Ministry of Information and Broadcasting ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ನೆಟ್‌ಫ್ಲಿಕ್ಸ್, ವಿಶ್ವ ಧ್ವನಿ ಶ್ರವಣ ಮನೋರಂಜನಾ ಶೃಂಗ ಸಭೆ (ವೇವ್ಸ್) ಗಳ ಸಂಯುಕ್ತ ಆಶ್ರಯದಲ್ಲಿ ಯುವ ಜನತೆಯಲ್ಲಿನ ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಅನ್ ಲಾಕ್ ಕ್ರಿಯೇಟಿವಿಟಿ ಶೀರ್ಷಿಕೆ ಅಡಿಯಲ್ಲಿ ನೆಟ್‌ಫ್ಲಿಕ್ಸ್ನಲ್ಲಿ ಪ್ರಸಾರಗೊಂಡ ಧಾರಾವಾಹಿ, ಚಲನಚಿತ್ರಗಳ ಕುರಿತಾದ ಟ್ರೇಲರ್ ತಯಾರಿಕೆಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಇದು ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಒಂದು ಪ್ರತಿಷ್ಠಿತ ಕಾರ್ಯಕ್ರಮವಾಗಿದ್ದು, ಡಿಜಿಟಲ್ ಕಥೆ ಹೇಳುವಿಕೆ, ಚಲನಚಿತ್ರ ನಿರ್ಮಾಣ ಮತ್ತು ವಿಷಯ ರಚನೆಯ ಭವಿಷ್ಯವನ್ನು ಚರ್ಚಿಸಲು ಉತ್ತಮ ಅವಕಾಶಗಳನ್ನುತೆರೆದಿಡಲಿದೆ.
ನೆಟ್‌ಫ್ಲಿಕ್ಸ್ನ ಜನಪ್ರಿಯ ಕಾರ್ಯಕ್ರಮಗಳಾದ ಹೀರಮಂಡಿ, ಜಾನೆ ಜಾನ್, ಚೋರ್ ನಿಕಲ್ ಕೆ ಭಾಗಾ, ಮೋನಿಕಾ, ಓ ಮೈ ಡಾರ್ಲಿಂಗ್, ದಿ ಆರ್ಚೀಸ್, ಮಾಲಾ ಮಾಲ್ ಮತ್ತು ಗನ್ಸ್ ಗುಲಾಬ್ಸ್ ಸೇರಿದಂತೆ ಭಾರತೀಯ ಹಿಟ್ ಚಿತ್ರಗಳ ಟ್ರೇಲರ್ ಗಳನ್ನು ಮರು ರೂಪಿಸುವ ಮೂಲಕ ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ತಮ್ಮ ಸೃಜನಶೀಲತೆಯನ್ನು ಅನಾವರಣಗೊಳಿಸಬಹುದು.
ಉತ್ತಮ-ಗುಣಮಟ್ಟದ ಟ್ರೇಲರ್ ಗಳನ್ನು ನಿರ್ಮಿಸಲು ಸೂಕ್ತ ಅವಕಾಶ ಇದಾಗಿದ್ದು, ಕೇವಲ ಸ್ಪರ್ಧೆಗಿಂತ ಹೆಚ್ಚಾಗಿ, ಅನ್‌ಲಾಕಿಂಗ್ ಕ್ರಿಯೇಟಿವಿಟಿ ಮೂಲಕ ಯುವ ಜನತೆಯಲ್ಲಿನ ಕ್ರಿಯಾಶೀಲ ಚಟುವಟಿಕೆಗಳಿಗೆ ಇದು ಸಹಕಾರಿಯಾಗಲಿದೆ. ಸ್ಪರ್ಧೆಯಲ್ಲಿ ಆಯ್ಕೆಯಾದ ಟ್ರೇಲರ್‌ಗಳನ್ನು ಮುಂಬೈನಲ್ಲಿ ನಡೆಯುವ ಅಂತಿಮ ಸುತ್ತಿನ ಪ್ರದರ್ಶಿಸಲಾಗುತ್ತಿದೆ.
ಭಾಗವಹಿಸುವ ಎಲ್ಲಾ ಸ್ಪರ್ಧೆಗಳಿಗೆ ಪ್ರಮಾಣ ಪತ್ರ, ನೆಟ್‌ಫ್ಲಿಕ್ಸ್ ವತಿಯಿಂದ ಆಯ್ದ 20 ಮಂದಿಗೆ ಆಕರ್ಷಕ ಟ್ರೋಫಿ ನೀಡಲಾಗುವುದಲ್ಲದೇ ಮುಂಬೈನ ಜಿಯೋ ಕನ್ವೆನ್ಷನ್ನಲ್ಲಿ 2025 ರ ಮೇ 1 ರಿಂದ ಮೇ 4 ರವರೆಗೆ ನಡೆಯಲಿರುವ ವಿಶ್ವ ಆಡಿಯೊ ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಶೃಂಗಸಭೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗುವುದು.
ಈ ಸ್ಪರ್ಧೆಗೆ ಈಗಾಗಲೇ ನೋಂದಣಿ ಆರಂಭವಾಗಿದ್ದು, ಮಾ. 21ರವರೆಗೆ ಟ್ರೇಲರ್ ಸಲ್ಲಿಸಲು ಅವಕಾಶವಿದೆ. ಆಯ್ದ ಅತ್ಯುತ್ತಮ 20 ಟ್ರೇಲರ್‌ಗಳನ್ನು ಏಪ್ರಿಲ್ 15ರಂದು ಪ್ರಕಟಿಸಲಾಗುತ್ತದೆ. ವಿಜೇತ ಟ್ರೇಲರ್‌ಗಳಿಗೆ ಮೇ.1 ರಿಂದ 4ರವರೆಗೆ ನಡೆಯುವ ವೇವ್ಸ್ ಶೃಂಗ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಲಾಗಿದೆ.
Ministry of Information and Broadcasting ಯುವಜನತೆಯಲ್ಲಿನ ಕ್ರಿಯಾಶೀಲತೆಗೆ ಇದೊಂದು ಅವಕಾಶ, ಜನಪ್ರಿಯ ಕಾರ್ಯಕ್ರಮಗಳ ಟ್ರೇಲರ್ ತಯಾರಿಕಾ ಸ್ಪರ್ಧೆ
Date: