Sri Ranganatha Seva Samiti ಹೊಳೆಹಟ್ಟಿ ಗ್ರಾಮದಲ್ಲಿ ಶ್ರೀ ರಂಗನಾಥ ಸೇವಾ ಸಮಿತಿ ವತಿಯಿಂದ ಫೆ. 8ರಿಂದ 10ರವರೆಗೆ ಶ್ರೀ ಕಾಡ ವೀರಭದ್ರೇಶ್ವರ ಸ್ವಾಮಿ, ಶ್ರೀ ಪಾರ್ವತಿ ದೇವಿ ಪ್ರಾಣ ಪ್ರತಿಷ್ಠಾಪನೆ, ಶ್ರೀ ರಂಗನಾಥ ಸ್ವಾಮಿ ಮಂದಿರ, ಮಹಾದ್ವಾರ ಪ್ರವೇಶ ಹಾಗೂ ಕಳಸಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಫೆ. 8ರ ಬೆಳಗ್ಗೆ 6ರಿಂದ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಚನ್ನಗಿರಿ ಕೇದಾರ ಶಾಖಾ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ.
ಫೆ. 9ರ ಬೆಳಗ್ಗೆ 4ರಿಂದ ಶ್ರೀ ಕಾಡ ವೀರಭದ್ರೇಶ್ವರ ಸ್ವಾಮಿ, ಶ್ರೀ ಪಾರ್ವತಿ ದೇವಿ ಪ್ರಾಣ ಪ್ರತಿಷ್ಠಾಪನೆ, ಕಳಾಸಾರೋಹಣ, ಸಂಜೆ 6ರಿಂದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಮಹಾಸುದರ್ಶನ ಹೋಮ, ಪೂಜಾ ಕಾರ್ಯಕ್ರಮಗಳು ಜರುಗಲಿವೆ.
ಫೆ. 10ರಂದು ಬೆಳಗ್ಗೆ 11ಕ್ಕೆ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಜನಜಾಗೃತಿ ಧರ್ಮ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಚನ್ನಗಿರಿ ಕೇದಾರ ಶಾಖಾ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಛಾಯಾನಗರ ಶ್ರೀ ಶನೈಶ್ಚರ ದೇವಾಲಯ ಧರ್ಮದರ್ಶಿ ಹನುಮಂತಪ್ಪ ಉಪಸ್ಥಿತರಿರುವರು.
Sri Ranganatha Seva Samiti ಪ್ರಭಾವತಿ ಆರ್.ಪ್ರಸನ್ನಕುಮಾರ್, ಸಚಿವ ಮಧು ಬಂಗಾರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕಿ ಶಾರದಾ ಪರ‍್ಯಾನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಆರ್.ಪ್ರಸನ್ನಕುಮಾರ್, ಅಶೋಕನಾಯ್ಕ್ ಮತ್ತಿತರರು ಉಪಸ್ಥಿತರಿರುವರು. ಬಿ.ಕೆ.ಶೇಖರಪ್ಪ ಅಧ್ಯಕ್ಷತೆ ವಹಿಸುವರು. ಸಿ.ಎಸ್.ಕಾಡವೀರಪ್ಪ ಪ್ರಾಸ್ತವಿಕ ಮಾತನಾಡುವರು. ಜಿ.ಎಸ್.ನಟೇಶ್ ಉಪನ್ಯಾಸ ನೀಡುವರು. ಪಿ.ಡಿ.ಚಿಕ್ಕಪ್ಪ ಹಾಜರಿರುವರು.