Saturday, February 22, 2025
Saturday, February 22, 2025

Narayana Health ಪಶ್ಚಿಮ ಬಂಗಾಳದಲ್ಲಿ ನಾರಾಯಣ ಹೆಲ್ತ್ ನ 21ನೇ ಘಟಕಕ್ಕೆ ಶಂಕುಸ್ಥಾಪನೆ

Date:

Narayana Health ಪಶ್ಚಿಮ ಬಂಗಾಳದಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ನಾರಾಯಣ ಹೆಲ್ತ್ ಸಂಸ್ಥೆಯು ಇಂದು ಕೋಲ್ಕತ್ತಾದ ನ್ಯೂ ಟೌನ್‌ ನಲ್ಲಿ ತನ್ನ ಅತಿದೊಡ್ಡ ಘಟಕವಾದ ನಾರಾಯಣ ಹೆಲ್ತ್ ಸಿಟಿಗೆ ಶಂಕುಸ್ಥಾಪನೆ ನೆರವೇರಿಸಿದೆ.

ಈ ಘಟಕವು ನಾರಾಯಣ ಹೆಲ್ತ್ ನ 21ನೇ ಘಟಕವಾಗಿದ್ದು, ಪೂರ್ವ ಭಾರತದಲ್ಲಿನ ಅತಿದೊಡ್ಡ ಖಾಸಗಿ ಆಸ್ಪತ್ರೆ ಘಟಕ ಎಂಬ ಹೆಗ್ಗಳಿಕೆಯನ್ನು ಪಡೆಯಲಿದೆ. ಈ ಘಟಕವು ಅತ್ಯಾಧುನಿಕ ತಂತ್ರಜ್ಞಾನಗಳುಳ್ಳ ಮಲ್ಟಿ ಸ್ಪೆಷಾಲಿಟಿ ಘಟಕವಾಗಲಿದ್ದು, 10 ಲಕ್ಷ ಚದರ ಅಡಿಯಷ್ಟು ವಿಶಾಲವಾಗಿದೆ. ಆಂಕಾಲಜಿ, ಕಾರ್ಡಿಯಾಕ್ ಸೈನ್ಸಸ್, ಆರ್ಗನ್ ಟ್ರಾನ್ಸ್‌ ಪ್ಲ್ಯಾಂಟ್‌, ಆರ್ಥೋಪೆಡಿಕ್ಸ್ ಮತ್ತು ಅಡ್ವಾನ್ಸ್ಡ್ ಟ್ರಾಮಾ ಕೇರ್, ನ್ಯೂರಾಲಜಿ, ಗ್ಯಾಸ್ಟ್ರೋಎಂಟರಾಲಜಿ, ರೀನಲ್ ಸೈನ್ಸಸ್ ಮತ್ತು ಕ್ರಿಟಿಕಲ್ ಕೇರ್‌ ಸೇರಿದಂತೆ ಹಲವಾರು ವೈದ್ಯಕೀಯ ವಿಭಾಗಗಳಲ್ಲಿ ಅತ್ಯಾಧುನಿಕ ಚಿಕಿತ್ಸೆ ನೀಡಲಿದೆ.

ನ್ಯೂ ಟೌನ್‌ ನಲ್ಲಿರುವ ನಾರಾಯಣ ಹೆಲ್ತ್ ಸಿಟಿ ಯೋಜನೆಯು ಪೂರ್ಣಗೊಂಡ ಬಳಿಕ 1,100 ಹಾಸಿಗೆಗಳನ್ನು ಹೊಂದಿರುವ ಈ ವಲಯದ ವಿಶೇಷ ಘಟಕ ಆಗಲಿದೆ. ಈ ಮೂಲಕ ನಾರಾಯಣ ಹೆಲ್ತ್‌ ಸಂಸ್ಥೆಯು ಒಟ್ಟು 7,350 ಹಾಸಿಗೆಗಳನ್ನು ಹೊಂದಿರುವ ಸಾಮರ್ಥ್ಯ ಗಳಿಸಲಿದೆ ಎಂಬುದು ಗಮನಾರ್ಹವಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿರುವ ನಾರಾಯಣ ಹೆಲ್ತ್‌ ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಗ್ರೂಪ್ ಸಿಇಓ ಡಾ. ಇಮ್ಯಾನ್ಯುಯೆಲ್ ರೂಪರ್ಟ್ ಅವರು, “ನಾರಾಯಣ ಹೆಲ್ತ್ ಸಿಟಿ ಪೂರ್ವ ಭಾರತದ ಜನರಿಗೆ ಅತ್ಯುತ್ತಮ ವೈದ್ಯಕೀಯ ಸೇವೆಯನ್ನು ಒದಗಿಸುವ ಅತಿದೊಡ್ಡ ಖಾಸಗಿ ಆಸ್ಪತ್ರೆ ಘಟಕವಾಗಲಿದೆ. ಈ ಘಟಕದ ಮೂಲಕ ನಾರಾಯಣ ಹೆಲ್ತ್ ಸಂಸ್ಥೆಯು ಪಶ್ಚಿಮ ಬಂಗಾಳದ ಅತಿದೊಡ್ಡ ಮತ್ತು ಅತ್ಯಂತ ಸಮಗ್ರವಾದ ಖಾಸಗಿ ಆರೋಗ್ಯ ಸೇವಾ ಸಂಸ್ಥೆಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಲಿದೆ” ಎಂದು ಹೇಳಿದರು.

