University of Agricultural & Horticultural Sciences ಜೇನು ಸಾಕಾಣಿಕೆ ತಂತ್ರಜ್ಞಾನದಿಂದ ರೈತರ ಸಬಲೀಕರಣ ಸಾಧ್ಯವಾಗಿದ್ದು ಜೇನು ಸಾಕಾಣಿಕೆ ತರಬೇತಿಯ ಸದುಪಯೋಗವನ್ನು ರೈತರು ಪಡೆಯಬೇಕೆಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಆರ್. ಸಿ. ಜಗದೀಶ ಹೇಳಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ, ಪಿ.ಎಂ.ಇ. ಘಟಕ, ರೈv ತರಬೇತಿ ಸಂಸ್ಥೆ ಹಾಗೂ ತಾಲ್ಲೂಕು ಪಂಚಾಯತಿ, ಹೊಸನಗರ ಇವರ ಸಂಯುಕ್ತ ಆಶ್ರಯದಲ್ಲಿ ಐ.ಸಿ.ಎ.ಆರ್. ಟಿ.ಎಸ್.ಪಿ. ಯೋಜನೆ “ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಜೇನುಸಾಕಾಣೆ ಯತಂತ್ರಗಳೊAದಿಗೆ ಪರಿಶಿಷ್ಟ ಪಂಗಡಗಳ ಸಬಲೀಕರಣ” ಅಡಿಯಲ್ಲಿ ದಿನಾಂಕ ; 01-02-2025 ರಿಂದ 03-02-2025ರ ವರೆಗೆ ವಿಶ್ವವಿದ್ಯಾಲಯದ ಶರಾವತಿ ಆಡಳಿತ ಭವನದಲ್ಲಿ ಪರಿಶಿಷ್ಟ ಪಂಗಡದ ರೈತರಿಗೆ ಏರ್ಪಡಿಸಲಾಗಿರುವ “ಜೇನು ಸಾಕಾಣಿಕೆ ತರಬೇತಿ”ಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಸಿ ಅವರು ಮಾತನಾಡಿದರು.
ರೈತರಿಗೆ ಮುಕ್ತವಾಗಿರುವ ಈ ವಿಶ್ವವಿದ್ಯಾಲಯದಲ್ಲಿ ನಡೆಯುವ ಹಲವಾರು ತರಬೇತಿಗಳಲ್ಲಿ ರೈತರು ಭಾಗವಹಿಸಬೇಕೆಂದು ಕರೆ ನೀಡಿದರು. ಶಿಬಿರಾರ್ಥಿಗಳಿಗೆ ಜೇನುಸಾಕಣೆಯನ್ನು ಆಸಕ್ತಿಯಿಂದ ಮಾಡಲು ಸಲಹೆ ನೀಡಿ, ಹೆಚ್ಚು ಹೆಚ್ಚು ಜೇನುತುಪ್ಪ ಉತ್ಪಾದಿಸಲು ಸಲಹೆ ನೀಡಿದರು ಹಾಗೂ ಉತ್ಪಾದಿಸಿದ ಹೆಚ್ಚುವರಿ ಜೇನುತುಪ್ಪವನ್ನು ವಿಶ್ವವಿದ್ಯಾಲಯವೇ ಖರೀದಿಸುವುದಾಗಿ ಭರವಸೆ ನೀಡಿದರು. ಶಿಬಿರಾರ್ಥಿಗಳಿಗೆ ತರಬೇತಿ ಪ್ರಮಾಣ ಪತ್ರದೊಂದಿಗೆ ಜೇನುಸಾಕಾಣಿಕೆಗೆ ಬೇಕಾದ ಪರಿಕರಗಳನ್ನುವಿ ತರಣೆಮಾಡಿದರು.
University of Agricultural & Horticultural Sciences ಮುಖ್ಯಅಥಿತಿಗಳಾದ ಸಂಶೋಧನಾ ನಿರ್ದೇಶಕ ಡಾ. ಬಿ. ಎಂ. ದುಷ್ಯಂತಕುಮಾರ್ ಮಾತನಾಡಿ, ಸ್ವಾವಲಂಬಿ ಜೀವನಕ್ಕೆ ದಾರಿಯಾಗಿರುವ ಈ ತರಬೇತಿಯ ಸಂಪೂರ್ಣ ಪ್ರಯೋಜನವನ್ನು ಶಿಬಿರಾರ್ಥಿಗಳು ಪಡೆದುಕೊಳ್ಳಬೇಕೆಂದು ಹಾರೈಸಿದರು. ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಡಾ. ನಾರಾಯಣಎಸ್. ಮಾವರಕರ್, ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ನೋಡಲ್ ಅಧಿಕಾರಿ ಹಾಗೂ ಪ್ರಧಾನ ಪರಿಶೋಧಕರಾದ ಡಾ.ಜಯಲಕ್ಷ್ಮೀ ನಾರಾಯಣ ಹೆಗಡೆ, ಮೂರು ದಿನಗಳ ಕಾಲ ನಡೆದ ತರಬೇತಿಯ ಕುರಿತುವಿವರಣೆ ನೀಡಿದರು. ಸಹಾಯಕ ಪ್ರಾಧ್ಯಾಪಕ (ಕೃಷಿಕೀಟಶಾಸ್ತ್ರ) ಡಾ. ಕೃಷ್ಣ ರೆಡ್ಡಿ ಪಿ., ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶ್ರೀವಿಷ್ಟೇಶ ತಲಕಾಲಕೊಪ್ಪ, ಡಾ. ದರ್ಶನ್ ಆರ್, ಶ್ರೀಸುಧೀರ್, ಶ್ರೀಮನೋಹರ ಉಪಸ್ಥಿತರಿದ್ದರು. ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತಲಿನ ಹಳ್ಳಿಯ ಪರಿಶಿಷ್ಟ ಪಂಗಡಗಳ 30 ರೈತ ಮಹಿಳೆಯರು/ರೈತರು/ಯುವಕ/ಯುವತಿಯರು ಈ ತರಬೇತಿಯಲ್ಲಿಭಾಗವಹಿಸಿದ್ದರು.