DC Shivamogga ಕೈಗಾರಿಕಾ ಪ್ರದೇಶಗಳಲ್ಲಿ ಕುಡಿಯುವ ನೀರು, ಬೀದಿ ದೀಪ, ಯುಜಿಡಿ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿ, ಹಂತ ಹಂತವಾಗಿ ಅಭಿವೃದ್ದಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ಕೈಗಾರಿಕಾ ಸ್ಪಂದನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಕೈಗಾರಿಕಾ ಪ್ರದೇಶಗಳನ್ನು ಹಂತ ಹಂತವಾಗಿ ಅಭಿವೃದ್ದಿಪಡಿಸಲಾಗುತ್ತಿದೆ. ಮೂಲಭೂತ ಸೌಕರ್ಯಗಳಿಗೆ ಸಂಬAಧಿಸಿದAತೆ ಪ್ರಸ್ತುತ ಇರುವ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಕುಡಿಯುವ ನೀರು, ಬೀದಿ ದೀಪ, ಯುಜಿಡಿ, ತ್ಯಾಜ್ಯ ನಿರ್ವಹಣೆಯನ್ನು ಪಾಲಿಕೆ, ಸ್ಥಳೀಯ ಸಂಸ್ಥೆಗಳ ಸಮನ್ವಯದೊಂದಿಗೆ ನಿರ್ವಹಿಸಲಾಗುವುದು ಎಂದರು.
ಕೈಗಾರಿಕಾ ಸಂಘಗಳ ಅಧ್ಯಕ್ಷರು, ಶಾಹಿ ಎಕ್ಸ್ಪೋರ್ಟ್ಸ್ ನ ಅಪಾಯಕಾರಿ ತ್ಯಾಜ್ಯ ತುಂಬಿರುವ ವಾಹನಗಳು ಮತ್ತು ಐಓಸಿಲ್‌ನ ಅನಿಲ ತುಂಬಿರುವ ವಾಹನಗಳು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆಯನ್ನು ಬಳಸಿಕೊಳ್ಳುತ್ತಿರುವುದರಿಂದ ತೊಂದರೆಯಾಗುತ್ತಿದೆ. ಗಾರ್ಮೆಂಟ್ಸ್ನ ವಾಯುಮಾಲಿನ್ಯ ಮತ್ತು ಜಲ ಮಾಲಿನ್ಯ ನಿಯಂತ್ರಿಸಲು ಕ್ರಮ ವಹಿಸಬೇಕು. ಹಾಗೂ ಜಿಟಿಟಿಸಿ ಆವರಣದ ಮುಂದೆ ಮತ್ತು ಇಲ್ಲಿರುವ ಕ್ಯಾಂಟಿನ್ ಬಳಿ ಐಓಸಿಲ್‌ನ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದನ್ನು ನಿಯಂತ್ರಿಸಬೇಕೆಂದು ಕೋರಿದರು.
ಜಿಲ್ಲಾಧಿಕಾರಿಗಳು, ಶಾಹಿ ಎಕ್ಸ್ಪೋರ್ಟ್ಸ್ ಮತ್ತು ಐಓಸಿಲ್ ವಾಹನಗಳನ್ನು ತಮ್ಮ ಪ್ರತ್ಯೇಕ ರಸ್ತೆಗಳಲ್ಲಿ ಬರುವಂತೆ ಕ್ರಮ ವಹಿಸಬೇಕು. ಹಾಗೂ ಅಪಾಯಕಾರಿ ತ್ಯಾಜ್ಯಗಳನ್ನು ಸಾಗಿಸುವಾಗ ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದರು. ವಾಹನಗಳನ್ನು ಸಮರ್ಪಕವಾಗಿ ನಿಲುಗಡೆಯಲ್ಲಿಯೇ ನಿಲ್ಲಿಸುವಂತೆ ಸೂಚನೆಗಳನ್ನು ನೀಡಬೇಕೆಂದು ತಿಳಿಸಿದರು.
ಶಾಹಿ ಎಕ್ಸ್ಪೋರ್ಟ್ ಸುತ್ತಮುತ್ತಲ ಪ್ರದೇಶದಲ್ಲಿ ಆಸಿಡ್ ವಾಸನೆ ಬರುತ್ತಿದೆ ಎಂಬ ದೂರು ಸಹ ಇದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಹಾಗೂ ಶಾಹಿ ಎಕ್ಸ್ಪೋರ್ಟ್ಸ್ನವರು ವಾಸನೆ ಬಾರದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದರು.