ನಾರಾಯಣ ಹೆಲ್ತ್‌ ನ ಗ್ರೂಪ್ ಸಿಓಓ ಶ್ರೀ ಆರ್ ವೆಂಕಟೇಶ್ ಅವರು, “ಅತ್ಯುತ್ತಮ ವೈದ್ಯಕೀಯ ಸೇವೆಗೆ ಬೇಡಿಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸುಸಜ್ಜಿತ ತುರ್ತು ಆರೈಕೆ ಘಟಕವನ್ನು ಹೊಂದಿರುವುದು ಅತ್ಯವಶ್ಯವಾಗಿದೆ. ಈ ಹೊಸ ಘಟಕವು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಹೊಂದಲಿದ್ದು, ಸಂಕೀರ್ಣ ಮತ್ತು ತುರ್ತು ಪ್ರಕರಣಗಳನ್ನು ನಿಭಾಯಿಸುವ ಈ ಪ್ರದೇಶದ ಸಾಮರ್ಥ್ಯವನ್ನು ಜಾಸ್ತಿ ಮಾಡುತ್ತದೆ” ಎಂದು ಹೇಳಿದರು.

ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್ ವರ್ಗೀಸ್ ಪಿ. ಜಾನ್ ಅವರು, “ನಮ್ಮ ಸಂಸ್ಥೆಯ ಅಭಿವೃದ್ಧಿಯನ್ನು ನೋಡುವುದು ನಮ್ಮೆಲ್ಲರಿಗೆ ಹೆಮ್ಮೆ ತರುವ ವಿಷಯವಾಗಿದೆ. ಈ ಹೊಸ ಘಟಕದ ಮೂಲಕ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ ತನ್ನ ಬದ್ಧತೆಯನ್ನು ನಾರಾಯಣ ಹೆಲ್ತ್ ಸಂಸ್ಥೆಯು ಸಾರಿದೆ” ಎಂದು ಹೇಳಿದರು.

ನಾರಾಯಣ ಹೆಲ್ತ್ ಈಗಾಗಲೇ ದಕ್ಷಿಣ ಭಾರತದ ಬೆಂಗಳೂರು, ಶಿವಮೊಗ್ಗ, ಮೈಸೂರು, ಧಾರವಾಡ, ದಾವಣಗೆರೆ ಮತ್ತು ಕೋಲಾರ ಪ್ರದೇಶದ ಜನರಿಗೆ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿದೆ. ಪೂರ್ವ ಭಾರತದ ಕೋಲ್ಕತ್ತಾ, ಹೌರಾ, ಬರಾಸತ್, ರಾಯ್‌ಪುರ, ಗುವಾಹಟಿ, ಜಮ್‌ಶೆಡ್‌ಪುರ ಮತ್ತು ಪಶ್ಚಿಮ ಭಾರತದ ಮುಂಬೈ, ಅಹಮದಾಬಾದ್ ಮತ್ತು ಉತ್ತರ ಭಾರತದ ದೆಹಲಿ ಎನ್ ಸಿ ಆರ್, ಜೈಪುರ ಮತ್ತು ಕತ್ರಾಗಳಲ್ಲಿ ಕೂಡ ವೈದ್ಯಕೀಯ ಸೇವೆ ಒದಗಿಸುತ್ತಿದೆ ಎಂಬುದನ್ನು ಇಲ್ಲಿ ಸ್ಮರಿಸಿಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ನಗರದ ಆಸ್ತಿ ಮಾಲೀಕರ ಸ್ವತ್ತಿನ ದಾಖಲೆಗಳನ್ನು ಸೃಜಿಸಲು ನಕ್ಷಾ ಯೋಜನೆ ಸಹಕಾರಿ : ಸಚಿವ ಎಸ್. ಮಧು ಬಂಗಾರಪ್ಪ

Madhu Bangarappa ನಗರ ಮತ್ತು ಪಟ್ಟಣ ಪ್ರದೇಶದಲ್ಲಿನ ಸಾರ್ವಜನಿಕರ ಅಸ್ತಿಗಳ ಭೂ...

Skill Development Entrepreneurship Department ಫೆ. 24 ರಂದು ಉದ್ಯೋಗ ಮೇಳ

Skill Development Entrepreneurship Department ಕೌಶಾಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ,...

Rotary Club Shivamogga ಸಂಧಿ ಮತ್ತು ಮೂಳೆ ನೋವುಗಳ ಉಚಿತ ತಪಾಸಣೆ ಶಿಬಿರ

Rotary Club Shimoga ಕೃತ್ವಿ ಆಯುರ್ವೇದ ಮೊದಲನೇ ವಾರ್ಷಿಕೋತ್ಸವದ ಪ್ರಯುಕ್ತ ದುರ್ಗಿಗುಡಿ,...

Chamber Of Commerce Shivamogga ಆರ್ಥಿಕ ತಜ್ಞ ವಿಶ್ವನಾಥ್ ಭಟ್ ಅವರಿಗೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಸನ್ಮಾನ

Chamber Of Commerce Shivamogga ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ...