Monday, February 24, 2025
Monday, February 24, 2025

Klive Special Article ಆಕಾಶವಾಣಿ ಭದ್ರಾವತಿ.ವಜ್ರಮಹೋತ್ಸವ ಸಂಭ್ರಮ.ಲೇ; ಬಿ.ಎನ್.ಜ್ವಾಲನಪ್ಪ. ಮೈಸೂರು

Date:

Klive Special Article ‘ ಆಕಾಶವಾಣಿ ‘ ಸಂಸ್ಕ್ರತ ಮೂಲದ ಒಂದು ಪದ‌.ಇದರರ್ಥ ಆಕಾಶದಿಂದ ಬರುವ ‘ ಘೋಷಣೆ ‘, ಅಥವ ‘ ಸ್ವರ್ಗದಿಂದ ಬರುವ ಧ್ವನಿ”. ಯುರೋಪ್ನಲ್ಲಿ ನಡೆದ ಪುನರುತ್ಥಾನ ಕಾಲದಲ್ಲಿ ವಿಜ್ಞಾನಿ ಮಾರ್ಕೋನಿ ರೇಡಿಯೋವನ್ನು ಕಂಡು ಹಿಡಿದ. 1936 ರಲ್ಲಿ ರೇಡೀಯೋ ವಿಷಯದಲ್ಲಿ ಆಕಾಶವಾಣಿ ಶಬ್ಧವ‌ನ್ನು ಎಂ‌.ವಿ.ಗೋಪಾಲಸ್ವಾಮಿ ತಮ್ಮ ನಿವಾಸದಲ್ಲಿ ಬಾನುಲಿ ಕೇಂದ್ರ ಸ್ಥಾಪನೆಯಾದ ನಂತರ ಈ ಶಬ್ಧ ಚಾಲ್ತಿಯಲ್ಲಿ ಬಂತು.
ನಭೋಮಂಡಲದ ಪೂರ್ವದಿಕ್ಕಿನಲ್ಲಿ ವರ್ಣಮಯ ರಂಗೋಲಿಯ ಚಿತ್ತಾರವನ್ನು ಬಾನಿನಂಗಳದಲ್ಲಿ ಬಿಡಿಸುವುದರೊಂದಿಗೆ
ಮತ್ತು ಆಕಾಶವಾಣಿಯಲ್ಲಿ ಮುಂಜಾನೆ ಪ್ರಸಾರವಾಗುತ್ತಿದ್ದ ” Signature Tune ‘ ಅನ್ನು ಖುಷಿಯಿಂದ ಕಿವಿಗೊಟ್ಟು ಆಲಿಸುವುದರೊಂದಿಗೆ ನಮ್ಮೆಲ್ಲರ ದೈನಂದಿನ ಬದುಕು ಆರಂಭವಾಗುತಿತ್ತು.
ಶ್ರವ್ಯ ಮಾದ್ಯಮದಲ್ಲಿ ಅತ್ಯಂತ ಪರಿಣಾಮಕಾರಿಯಾಗಿದ್ದ ಆಕಾಶವಾಣಿಯ ಜತೆಗಿನ ನಮ್ಮೆಲ್ಲರ ಒಡನಾಟ- ಸಂಬಂಧ,ಆತ್ಮೀಯತೆ ಇಂದಿಗೂ ಕಾಡುತ್ತೆ. ಲೇಖಕರು,ಕಲಾವಿದರು,ಜಾನಪದ ಗಾಯಕರು ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಿಸಲು ಸೂಕ್ತ ವೇದಿಕೆಯನ್ನು ಒದಗಿಸಿ, ಬೊಗಸೆ ತುಂಬಾ ಕಾಸು ತುಂಬುತ್ತಿದ್ದ ಆಕಾಶವಾಣಿ ಅನೇಕರಿಗೆ ಒಂದು ರೀತಿಯ ತವರುಮನೆ. ಸದ್ದುಗದ್ದಲ ಮಾಡದೆ, ಜುಜುಬಿ ಪ್ರಚಾರದಿಂದ ದೂರವಿರುತ್ತಿದ್ದ , ಮೂಲೆ ಮೂಲೆಗಳಲ್ಲಿನ ಪ್ರತಿಭೆಗಳ ಶೋಧಿಸಿ ಅವಕಾಶ ಕಲ್ಪಿಸಿಕೊಟ್ಟದ್ದು ಆಕಾಶವಾಣಿ.
ತನ್ನ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಶೋತೃಗಳ ಮನದಂಗಳಲ್ಲಿ ಬೆಚ್ಚನೆಯ ನೆನಪು,ಸಾರ್ಥಕತೆಯ ಭಾವದ ಹಿತವಾದ ಸ್ಪರ್ಶದ ಬೀಜ ಬಿತ್ತಿದ್ದ ಆಕಾಶವಾಣಿಯ ಸಾಧನೆ ಒಂದಲ್ಲ,ಎರಡಲ್ಲ…
Klive Special Article ಸರ್ಕಾರ-ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವ ಆಕಾಶವಾಣಿ ಮಾಹಿತಿ-ಮನರಂಜನೆಯ ಆಶಯದೊಂದಿಗೆ ಅಸ್ತಿತ್ವಕ್ಕೆ ಬಂದಿದೆ.ಆಯಾ ಪ್ರದೇಶದ ಸಂಸ್ಕ್ರತಿ,ಪರಂಪರೆ,ವಾಣಿಜ್ಯ,ಕೈಗಾರಿಕೆ- ಕೃಷಿಯ ಮೇಲೆ ಬೆಳಕು ಬೀರುವಂತಹ ಉಪಯುಕ್ತ ಕಾರ್ಯಕ್ರಮಗಳನ್ನು ಬಿತ್ತರಿಸುವುದರಲ್ಲಿ ಮನೆಮಾತಾಗಿ ,ಎಲ್ಲರ ಮನವನ್ನು ಅಪಹರಿಸಿರುವ ಭದ್ರಾವತಿ ಆಕಾಶವಾಣಿಗೆ ವಜ್ರಮಹೋತ್ಸವದ ಸಂಭ್ರಮ- ದೊಡ್ಡ ಗೌರವ.ಕಳೆದೋದ ೬೦ ವರ್ಷಗಳ ಸುಧೀರ್ಘ ಅವಧಿಯಲ್ಲಿ ಆಕಾಶವಾಣಿಯ ಪ್ರಗತಿಗಾಗಿ ನಿಷ್ಠೆ , ಪ್ರಾಮಾಣಿಕತೆ , ಕಾರ್ಯತತ್ಪರತೆ ಮತ್ತು ಬದ್ದತೆಯಿಂದ ಸದಾ ಹಸನ್ಮುಖರಾಗಿ ಸೇವೆ ಸಲ್ಲಿಸಿರುವ ಅಧಿಕಾರಿ ವೃಂದ ಮತ್ತು ಸಿಬ್ಬ‌ಂದಿ ವರ್ಗವನ್ನು ನಾವಿಂದು ಸ್ಮರಿಸಬೇಕಾಗಿದೆ..
ಆಕಾಶವಾಣಿಯ ವಜ್ರಮಹೋತ್ಸವ ಸಮಾರಂಭ ಗಣ್ಯರ ,ಶೋತೃಗಳ ಉಪಸ್ಥಿತಿಯಲ್ಲಿ ಅರ್ಥಪೂರ್ಣವಾಗಿ,ಯಶಸ್ವಿಯಾಗಿ ಚಂದಗಾಣಲಿ.
ಮತ್ತೊಮ್ಮೆ ಶುಭಾಶಯ
ಶರಣುಶರಣಾರ್ಥಿ
ಬಿ.ಎನ್.ಜ್ವಾಲನಪ್ಪ
” ಪರ್ವ ” ,ರೂಪಾನಗರ
ಮೈಸೂರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಭದ್ರಾವತಿಯಲ್ಲಿ ಸಜ್ಜನರು ವಾಸಮಾಡುವಂತಹ ಪರಿಸ್ಥಿತಿಯೇ ಇಲ್ಲವಾಗಿದೆ :ಹಿತರಕ್ಷಣಾ ವೇದಿಕೆ ಮುಖ್ಯಸ್ಥ ಸುರೇಶ್

ಭದ್ರಾವತಿಯಲ್ಲಿ ಸಜ್ಜನರು ವಾಸಮಾಡುವಂತಹ ಪರಿಸ್ಥಿತಿಯೇ ಇಲ್ಲವಾಗಿದೆ. ಪೊಲೀಸ್ ಇಲಾಖೆ ಸೇರಿದಂತೆ ರಾಜಕಾರಣಿಗಳು...

ಫೆ.25 ಎಂದು ಆಶ್ರಯ ಮನೆಗಳ ಹಂಚಿಕೆ ವಿಧಾನ ಪರಿಷತ್ ಶಾಸಕಿ ಬಲ್ಕಿಶ್ ಬಾನು ಮಾಹಿತಿ

ಫೆ.25 ರಂದು ವಸತಿ ಸಚಿವ ಜಮೀರ್ ಅಹ್ಮದ್ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಗೋವಿಂದಾ...