B.Y. Raghavendra ಜಾಗತಿಕವಾಗಿ ಆರ್ಥಿಕ ಶಕ್ತಿಯಾಗಿ ಭಾರತ 3ನೇ ಸ್ಥಾನಕ್ಕೆ ಬರಲು ಹಣಕಾಸು ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಸಹ್ಯಾದ್ರಿ ಚಿಟ್ಸ್ ನ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಭಾರತವು ಮೂರನೇ ಆರ್ಥಿಕ ಶಕ್ತಿಯಾಗಿ ಬೆಳೆಯಲು ಪ್ರಧಾನ ಮಂತ್ರಿ ಮೋದಿಯವರು ಮಾಡುತ್ತಿರುವ ಪ್ರಯತ್ನಕ್ಕೆ ಚಿಕ್ಕ ಚಿಕ್ಕ ಹಣಕಾಸು ಸಂಸ್ಥೆಗಳು ಬಹು ಮುಖ್ಯಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಜನಸಾಮಾನ್ಯರ ಅಗತ್ಯಕ್ಕೆ ಸ್ಪಂದಿಸುತ್ತಿರುವ ಚಿಟ್ ಫಂಡ್ ಕಂಪನಿಗಳು ಅತಿ ಮುಖ್ಯ. ಸಹ್ಯಾದ್ರಿ ಚಿಟ್ಸ್ ಸಂಸ್ಥೆಯು 27 ವರ್ಷಗಳಿಂದ ಶಿವಮೊಗ್ಗದಲ್ಲಿ ನೀಡುತ್ತಿರುವ ಸೇವೆ ಶ್ಲಾಘನೀಯ. 27 ವರ್ಷಗಳು ಸೇವೆ ನೀಡಲು ಜನರೊಂದಿಗೆ ಅವರ ಬಾಂಧವ್ಯ ಹಾಗೂ ಗಳಿಸಿರುವ ನಂಬಿಕೆಯು ಬಹಳ ಮುಖ್ಯವಾಗುತ್ತದೆ. ಈಗ ವಾರ್ಷಿಕ 80 ಕೋಟಿ ರೂ. ವಹಿವಾಟು ಹೊಂದಿರುವ ಸಂಸ್ಥೆಯು ಮುಂದೆ ನೂರಾರು ಜನಕ್ಕೆ ಉದ್ಯೋಗ ನೀಡಿ 500 ಕೋಟಿ ರೂ. ವಹಿವಾಟು ನಡೆಸಲಿ ಎಂದು ಆಶಿಸಿದರು.
ಸಿನಿಮಾ ನಟ ದಿಗಂತ ಮಾತನಾಡಿ, ನನಗೆ ಮಲೆನಾಡು ಪ್ರದೇಶ ತುಂಬಾ ಇಷ್ಟ. ಇಲ್ಲಿಗೆ ಬಂದಿರುವುದು ತುಂಬಾ ಸಂತೋಷವಾಗಿದೆ. ಸಹ್ಯಾದ್ರಿ ಸಂಸ್ಥೆಯು 27 ವರ್ಷಗಳಿಂದ ನೀಡುತ್ತಿರುವ ಸೇವೆಯು ನೂರಾರು ವರ್ಷ ಮುನ್ನಡೆಯಲಿ ಎಂದು ಶುಭಹಾರೈಸಿದರು. ಸಂಸ್ಥೆಯ. ಮ್ಯಾನೇಜಿಂಗ್ ಡೈರೆಕ್ಟರ್ ರಮೇಶ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ನಡೆದು ಬಂದ ದಾರಿಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಸಂಸ್ಥೆಯ ಚಂದದಾರರಲ್ಲಿ ನಾನು ಕೂಡ ಒಬ್ಬ. ನನಗೂ ತುರ್ತು ಸಮಯದಲ್ಲಿ ಹಣ ದೊರೆತು ತುಂಬಾ ಅನುಕೂಲ ಆಗಿದೆ. ಇದೇ ರೀತಿ ಸಾಮಾನ್ಯ ಜನರೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು, ನಂಬಿಕೆಗೆ ಅರ್ಹವಾಗಿರುವ ಇಂತಹ ಕಂಪನಿಗಳು ಇನ್ನಷ್ಟು ಬೆಳೆಯಬೇಕು ಎಂದು ಹಾರೈಸಿದರು.
B.Y. Raghavendra ನಟ ದಿಗಂತ್ ಅವರಿಂದ ನೂತನವಾಗಿ ಆರಂಭಗೊಂಡ ಒಂದು ಕೋಟಿ ರೂ. ಚೀಟಿಯ ಮೊದಲ ಅದೃಷ್ಟವಂತರ ಆಯ್ಕೆ ಮಾಡಲಾಯಿತು. ಸಂಸ್ಥೆಯ ಚೇರ್ಮನ್ ಬದ್ರಿನಾಥ್ ಅಧ್ಯಕ್ಷೀಯ ನುಡಿಗಳನ್ನಾಡಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಸಂಸ್ಥೆ ನಿರ್ದೇಶಕ ಜಿ.ವಿಜಯಕುಮಾರ್ ಸ್ವಾಗತಿಸಿದರು. ರವೀಂದ್ರನಾಥ್ ಐತಾಳ್ ವಂದನಾರ್ಪಣೆ ನಡೆಸಿಕೊಟ್ಟರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ ಬಿ.ಗೋಪಿನಾಥ್, ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೀಶ್, ಉದ್ಯಮಿ ಅಶ್ವತ್ ನಾರಾಯಣ ಶೆಟ್ಟಿ, ಸಂಸ್ಥೆಯ ಮೂಲ ಸಂಸ್ಥಾಪಕ ಡಿ.ಎಲ್.ನಟರಾಜ್, ಮಾರ್ಕೆಟಿಂಗ್ ಡೈರೆಕ್ಟರ್ ಶಿವರಾಜ್ ಉಡುಗಣಿ, ಟಿ.ಎಸ್. ಬದರೀನಾಥ್, ರಮೇಶ್ ಎಂ.ಭಟ್, ಸಂಸ್ಥೆಯ ಎಲ್ಲಾ ನಿರ್ದೇಶಕರು ಸಿಬ್ಬಂದಿ ವರ್ಗ ಹಾಜರಿದ್ದರು.