Karnataka Drama Academy ಎರಡು ದಶಕಗಳಿಂದ ಶಿವಮೊಗ್ಗ ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ, ಹಾಲಿ ಕರ್ನಾಟಕ ನಾಟಕ ಅಕಾಡೆಮಿ ಶಿವಮೊಗ್ಗ ಜಿಲ್ಲಾ ಸಂಚಾಲಕರೂ ಆಗಿರುವ ಡಾ. ಗಣೇಶ ಆರ್ ಕೆಂಚನಾಲ್ ಅವರ ರಚನೆಯ “ಉಡು-ತಡಿ” ನಾಟಕ ಪುಸ್ತಕ ರೂಪದಲ್ಲಿ ಇದೇ ಫೆಬ್ರವರಿ ತಿಂಗಳ 18 ರಂದು ಸಂಜೆ 6:30 ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ.
ಈಗಾಗಲೆ 4 ಯಶಸ್ವೀ ಪ್ರದರ್ಶನಗೊಂಡು ಅಂದು 5ನೇ ಪ್ರದರ್ಶನ ಕೂಡ ಕಾಣಲಿದೆ. ಈ ನಾಟಕ ಕುರಿತು ಈ ಬಾರಿ ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪನವರು, ಕುವೆಂಪು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಡಾ. ಜಿ. ಪ್ರಶಾಂತ ನಾಯಕ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ನಾಗರಾಜಮೂರ್ತಿ, ವಿಶಾಂತ ಪ್ರಾಧ್ಯಾಪಕಿ ಡಾ. ವಿಜಯಾದೇವಿ ಅವರು ತಮ್ಮ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು. ಡಾ. ಬಸವ ಮರುಳಸಿದ್ದ ಸ್ವಾಮಿಗಳು, ಹಾಗೂ ಶಿವಮೊಗ್ಗ ಸಂಸದರಾದ ಬಿ.ವೈ ರಾಘವೇಂದ್ರರವರು ಶುಭ ಸಂದೇಶ ನೀಡಿರುತ್ತಾರೆ. ಈ ನಾಟಕ ಪ್ರದರ್ಶನ ಮತ್ತು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೆಚ್ಚು ರಂಗಾಸಕ್ತರು ಹಾಗೂ ಸಾಹಿತ್ಯ ಪ್ರೇಮಿಗಳು ಆಗಮಿಸಲು ಕೋರಿದೆ.
“ನಾಟಕಕ್ಕೊಂದು ಪುಸ್ತಕ” ನೀಡಲು ತೀರ್ಮಾನಿಸಿದ್ದು ಮಾಹಿತಿಗಾಗಿ ಸಂಪರ್ಕ ಸಂಖ್ಯೆ-9902356019-9481691337-9980182281