ಇ-ಖಾತಾ : ಶಿವಮೊಗ್ಗ ಆಟೋ ಕಾಂಪ್ಲೆಕ್ಸ್ನಲ್ಲಿ ನಿವೇಶನ ಹಾಗೂ ಕಟ್ಟಡಗಳ ಇ-ಖಾತಾ ಮಾಡಿಸಲು ತೊಂದರೆಯಾಗುತ್ತಿದೆ. ಸುಮಾರು 27 ವರ್ಷಗಳ ಹಿಮದೆ ಕೆಐಎಡಿಬಿ ಯಿಂದ ಅಭಿವೃದ್ದಿ ಪಡಿಸಿದ ಈ ಪ್ರದೇಶವನ್ನು ಒಂದೆರಡು ವರ್ಷಗಳ ಹಿಂದೆ ಪಾಲಿಕೆಗೆ ಹಸ್ತಾಂತರವಾಗಿವೆ. ಪಾಲಿಕೆಯವರು ಇ-ಖಾತಾ ಮಾಡಿಸಲು ಅನುಮತಿ ಪತ್ರ ಕೇಳುತ್ತಿದ್ದಾರೆ, ದಿಕ್ಕುಗಳಲ್ಲಿ ವ್ಯತ್ಯಾಸವಿದೆ ಎಂದೆಲ್ಲ ಹೇಳುತ್ತಿದ್ದಾರೆ. ಈ ಸಮಸ್ಯೆಗಳನ್ನು ಬಗೆಹರಿಸಿ ಇ-ಖಾತಾ ಮಾಡಿಸಿಕೊಡಬೇಕೆಂದು ಕೈಗಾರಿಕೋದ್ಯಮಿಗಳು ಕೋರಿದರು.
DC Shivamogga ಭದ್ರಾವತಿ ಇಂಡಸ್ಟಿçಯಲ್ ಎಸ್ಟೇಟ್‌ನಲ್ಲಿ ಬೌಂಡ್ರಿ ಫೆನ್ಸಿಂಗ್, ಅಸಮರ್ಪಕ ಬೆಳಕು, ಕೆಲವು ಆಂತರಿಕ ರಸ್ತೆಗಳ ದುರಸ್ತಿ ಇದೆ. ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬೀದಿ ದೀಪಗಳು ದುರಸ್ತಿಯಲ್ಲಿವೆ. ಹಾಗೂ ಪಾಲಿಕೆಯಿಂದ ಕೈಗಾರಿಕೆಗಳಿಗೆ ಸಮರ್ಪಕ ಮತ್ತು ನಿಯಮಿತವಾಗಿ ನೀರು ಪೂರೈಕೆಯಾಗುತ್ತಿಲ್ಲ. ಕನಿಷ್ಟ 2 ಗಂಟೆ ನೀರು ಬಿಡಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಇ-ಖಾತಾ, ಕುಡಿಯುವ ನೀರು, ಯುಜಿಡಿ ಸೇರಿದಂತೆ ಪಾಲಿಕೆ ಸಮಸ್ಯೆಗಳ ಕುರಿತು ಆಯುಕ್ತರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಒಂದೊಂದೇ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಭದ್ರಾವತಿ ಇಂಡಸ್ಟಿçಯಲ್ ಎಸ್ಟೇಟ್‌ನಲ್ಲಿ ಭದ್ರಾವತಿ ನಗರಸಭೆ ವತಿಯಿಂದ ಆದ್ಯತೆ ಮೇರೆಗೆ ಫೆನ್ಸಿಂಗ್ ಮತ್ತು ಬೀದಿ ದೀಪ ಇತರೆ ಕೆಲಸಗಳನ್ನು ಹಂತ ಹಂತವಾಗಿ ಮಾಡುವಂತೆ ಸೂಚಿಸಿದರು.
