Bhava Theera Yaana Movie ಇಡೀ ಕುಟುಂಬ ಕುಳಿತು ನೋಡಬಹುದಾದ ಭಾವನಾತ್ಮಕ ಸಿನಿಮಾ ‘ಭಾವ ತೀರ ಯಾನ’ ಚಲನಚಿತ್ರ ರಾಜ್ಯಾದ್ಯಂತ ಫೆ.21ರಂದು ತೆರೆ ಕಾಣಲಿದೆ ಎಂದು ಚಿತ್ರವನ್ನು ಪ್ರಸ್ತುತಪಡಿಸುತ್ತಿರುವ ಕೀಳಂಬಿ ಮೀಡಿಯಾದ ಮುಖ್ಯಸ್ಥರು ಮತ್ತು ‘ಶಾಖಾಹಾರಿ’ ಚಿತ್ರದ ನಿರ್ಮಾಪಕರಾದ ರಾಜೇಶ್ ಕೀಳಂಬಿ ಅವರು ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರೋಹ ಫಿಲಂಸ್ ಬ್ಯಾನರ್ ಅಡಿಯಲ್ಲಿ ಭಾವ ತೀರ ಯಾನ ಸಿನಿಮಾ ಮೂಡಿ ಬಂದಿದ್ದು, ಹೊಸ ಪ್ರತಿಭೆಗಳು ಸೇರಿ ಸಿನಿಮಾ ಮಾಡಿದ್ದಾರೆ. ಮಯೂರ್ ಅಂಬೇಕಲ್ ಮತ್ತು ತೇಜಸ್ ಕಿರಣ್ ನಿರ್ದೇಶನ ಚಿತ್ರಕ್ಕಿದೆ. ಯುವ ಕಲಾವಿದರ ಸಿನಿಮಾ ನೋಡಿ ಪ್ರೋತ್ಸಾಹಿಸಿ ಬೇಕೆಂದರು.
ತಾರಾಗಣದಲ್ಲಿ ರಮೇಶ್ ಭಟ್, ತೇಜಸ್ ಕಿರಣ್, ಆರೋಹಿ ನೈನಾ, ಅನುಷಾ ಕೃಷ್ಣ
ವಿದ್ಯಾಮೂರ್ತಿ, ಚಂದನ ಅನಂತ ಕೃಷ್ಣ ಮುಂತಾದವರಿದ್ದಾರೆ ಎಂದು ತಿಳಿಸಿದರು
ನಟ ನಿರ್ದೇಶಕ ಮಯೂರ್ ಅಂಬೆಕಲ್ಲು ಮಾತನಾಡಿ, ಈ ಚಿತ್ರವು ಪ್ರೇಮದ ಸುತ್ತವಿದ್ದು, ಪ್ರೀತಿಯ ಹಲವು ಮಜಲುಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿ ಒಟ್ಟು 5 ಹಾಡುಗಳಿದ್ದು, ಇದರ ಸಂಗೀತದ ಹೊಣೆಯನ್ನು ಮಯೂರ್ ಅಂಬೇಕಲ್ ಹೊತ್ತಿದ್ದಾರೆ. ವಾಸುಕಿ ವೈಭವ್, ಇನ್ನಿತರರು ಹಾಡಿದ್ದಾರೆ. ಹಾಡುಗಳು ತುಂಬಾ ಇಂಪಾಗಿದ್ದು, ಈಗಾಗಲೇ ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡುಗಳು ಅಪಾರ ಜನಮನ್ನಣೆ ಗಳಿಸಿದೆ ಎಂದು ಹೇಳಿದರು.
Bhava Theera Yaana Movie ಪ್ರೀತಿ, ಪ್ರೇಮ, ಭಾವನೆ,ಇಂಪಾದ ಹಾಡುಗಳು, ಒಂದಿಷ್ಟು ಕಾಮಿಡಿ ಇವಲ್ಲವೂ ಹಿತಮಿತವಾಗಿ ಚಿತ್ರದಲ್ಲಿವೆ. ಇಂದು ಕುಟುಂಬ ಸಮೇತ ನೋಡುವ ಚಿತ್ರಗಳು ತುಂಬಾ ಕಡಿಮೆ. ಆದರೆ ನಮ್ಮ ಭಾವತೀರ ಯಾನ ಕುಟುಂಬ ಸಮೇತ ನೋಡುವ ಚಿತ್ರವಾಗಿದೆ ಎಂದು ತೇಜಸ್ ಕಿರಣ್ ಹೇಳೀದರು.
ನಟಿ ಆರೋಹಿ ನೈನಾ ಮಾತನಾಡಿ, ತುಂಬಾ ಇಷ್ಟಪಟ್ಟು ಈ ಚಿತ್ರ ಮಾಡಿದ್ದೇವೆ. ಕನ್ನಡ ಚಿತ್ರರಸಿಕರು ಫೆ.21ರಂದು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಿ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ನಟಿ ಅನುಷಾ ಕೃಷ್ಣ ಮಾತನಾಡಿ, ನಾನು ಶಿವಮೊಗ್ಗದ ಮಗಳು. ಇದು ನನಗೆ ಹೆಮ್ಮೆ ಇದೆ. ಚಿತ್ರದಲ್ಲಿ ನನಗೆ ಒಳ್ಳೆಯ ಪಾತ್ರವಿದ್ದು, ಸ್ನೇಹದ ಮಹತ್ವವನ್ನು ನನ್ನ ಪಾತ್ರದ ಮೂಲಕ ತೋರಿಸಲಾಗಿದೆ.ಈ ಚಿತ್ರವು ಪ್ರೀತಿ ಪ್ರೇಮದ ಸುತ್ತವಿದ್ದರೂ ಕೂಡ ಇದಕ್ಕೊಂದು ವಿಶೇಷತೆ ಇದೆ. ಒಳ್ಳೆಯ ಸಂದೇಶ ಕೂಡ ಸಿನಿಮಾದಲ್ಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂದೀಪ್, ಕ್ಷೇಮಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು