Compass Holidays & Adventure ಹಿಮಾಲಯ ಚಾರಣದಲ್ಲಿ ಎಚ್ಚರಿಕೆ ವಹಿಸುವುದು ಮುಖ್ಯ. ಚಾರಣ ಮಾಡುವಾಗ ಪೂರ್ವ ತಯಾರಿ ಬಹಳ ಅಗತ್ಯ. ಆರೋಗ್ಯದ ಪರಿಸ್ಥಿತಿ ಹಾಗೂ ಹಿಮಾಲಯದ ಪ್ರದೇಶಗಳಿಗೆ ಅಗತ್ಯವಾಗಿ ಬೇಕಾಗಿರುವ ಚಾರಣದ ವಸ್ತುಗಳು ಮುಖ್ಯವಾಗುತ್ತವೆ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಜಿ.ಗಣೇಶ್ ಹೇಳಿದರು.
ದಿಕ್ಸೂಚಿ ಅಡ್ವೆಂಚರ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ 10 ದಿನಗಳ ಹಿಮಾಲಯದ ಕೌರಿ ಪಾಸ್ ಯಶಸ್ವಿ ಚಾರಣ ಮುಗಿಸಿ ಮಾತನಾಡಿ, ಪ್ರಪಂಚದ ಅತ್ಯಂತ ಸುಂದರ ಹಾಗೂ ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ದೇವಭೂಮಿಗಳಲ್ಲಿ ಹಿಮಾಲಯದ ಕೌರಿ ಪಾಸ್ ಚಾರಣ ಒಂದಾಗಿದೆ. ಇಂತಹ ಸಾಹಸ ಚಟುವಟಿಕೆಗಳಿಂದ ನಮ್ಮಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತದೆ ಎಂದು ತಿಳಿಸಿದರು.
ನಾವು ಚಳಿಗಾಲದಲ್ಲಿ ಎಂದೂ ನೋಡದ ಹಿಮ ಹಾಗೂ ಬಹಳ ಸುಂದರವಾದ ಪ್ರಕೃತಿ ಪರಿಸರ ಕೈಲಾಸ ಪರ್ವತ ನೋಡಿದ ಅನುಭವ ಆಗುತ್ತದೆ. ಆದ್ದರಿಂದ ಬಾಲ್ಯದಲ್ಲೇ ಮಕ್ಕಳಿಗೆ ಚಾರಣದ ಆಸಕ್ತಿ ಮೂಡಿಸಬೇಕು. ಆದ್ದರಿಂದ ಸದಾ ಆರೋಗ್ಯವಂತರಾಗಿರಲು ಸಾಧ್ಯ ಎಂದು ನುಡಿದರು.
ದಿಕ್ಸೂಚಿ ಅಡ್ವೆಂಚರ್ ಸಂಸ್ಥೆಯ ಚೇರ್ಮನ್ ಪೃಥ್ವಿ ಗಿರಿಮಾಜಿ ಮಾತನಾಡಿ, ದಿಕ್ಸೂಚಿ ಅಡ್ವೆಂಚರಸ್ ಸಂಸ್ಥೆ ವತಿಯಿಂದ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ಚಾರಣಗಳ ಜತೆಗೆ ಅಂತರಾಷ್ಟ್ರೀಯ ಚಾರಣಗಳನ್ನು ಆಯೋಜಿಸಲಾಗುತ್ತದೆ. ಈಗಾಗಲೇ ನಮ್ಮ ಸಂಸ್ಥೆ ವತಿಯಿಂದ ನೂರಕ್ಕೂ ಹೆಚ್ಚು ವಿವಿಧ ಚಾರಣಗಳನ್ನು. ಪ್ರಕೃತಿ ಅಧ್ಯಯನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲಾ ಕಾಲೇಜುಗಳಲ್ಲಿ ಪರಿಸರ ಜಾಗೃತಿ ಶಿಬಿರದ ಜತೆಗೆ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ನುಡಿದರು. ಮುಂದಿನ ದಿನಗಳಲ್ಲಿ ಚಾರಣ ಮಾಡಲು ಆಸಕ್ತಿ ಇರುವವರು ನಮ್ಮ ಸಂಸ್ಥೆಗೆ ಸದಸ್ಯರಾಗಿ ಚಾರಣದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ ಎಂದರು.
ಚಾರಣದಲ್ಲಿ ವಿವಿಧ ಜಿಲ್ಲೆಗಳಿಂದ ರಾಜ್ಯಾದ್ಯಂತ ಆಗಮಿಸಿದ ಚಾರಣಿಗರು ಭಾಗವಹಿಸಿದ್ದರು. ಕೆ.ವೈಷ್ಣವಿ, ಜಿ.ಓಂಕಾರ್, ಅಶ್ವಿನಿ ಸಿ ಗೋಗಿ, ಜಿ.ಪಿ.ಸುಧೀರ್ ಕುಮಾರ್, ಜಿ.ಇ.ಅರ್ಚನಾ, ಎಂ.ರಘು, ಸಿ.ಎನ್.ಅನ್ನಪೂರ್ಣ, ಜಿ.ಆರ್.ವಿನೋದ್ ಕುಮಾರ್, ಗಣೇಶ್ ಗಾಣಿಗೆರೆ, ವಿ.ಶ್ರೇಯಸ್, ಧ್ರುವ ಗೋಗಿ, ಎಂ.ಜಿ.ಅಶೋಕ್, ಬಿ.ಎಸ್.ಕಿರಣ್‌ಕುಮಾರ್ ಇತರರಿದ್ದರು.
Compass Holidays & Adventure ಹಿಮಾಲಯ ಚಾರಣದಲ್ಲಿ ಹೆಚ್ಚಿನ ಜಾಗೃತಿ ಅವಶ್ಯಕ : ಜಿ.ಗಣೇಶ್
Date: