧಾನವನ್ನು ಅಂಬ್ಡೇಕರ್ ಸೇರಿದಂತೆ ಎಲ್ಲ ಸದಸ್ಯರು ಅಧ್ಯಯನ ಮಾಡಿ ರಚಿಸಿದ್ದಾರೆ. ಭಾರತದ ಸಂವಿಧಾನವೇ ಶ್ರೇಷ್ಠ ಎಂದು ಜಗತ್ತಿನಲ್ಲಿಯೇ ಹೆಸರಾಗಿದೆ. ಆದರೆ ಇಂಥಹ ಸಂವಿಧಾನವನ್ನು ಈಗ ಬಿಜೆಪಿಯವರು ಅವಮಾನಮಾಡತೊಡಗಿದ್ದಾರೆ. ಸಂವಿಧಾನಕ್ಕೆ ಅವಮಾನ ಮಾಡುವವರ ವಿರುದ್ಧ ಕಾಂಗ್ರೆಸ್ ಪಕ್ಷ ಎಂದೂ ಸುಮ್ಮನಿರುವುದಿಲ್ಲ. ಹಾಗಾಗಿಯೇ ಇಂಥಹ ಅಭಿಯಾನಗಳು ನಡೆಯುತ್ತಿವೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಕೇಂದ್ರದ ಗೃಹ ಮಂತ್ರಿ ಸೇರಿದಂತೆ ಬಿಜೆಪಿ ನಾಯಕರು ಡಾ.ಅಂಬೇಡ್ಕರ್ ಅವರಿಗೆ ಅವಮಾನ ಮಾಡುವುದರ ಜೊತೆಗೆ ಸಂವಿಧಾನವನ್ನೇ ಬದಲಾವಣೆ ಮಾಡಲು ಹೊರಟಿದ್ದಾರೆ. ಮನು ಸಂವಿಧಾನ ರಚಿಸುವ ಹುನ್ನಾರ ಸದ್ದಿಲ್ಲದೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಇದಕ್ಕೆ ಅವಕಾಶ ನೀಡುವುದಲ್ಲ ಎಂದರು.

Ambedkar Bhavan ಮನುಷ್ಯನನ್ನು ಉತ್ತಮ ಮನುಷ್ಯನನ್ನಾಗಿಸುವುದೇ ಸಂವಿಧಾನದ ಮುಖ್ಯ ಉದ್ದೇಶ ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ.ಕೆ.ಜಿ. ವೆಂಕಟೇಶ್ ಹೇಳಿದರು. ಸಂವಿಧಾನ ರಕ್ಷಕ್ ಅಭಿಯಾನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಸಂವಿಧಾನ ಎಂದು ಕೆಡುಕು ಉಂಟುಮಾಡುವುದಿಲ್ಲ. ಆದರೆ ಅದನ್ನು ಮನುಷ್ಯರಾದ ನಾವು ಗೌರವಿಸಬೇಕು. ಸ್ವಾತಂತ್ರ್ಯ ಸಮಾನತೆ ಮಾತೃತ್ವದ ಮುಖ್ಯ ತತ್ವಗಳು ಇಲ್ಲಿವೆ. ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಡಾ.ಬಿ.ಆರ್. ಅಂಬೇಡ್ಕರ್ ಭಾರತ ದೇಶಕ್ಕೆ ಒಂದು ಉತ್ತಮ ಸಂವಿಧಾನವನ್ನು ನೀಡಿದ್ದಾರೆ. ಇದು ಮನುಷ್ಯರ ಮಾನವಿಯತೆಯನ್ನು ಪ್ರತಿಬಿಂಬಿಸುವ ಸ್ವರೂಪವು ಆಗಿದೆ ಎಂದರು.

ಸಂವಿಧಾನವನ್ನು ಸಂವಿಧಾನವೇ ರಕ್ಷಣೆ ಮಾಡಿಕೊಳ್ಳುತ್ತದೆ. ಮೂಲಭೂತ ಉದ್ದೇಶಗಳಿಗೆ ಯಾವುದೇ ಚ್ಯುತಿಯಾಗದಂತೆ ಸಂವಿಧಾನವನ್ನು ಬದಲಾವಣೆ ಮಾಡಬಹುದಾಗಿದೆ. ಸಂವಿಧಾನದ ಪೀಠಿಕೆಯಲ್ಲಿಯೇ ಅದರ ಮುಖ್ಯ ಉದ್ದೇಶಗಳನ್ನ ತಿಳಿಸಲಾಗಿದೆ. 395 ವಿಧಿಗಳಿದ್ದು ಈಗ ಅದು ತಿದ್ದುಪಡಿಯ ಮೂಲಕ 442 ವಿಧಿಗಳಾಗಿವೆ. ಆರಂಭದಲ್ಲಿ 8 ಷಡ್ಯುಲ್‍ಗಳಿದ್ದು, ಈಗ 12 ಷಡ್ಯುಲ್‍ಗಳಲಿವೆ. ಜಗತ್ತಿನಲ್ಲಿ ಅತಿ ದೊಡ್ಡ ಸಂವಿಧಾನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಂತಹ ಸಂವಿಧಾನದ ರಕ್ಷಣೆಯೂ ಕೂಡ ನಮ್ಮದೇ ಅಗಿದೆ.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಎನ್.ರಮೇಶ್, ಡಾ.ಶ್ರೀನಿವಾಸ್ ಕರಿಯಣ್ಣ, ಕಲಿಂ ಪಾಶಾ, ಶಿವಕುಮಾರ್, ರವಿಕುಮಾರ್, ಎಸ್.ಪಿ.ಶೇಷಾದ್ರಿ, ಎಚ್.ಸಿ.ಯೋಗೀಶ್, ರಮೇಶ್ ಶಂಕರಘಟ್ಟ, ಸಿ.ಎಸ್.ಚಂದ್ರಭೂಪಾಲ್, ರಮೇಶ್ ಇಕ್ಕೇರಿ, ಜಿ.ಡಿ.ಮಂಜುನಾಥ್, ಉಮಾಪತಿ, ವಿಜಯಕುಮಾರ್ (ದನಿ), ನಾಗರಾಜ್ ಕಂಕಾರಿ, ಸುವರ್ಣ ನಾಗರಾಜ್, ಭಾರತಿ ರಾಮಕೃಷ್ಣ, ಹರ್ಷಿತ್ ಗೌಡ, ನಗರದ ಮಹಾದೇವಪ್ಪ, ಮಂಜುನಾಥ ಬಾಬು, ವಿಜಯಲಕ್ಷ್ಮೀ ಪಾಟೀಲ್, ಎಚ್.ಎಮ್.ಮಧು, ಶಿಜು ಪಾಶಾ, ಪದ್ಮನಾಭ ಸೇರಿದಂತೆ ಹಲವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...