ಸಾಗರ ರಸ್ತೆ ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ವಸಾಹತು ಪಾಲಿಕೆಗೆ ಹಸ್ತಾಂತರವಾಗಿದ್ದು ವಸಾಹತುವಿನ ನಿರ್ವಹಣೆಯನ್ನು ಮಾಡಬೇಕು. ನಾವು ಸಮರ್ಪಕವಾಗಿ ತೆರಿಗೆ ಪಾವತಿ ಮಾಡುತ್ತಿದ್ದರೂ ನಿರ್ವಹಣೆ ಆಗುತ್ತಿಲ್ಲ. ಆಟೋ ಕಾಂಪ್ಲೆಕ್ಸ್ನ ಕೈಗಾರಿಕಾ ಘಟಕಗಳಿಗೆ ಪ್ರತ್ಯೇಕ ಯುಜಿಡಿ ಸಂಪರ್ಕ ಒದಗಿಸುವಂತೆ ಹಾಗೂ ಮಾಚೇನಹಳ್ಳಿ ಆಟೋ ಕಾಂಪ್ಲೆಕ್ಸ್ ಬಳಿ ಸುಲಭ ಶೌಚಾಲಯ ನಿರ್ಮಿಸುವಂತೆ, ಕಲ್ಲೂರು-ಮಂಡ್ಲಿ ಪ್ರದೇಶದಲ್ಲಿ ಎಲೆಕ್ಟಿçಕಲ್ ಸಬ್ ಸ್ಟೇಷನ್ ನಿರ್ಮಿಸಲು ಅವಕಾಶ ಮಾಡಿಕೊಡುವಂತೆ ಕೈಗಾರಿಕೋದ್ಯಮಿಗಳು ಮನವಿ ಮಾಡಿದರು.
ಸಾಗರ ರಸ್ತೆಯ ಎಪಿಎಂಸಿ ಯಿಂದ ಆಟೋ ಕಾಂಪ್ಲೆಕ್ಸ್ವೆಗೆ ಟ್ರಾವೆಲ್ಸ್ಗಳ ಬಸ್‌ಗಳು ಪಾರ್ಕಿಂಗ್ ಮಾಡುತ್ತಿದ್ದು ಅಪಘಾತ ಮತ್ತು ಅವಘಡಗಳು ಹೆಚ್ಚುತ್ತಿವೆ ಎಂಬ ದೂರನ್ನು ಆಲಿಸಿದ ಜಿಲ್ಲಾಧಿಕಾರಿಗಳು ಎಸ್‌ಪಿ ಯವರೊಂದಿಗೆ ಮಾತನಾಡಿ, ಈ ಭಾಗದಲ್ಲಿ ಟ್ರಾವೆಲ್ಸ್ ಬಸ್, ವಾಹನಗಳು ಪಾರ್ಕಿಂಗ್ ಮಾಡದಂತೆ ಕ್ರಮ ವಹಿಸಲು ಕೋರಿದರು.
ಮಾಚೇನಹಳ್ಳಿ ಮತ್ತು ಇತರೆ ಕೈಗಾರಿಕಾ ಪ್ರದೇಶಗಳಲ್ಲಿ ಸೊಳ್ಳೆಗಳು ಹೆಚ್ಚಿದ್ದು, ಪ್ರದೇಶದ ಸುತ್ತಮುತ್ತ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ವತಿಯಿಂದ ಫಾಗಿಂಗ್ ಮಾಡಿಸಲಾಗುವುದು. ಜ್ವರದಂತಹ ಲಕ್ಷಣಗಳು ಕಂಡುಬAದಲ್ಲಿ ಸ್ವಂತ ಔಷಧಿ ತೆಗೆದುಕೊಳ್ಳದೆ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲೆಯ ವಿವಿಧ ಕೈಗಾರಿಕಾ ವಸಾಹತುವಿನಲ್ಲಿ ಖಾಲಿ ಇರುವ ನಿವೇಶನ/ಮಳಿಗೆಗಳ ಅರ್ಜಿ ಪರಿಶೀಲಿಸಿ ಲಾಟರಿ ಮೂಲಕ ನಿವೇಶನ ಮತ್ತು ಮಳಿಗೆಗಳನ್ನು ಹಂಚಿಕೆ ಮಾಡಲಾಯಿತು.
ಸಭೆಯಲ್ಲಿ ಜಿ.ಪಂ ಸಿಇಓ ಹೇಮಂ ಎನ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಗಣೇಶ್, ಕೆಐಎಡಿಬಿ ಕಾರ್ಯಪಾಲಕ ಅಭಿಯಂತರ ನಾರಾಯಣಪ್ಪ, ಕರ್ನಾಟಕ ನಗರ ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರರು, ಪರಿಸರ ಅಧಿಕಾರಿಗಳು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಜಿಲ್ಲಾ ಕೈಗಾರಿಕಾ ಸಂಘ, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ ಕೈಗಾರಿಕೋದ್ಯಮಿಗಳ ಸಂಘ, ಕೆಎಸ್‌ಎಸ್‌ಐಡಿಸಿ ಸಂಘ, ಆಟೋ ಕಾಂಪ್ಲೆಕ್ಸ್ ಅಸೋಸಿಯೇಷನ್ ನ ಅಧ್ಯಕ್ಷರುಗಳು, ಪದಾಧಿಕಾರಿಗಳು, ಅಧಿಕಾರಿಗಳು ಹಾಜರಿದ್ದರು.